ರಿಪ್ಪನ್‌ಪೇಟೆ: ಜಾನುವಾರುಗಳಿಗೆ ಬಾಧಿಸಿರುವ ಚರ್ಮ ಗಂಟು ರೋಗ ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯಲ್ಲಿ ಮೊದಲ ಬಲಿ ಪಡೆದಿದೆ.
ಕರಿಗೆರಸು ಗ್ರಾಮದ ಹಿಂಡ್ಲೆಮನೆ ಶ್ರೀನಿವಾಸ ಹೆಚ್.ಕೆ ಎಂಬವವರಿಗೆ ಸೇರಿದ ಸುಮಾರು 25 ಸಾವಿರ ರೂ. ಬೆಲೆಬಾಳುವ ಹೋರಿಯೊಂದು ಕಳೆದ ನಾಲ್ಕೈದು ದಿನಗಳಿಂದ ಚರ್ಮ ಗಂಟು ರೋಗದಿಂದ ಬಳಲುತ್ತಿತ್ತು. ಪಶುವೈದ್ಯರು ಭೇಟಿ ನೀಡಿ ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದು ಕೋಡೂರು ಗ್ರಾಪಂ ವ್ಯಾಪ್ತಿಯಲ್ಲಿ ಇದು ಮೊದಲ ಬಲಿಯಾಗಿದೆ.
ಘಟನಾ ಸ್ಥಳಕ್ಕೆ ಕೋಡೂರು ಪಶು ಆಸ್ಪತ್ರೆಯ ವೈದ್ಯ ಪಣಿರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಮಲೆನಾಡು ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಹರಡಿರುವ ಚರ್ಮ ಗುಂಟು ರೋಗದಿಂದ ರೈತರಲ್ಲಿ ಆತಂಕ ಮನೆ ಮಾಡಿದೆ. ಕೋಡೂರು ಗ್ರಾಪಂ ವ್ಯಾಪ್ತಿಯಲ್ಲಿ ಜಾನುವಾರುಗಳಲ್ಲಿ ತೀವ್ರವಾಗಿ ಹರಡಿರುವ ಚರ್ಮ ಗಂಟು ರೋಗ ಬಾಧೆ ರೈತರನ್ನು ಚಿಂತೆಗೆ ದೂಡಿದೆ.
ಇತ್ತೀಚೆಗೆ ಚರ್ಮ ಗಂಟು ರೋಗ ಹರಡುವ ಆತಂಕದಿಂದ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಯನ್ನು ರದ್ದುಪಡಿಸಲಾಗಿದ್ದುದನ್ನು ನೆನಪಿಸಿಕೊಳ್ಳಬಹುದು.
ಇದನ್ನೂ ಓದಿ | ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆ ರದ್ದು, ರೈತರಿಗೆ ಆಘಾತ