Site icon Vistara News

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Sigandur launch

ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿತ ಹಿನ್ನೆಲೆಯಲ್ಲಿ ಸಿಗಂದೂರು ಲಾಂಚ್‌ನಲ್ಲಿ (Sigandur launch) ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಸದ್ಯಕ್ಕೆ ಲಾಂಚ್‌ನಲ್ಲಿ ಬೈಕ್ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಮಳೆ ಕೊರತೆ ಮುಂದುವರಿದ ಹಿನ್ನೆಲೆಯಲ್ಲಿ ಶಿವಮೊಗ್ಗದ ಸಾಗರ ತಾಲೂಕಿನ ಶರಾವತಿ ಹಿನ್ನೀರು ಭಾಗದಲ್ಲಿರುವ ಲಾಂಚ್ ಸಂಚಾರ ಸೇವೆ ಸ್ಥಗಿತವಾಗಿದೆ. ಎರಡು ಬದಿಯಲ್ಲಿ ಪ್ಲಾಟ್ ಫಾರ್ಮ್‌ಕ್ಕಿಂತ ನೀರು ಕಡಿಮೆ ಆದ ಹಿನ್ನೆಲೆಯಲ್ಲಿ ಸಂಚಾರ ನಿರ್ಬಂಧ ಮಾಡಲಾಗಿದೆ. ಮಳೆ ಬಾರದೆ ಇದ್ದರೆ 16 ದಿನದಲ್ಲಿ ಸಂಪೂರ್ಣವಾಗಿ ಎಲ್ಲ ವಾಹನಗಳು ಹಾಗೂ ಸಾರ್ವಜನಿಕ ಪ್ರವೇಶವು ಬಂದ್ ಆಗಲಿದೆ ಎನ್ನಲಾಗಿದೆ.

ಶರಾವತಿ ಹಿನ್ನೀರು ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಈ ಲಾಂಚ್‌ ಸಂಪರ್ಕ ಕಲ್ಪಿಸಲಿದೆ. ಜತೆಗೆ ಸಾಗರ ತಾಲೂಕಿನ ಕಳಸವಳ್ಳಿ ಮತ್ತು ಅಂಬರಗೋಡ್ಲು, ಕರೂರು, ಬಾರಂಗಿ ಹೋಬಳಿಯ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಲಾಂಚ್ ಇದಾಗಿದೆ. ಲಾಂಚ್ ಸಂಪೂರ್ಣ ಸ್ಥಗಿತಗೊಂಡರೆ 90 ಕಿಲೋ ಮೀಟರ್ ಸುತ್ತಿ ಪ್ರಯಾಣಿಸುವ ಅನಿವಾರ್ಯತೆ ಇದೆ. ಇತ್ತ ಭಾರಿ ವಾಹನ ನಿರ್ಬಂಧದಿಂದ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಗಾಗಿ ಸ್ಥಳೀಯರು ಮತ್ತು ಪ್ರವಾಸಿಗರು ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ: Karnataka Rain : ಆಗುಂಬೆಯಲ್ಲಿ ದುರಂತ; ಅಡಿಕೆ ತೋಟದಲ್ಲಿ ಕಳೆ ಕೀಳುವಾಗ ಸಿಡಿಲು ಬಡಿದು ವ್ಯಕ್ತಿ ಸಾವು

Karnataka Rain : ಮಳೆ ಶುರುವಾದರೆ ಸಾಕು ಗೋಕಾಕ ಜನರಿಗೆ ಗುಡ್ಡದ ಭೂತದ ಕಾಟ!

ಬೆಳಗಾವಿ: ಬೆಳಗಾವಿಯ ಗೋಕಾಕ ತಾಲೂಕಿನ ಗೋಕಾಕ ಕೊಣ್ಣೂರ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಡ್ಡದ ಭೂತದ ಕಾಟ (Karnataka Rain) ಶುರುವಾಗಿದೆ. ಅದು ಕೂಡ ಮಳೆ ಪ್ರಾರಂಭವಾಗುತ್ತಿದ್ದಂತೆ ಗೋಕಾಕ ಜನರಿಗೆ ಗುಡ್ಡದ ಭೂತದ ಕಾಟ ಹೆಚ್ಚಾಗುತ್ತದೆ. ಇಷ್ಟಕ್ಕೂ ಏನಿದು ಗುಡ್ಡದ ಭೂತದ ಕಾಟ ಅಂದರೆ ಗೋಕಾಕ ಬೆಟ್ಟದಿಂದ ದೊಡ್ಡ ದೊಡ್ಡ ಬಂಡೆಕಲ್ಲುಗಳು ಉರುಳಿ ಬೀಳುತ್ತಿವೆ.

karnataka rain

ಗೋಕಾಕ ಹಾಗೂ ಕೊಣ್ಣೂರು ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯೆ ಬಂಡೆಗಳು ಉರುಳಿ ಬೀಳುತ್ತಿವೆ. ಬೆಟ್ಟದಿಂದ ಉರುಳುತ್ತಿರುವ ಬಂಡೆಗಳಿಂದ ಸವಾರರು, ಜನರು ಭಯಭೀತರಾಗಿದ್ದಾರೆ. ಮಳೆಯಿಂದಾಗಿ ಬಂಡೆಗಳ ಕೆಳಗಿನ ಮಣ್ಣು ಕುಸಿಯುತ್ತಿದೆ. ಇದರಿಂದಾಗಿ ಬಂಡೆ ಕಲ್ಲುಗಳು ರಸ್ತೆಗೆ ಬಂದು ಬೀಳುತ್ತಿವೆ. ರಸ್ತೆಯಲ್ಲಿ ಸಂಚರಿಸುವವರು ಪ್ರಾಣ ಭಯದಲ್ಲೇ ಓಡಾಡುವಂತಾಗಿದೆ.

karnataka rain

ಕೊಚ್ಚಿ ಹೋದ ಬೈಕ್‌

ವಿಜಯಪುರದಲ್ಲಿ ನಿನ್ನೆ ಗುರುವಾರ ತಡರಾತ್ರಿ ಸುರಿದ ಭಾರಿ ಮಳೆಗೆ ನದಿ, ಹಳ್ಳಗಳು ತುಂಬಿ ಹರಿಯುತ್ತಿದೆ. ವಿಜಯಪುರ ಜಿಲ್ಲೆಯ ಸಾರವಾಡ ಗ್ರಾಮದಲ್ಲಿ ಡೋಣಿ ನದಿ ಉಕ್ಕಿ ಹರಿದಿದೆ. ಪರಿಣಾಮ ಅಕ್ಕ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ವಿಜಯಪುರ ನಗರದಲ್ಲಿ ಮಳೆಯು ಅವಾಂತರವನ್ನೇ ಸೃಷ್ಟಿಸಿದೆ. ಮಳೆ ನೀರಲ್ಲಿ ಬೈಕ್‌ವೊಂದು ಕೊಚ್ಚಿ ಹೋದ ಘಟನೆ ವಿಜಯಪುರ ನಗರದ ಮನಗೂಳಿ ಅಗಸಿ ಬಳಿ ನಡೆದಿದೆ. ಉಕ್ಕಿ ಹರಿಯುತ್ತಿರುವ ಮಳೆ ನೀರಲ್ಲಿ ಬೈಕ್ ಕೊಂಡೊಯ್ಯುವ ಹರಸಾಹಸದ ವೇಳೆ ಕೊಚ್ಚಿಹೋಗಿದೆ.

ಇದನ್ನೂ ಓದಿ: Electric shock : ಶಾಲೆಗೆ ಹೋದವಳು ಮಸಣ ಸೇರಿದಳು; ಕರೆಂಟ್‌ ಶಾಕ್‌ಗೆ ಒದ್ದಾಡಿ ಪ್ರಾಣಬಿಟ್ಟಳು

ಇತ್ತ ತುಮಕೂರು ಜಿಲ್ಲೆಯಲ್ಲಿ ರಾತ್ರಿ ಧಾರಕಾರ ಸುರಿದ ಮಳೆ ರಭಸಕ್ಕೆ ಕೆರೆ, ಕಟ್ಟೆಗಳು ಕೋಡಿ ಬಿದ್ದಿದ್ದವು. ತುಮಕೂರು ಜಿಲ್ಲೆಯ ಕೊರಟಗೆರೆ ಬಳಿಯಿರುವ ಜಂಪೇನಹಳ್ಳಿ ಕೆರೆ ನೀರಿಲ್ಲದೇ ಬತ್ತಿಹೋಗಿತ್ತು. ಇದೀಗ ತುಂಬಿ ಹರಿಯುತ್ತಿದ್ದು, ರೈತರಲ್ಲಿ ಮಂದಹಾಸ ಮೂಡಿದೆ.

ಇತ್ತ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಕೃಷ್ಣಾ ನದಿ ಉಗಮ ಸ್ಥಾನ ಮಹಾಬಲೇಶ್ವರದಲ್ಲಿ ಭಾರೀ ಮಳೆ ಹಿನ್ನೆಲೆ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭವಾಗಿದೆ. ಈ ವರ್ಷದ ಮೊದಲ ಒಳಹರಿವು 1,768 ಕ್ಯೂಸೇಕ್ ದಾಖಲಾಗಿದ್ದು, ಕೃಷ್ಣಾ ನದಿ ಪಾತ್ರದ ಜನರು ಸಂತಸಗೊಂಡಿದ್ದಾರೆ. ಕಳೆದ ವರ್ಷ ಜೂನ್ ಕಳೆದರು ಒಳಹರಿವು ಇರಲಿಲ್ಲ. ಈ ವರ್ಷ ಜೂನ್ ಮೊದಲ ವಾರವೇ ಒಳಹರಿವು ಆರಂಭವಾಗಿದೆ.

ಗ್ರಾಮಕ್ಕೆ ರಭಸವಾಗಿ ನುಗ್ಗಿದ ನೀರು

ಚಿತ್ರದುರ್ಗ ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಕೂನಬೇವು ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ವರುಣ ಅಬ್ಬರಕ್ಕೆ ಕೊನಬೇವು ಗ್ರಾಮ ಜಲಾವೃತಗೊಂಡಿತ್ತು. ಗ್ರಾಮದ ರಸ್ತೆಯಲ್ಲಿ ನೀರು ನದಿಯಂತೆ ಹರಿದಿತ್ತು. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಚಿತ್ರದುರ್ಗ ತಾಲೂಕಿನ ಬೆಳಘಟ್ಟ ಗ್ರಾಮದಲ್ಲಿ ನೀರಿನಲ್ಲಿ ಬಸ್ ಸಿಲುಕಿದ ಘಟನೆಯು ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version