Site icon Vistara News

Sirsi News: ಶಿರಸಿ ತೋಟಗಾರ್ಸ್‌ ಸೊಸೈಟಿ ಆಡಳಿತ ಮಂಡಳಿಗೆ ಗೋಪಾಲಕೃಷ್ಣ ವೈದ್ಯ ಬಣ ಆಯ್ಕೆ

gopalakrishna vaidya sirsi

ಶಿರಸಿ: ಇಲ್ಲಿನ ಪ್ರತಿಷ್ಠಿತ ತೋಟಗಾರ್ಸ್ ಸೇಲ್ ಸೊಸೈಟಿ (Totagars Co Operative Sale Society – ಟಿಎಸ್ಎಸ್) ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ (election) ಹಾಲಿ ಆಡಳಿತ ಮಂಡಳಿ ಸೋಲು ಅನುಭವಿಸಿದೆ. 15 ಸ್ಥಾನಗಳಲ್ಲಿ 14 ಸ್ಥಾನಗಳಲ್ಲಿ ಗೋಪಾಲಕೃಷ್ಣ ವೈದ್ಯ ಬಣ ಗೆಲುವು ಸಾಧಿಸಿದೆ.

ಸೊಸೈಟಿಯ‌ 15 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು. ಬೆಳಗ್ಗೆ 9 ಗಂಟೆಯಿಂದ ಆರಂಭವಾದ ಮತದಾನ ಪ್ರಕ್ರಿಯೆ‌ ಸಂಜೆ 5 ಗಂಟೆಗೆ ಮುಕ್ತಾಯವಾಯಿತು. ಒಟ್ಟು 3543 ಶೇರುದಾರರಿರುವ ಸದಸ್ಯರಲ್ಲಿ 3145 ಮಂದಿ ಸದಸ್ಯರು ಮತದಾನ ಮಾಡಿದ್ದರು.

ಸಂಸ್ಥೆಯ ಹಾಲಿ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಬಣ ಹಾಗೂ ಮುಂಡಗನಮನೆ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಬಣದ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ಹೀಗಾಗಿ ಸಂಸ್ಥೆಯ ಚುನಾವಣೆ ತೀವ್ರ ಕುತೂಹಲ ಮೂಡಿಸಿತ್ತು. ಮಂಡಳಿಯ 15 ಸ್ಥಾನಗಳಿಗೆ 32 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ತಡರಾತ್ರಿ 1.30ಕ್ಕೆ ನಡೆದ ಮತ ಎಣಿಕೆಯಲ್ಲಿ ಗೋಪಾಲಕೃಷ್ಣ ವೈದ್ಯ, ಗಣಪತಿ ಜೋಷಿ, ದತ್ತಗುರು ಹೆಗಡೆ ಕಡವೆ, ಪುರುಷೋತ್ತಮ ಹೆಗಡೆ, ಎಂ.ಎನ್ ಭಟ್, ವಸಂತ ಹೆಗಡೆ, ಅಶೋಕ ಹೆಗಡೆ, ರವೀಂದ್ರ ಹೆಗಡೆ ಹಿರೇಕೈ, ರವಿ ಹಳದೋಟ, ಕೃಷ್ಣ ಹೆಗಡೆ, ವೀರೇಂದ್ರ ಗೌಡರ್, ಸಂತೋಷ್ ಭಟ್, ದೇವೇಂದ್ರ ನಾಯ್ಕ, ನಿರ್ಮಲಾ ಭಟ್, ವಸುಮತಿ ಭಟ್ ಆಯ್ಕೆಯಾದರು.

ಗೋಪಾಲಕೃಷ್ಣ ವೈದ್ಯ ಮುಂಡಗನಮನೆ ಸಹಕಾರಿ ಸಂಘ ಅಧ್ಯಕ್ಷರಾಗಿ 30 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಪ್ರತಿಕ್ರಿಯೆ ನೀಡಿದ ವೈದ್ಯ, ರೈತರ ಜೀವನಾಡಿಯಾಗಿರುವ ಟಿಎಸ್ಎಸ್‌ ಉಳಿಸುವುದು ನಮ್ಮ ಉದ್ದೇಶವಾಗಿತ್ತು. ಹಾಗಾಗಿ ನಾವು ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆವು. ನಮ್ಮ ಮೇಲೆ ವಿಶ್ವಾಸವಿಟ್ಟು ಮತದಾನ ಮಾಡಿದ್ದಾರೆ ಹಾಗೂ ಗೆಲ್ಲಿಸಿದ್ದಾರೆ. ಇಷ್ಟೊಂದು ಸ್ಥಾನಗಳು ಗೆಲುವನ್ನು ನಿರೀಕ್ಷೆ ಮಾಡಿರಲಿಲ್ಲ. ಮತದಾರರು ಇಟ್ಟಂತಹ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ರೈತರ ಪರವಾಗಿ ಆಡಳಿತವನ್ನು ನಡೆಸಲಿದ್ದೇವೆ ಎಂದರು.

ಇದನ್ನೂ ಓದಿ: Sirsi News: ಶಿರಸಿಯಲ್ಲಿ ಇನ್ನೂ ಅನುಷ್ಠಾನಗೊಳ್ಳದ ಸಂಚಾರ ಪೊಲೀಸ್ ಠಾಣೆ; ವಾಹನ ದಟ್ಟಣೆ ಕಿರಿಕಿರಿ

Exit mobile version