Site icon Vistara News

Shivamogga Violence : ಈದ್‌ ಮೆರವಣಿಗೆಯಲ್ಲಿ ಝಳಪಿಸಿದ ತಲ್ವಾರ್‌; ಹಿಂದುಗಳಿಗೆ ರಕ್ಷಣೆ ಇಲ್ಲವೇ ಎಂದ ಜನ

Talwar in Shivamogga

ಶಿವಮೊಗ್ಗ: ಶಿವಮೊಗ್ಗದ ರಾಗಿಗುಡ್ಡದಲ್ಲಿ ಭಾನುವಾರ ನಡೆದ ಈದ್ ಮಿಲಾದ್ ಮೆರವಣಿಗೆ (Eid milad procession) ಸಂದರ್ಭದಲ್ಲಿ ಉಂಟಾದ ಗಲಾಟೆ (Shivamogga Violence) ಸೋಮವಾರ ಸ್ವಲ್ಪ ತಣ್ಣಗಾಗಿದೆ. ಆದರೆ ಭಯದ ವಾತಾವರಣ ಮುಂದುವರಿದಿದೆ. ಮೆರವಣಿಗೆ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಪೊಲೀಸರ ಮೇಲೆಯೇ ಕಲ್ಲು ತೂರಾಟ (Stone throwing incidents) ನಡೆದಿದ್ದು, ಹಿಂದುಗಳ ಏಳು ಮನೆಗಳ ಮೇಲೆ ನಡೆದ ದಾಳಿ ಮತ್ತು ಮೆರವಣಿಗೆಯಲ್ಲಿ ಬಹಿರಂಗವಾಗಿ ಕತ್ತಿ ಝಳಪಿಸಿದ್ದು (Swords openly Swayed) ಪರಿಸ್ಥಿತಿಯ ಗಂಭೀರತೆಯನ್ನು ಸಾರುತ್ತಿವೆ. ಜತೆಗೆ ಮಚ್ಚು, ಲಾಂಗುಗಳು ಇದ್ದವು ಎನ್ನುವುದು ಸಾರ್ವಜನಿಕರ ಹೇಳಿಕೆ.

ಇದರ ಜತೆಗೆ ಶಿವಮೊಗ್ಗದಲ್ಲಿ ನಡೆದಿರುವುದು ಸಣ್ಣ ಗಲಾಟೆ ಎಂಬ ಗೃಹ ಸಚಿವ ಜಿ. ಪರಮೇಶ್ವರ್‌ (G Parameshwara) ವಿರುದ್ಧ ಬಿಜೆಪಿ ನಾಯಕರು ಹಾಗೂ ಶಿವಮೊಗ್ಗ ಜನರು ತಿರುಗಿಬಿದ್ದಿದ್ದಾರೆ.

ಮಲೆನಾಡು ಜಿಲ್ಲೆಐಾದ ಶಿವಮೊಗ್ಗದಲ್ಲಿ ಸ್ವಲ್ಪ ಹೆಚ್ಚುಕಮ್ಮಿಯಾದರೂ ಕೋಮು ಸಂಘರ್ಷ ನಡೆಯುತ್ತದೆ ಎನ್ನುವುದು ಹಲವಾರು ಬಾರಿ ಸಾಬೀತಾಗಿದೆ. ಅದರಂತೆ, ಭಾನುವಾರ ನಡೆದ ಈದ್ ಮಿಲಾದ್ ಹಬ್ಬದ ಮೆರವಣಿಗೆ ಸಂದರ್ಭದಲ್ಲಿ ಉಂಟಾದ ಕಲ್ಲು ತೂರಾಟ ಪ್ರಕರಣ ಇದೀಗ ಇಡೀ ಶಿವಮೊಗ್ಗ ನಗರವನ್ನು ಆತಂಕದ ಪರಿಸ್ಥಿತಿಗೆ ದೂಡಿದೆ. ಎರಡು ದಿನದ ಹಿಂದಷ್ಟೇ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಶಾಂತಿಯುತವಾಗಿ ನಡೆದಿದ್ದು ಎಲ್ಲರಿಗೂ ನೆಮ್ಮದಿ ತಂದಿತ್ತು.

ಆದರೆ, ಭಾನುವಾರ ಈದ್‌ ಮಿಲಾದ್‌ ಮೆರವಣಿಗೆಯ ವೇಳೆ ರಾಗಿಗುಡ್ಡದಲ್ಲಿ ಮೆರವಣಿಗೆ ಸಂದರ್ಭದಲ್ಲಿ ಎರಡು ಕೋಮಿನವರ ನಡುವೆ ಕಲ್ಲು ತೂರಾಟ ನಡೆದಿದೆ. ಮೆರವಣಿಗೆಯಲ್ಲಿದ್ದ ಕೆಲ ಕಿಡಿಗೇಡಿಗಳು, ಮುಖಕ್ಕೆ ಕಪ್ಪು ಬಟ್ಟೆ ಮುಚ್ಚಿಕೊಂಡು, ಕೇವಲ ಹಿಂದೂಗಳ ಮನೆಗಳನ್ನೇ ಟಾರ್ಗೆಟ್ ಮಾಡಿ ಕಲ್ಲು ತೂರಾಟ ನಡೆಸಿದ್ದಾರೆ. ಕಿಟಕಿ, ಬಾಗಿಲುಗಳು ಕಲ್ಲಿನಿಂದ, ಮಚ್ಚಿನಿಂದ ಜಖಂಗೊಳಿಸಿದ್ದರೆ, ವಾಹನಗಳ ಮೇಲೆ ಕಲ್ಲು ಎತ್ತಿ ಹಾಕಿ ಕ್ರೌರ್ಯ ಮೆರೆದಿದ್ದಾರೆ. ಅಲ್ಲದೇ, ಹಿಂದೂಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ಇದು ಇಲ್ಲಿನ ಸ್ಥಳಿಯರಲ್ಲಿ ಆತಂಕ ಮನೆ ಮಾಡಿದ್ದು, ಹೇಗಪ್ಪಾ ನಾವು ಜೀವನ ನಡೆಸೋದು ಅಂತಾ ಪ್ರಶ್ನಿಸುತ್ತಿದ್ದಾರೆ.

ಆಸ್ಪತ್ರೆಗೆ ಬಿಜೆಪಿ ನಾಯರ ಭೇಟಿ, ಸರ್ಕಾರದ ಮೇಲೆ ಆಕ್ರೋಶ

ಗಲಭೆ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರನ್ನು ಮಾಜಿ ಡಿಸಿಎಂ ಈಶ್ವರಪ್ಪ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಅವರು ಕೂಡಾ ಮನೆ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ.

ಈಶ್ವರಪ್ಪ ಅವರು ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಿವಮೊಗ್ಗದಲ್ಲಿ ಪೊಲೀಸ್ ವ್ಯವಸ್ಥೆ ಸರಿಯಿಲ್ಲ, ರಾಜ್ಯ ಸರ್ಕಾರ ತಲೆ ತಗ್ಗಿಸಬೇಕೆಂದು ಆಗ್ರಹಿಸಿದ ಅವರು ಗೃಹಮಂತ್ರಿ ಪರಮೇಶ್ವರ್ ರಾಜಿನಾಮೆಗೆ ಆಗ್ರಹಿಸಿದರು.

ಮೆರವಣಿಗೆಯಲ್ಲಿ ತಲ್ವಾರ್ ಹಿಡಿದು ಯಾರಿಗೆ ಎಚ್ಚರಿಕೆ ಕೊಡುತ್ತಿದ್ದಿರಾ ಎಂದು ಗರಂ ಆದ ಮಾಜಿ ಡಿಸಿಎಂ ಈಶ್ವರಪ್ಪ. ರಾಜ್ಯ ಸರ್ಕಾರಕ್ಕೆ ಪೊಲೀಸರು ಹೆದರಿದ್ದು, ಪೊಲೀಸರು ಅನ್ ಫಿಟ್ ಆಗಿದ್ದಾರೆಂದು ಟೀಕಿಸಿದರು.

ಗಲಭೆ ವೇಳೆ ಉಂಟಾಗಿರುವ ಆಸ್ತಿಪಾಸ್ತಿಗಳ ವೀಕ್ಷಣೆ ಮಾಡಿದ ಶಾಸಕ ಚೆನ್ನಬಸಪ್ಪ ಘಟನೆ ಮರುಕಳಿಸದಂತೆ, ಪೊಲೀಸರು ನಿಗಾ ವಹಿಸಬೇಕಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದಿದ್ದಾರೆ. ಗಲಭೆ ಕುರಿತು ಪ್ರತಿಕ್ರಿಯಿಸಿರುವ ಸಂಸದ ರಾಘವೇಂದ್ರ ಆತಂಕ ವ್ಯಕ್ತಪಡಿಸಿದ್ದು, ಇದು ಹೊರಗಿನವರ ಕೈವಾಡ ಇರಬಹುದೆಂದು ಅನುಮಾನಿಸಿದ್ದಾರೆ.

ಗಲಭೆ ವೇಳೆ ತಲ್ವಾರ್, ಮಚ್ಚುಗಳು ಝಳಪಿಸಿರುವುದನ್ನು ಬೊಟ್ಟು ಮಾಡಿರುವ ಕೆ.ಎಸ್‌. ಈಶ್ವರಪ್ಪ ಅವರು ಎಎ ಸರ್ಕಲ್ ನಲ್ಲಿ ಎರಡು ಚೂಪಿರುವ ಕತ್ತಿಯ ಪ್ರತಿಕೃತಿ ಇಡಲು ಅವಕಾಶ ಕೊಟ್ಟಿದ್ದನ್ನು ಖಂಡಿಸಿದರು ಈ ಮೂಲಕ ಏನು ಸಂದೇಶ ಕೊಡಲು ಹೊರಟಿದ್ದಿರಾ ಅಂತಾ ಪ್ರಶ್ನಿಸಿದ್ದಾರೆ. ಕತ್ತಿಯ ಪ್ರತಿಕೃತಿ ತೆರವು ಮಾಡಿ ಅದಕ್ಕೆ ಕಾರಣರಾದವರನ್ನು ಬಂಧಿಸದೇ ಹೋದರೆ, ಪರಿಣಾಮ ಸರಿಯಿರಲ್ಲ ಎಂದು ಪೊಲೀಸರಿಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ, ಶಿವಮೊಗ್ಗದಲ್ಲಿ ಸಂಚರಿಸಿರುವ ಹೊರ ರಾಜ್ಯದ ನೋಂದಣಿ ಹೊಂದಿರುವ ಮಾರುತಿ ವ್ಯಾನ್ ಗಳು ಯಾರದ್ದು, ಏಕೆ ಬಂದಿವೆ ಎಂದು ಈಶ್ವರಪ್ಪ ಪ್ರಶ್ನಿಸಿದರು.

Exit mobile version