Site icon Vistara News

Umakanth Borker : ಮಾಜಿ ಶಾಸಕ ಡಾ. ಉಮಾಕಾಂತ್ ಬಿ. ಬೋರ್ಕರ್ ನಿಧನ

#image_title

ರಿಪ್ಪನ್‌ಪೇಟೆ: ಶಿರಸಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಡಾ. ಉಮಾಕಾಂತ ಬೋರ್ಕರ್ (84) (Umakanth Borker) ಅವರು ಇಂದು ಬೆಳಗ್ಗೆ ಅರಸಾಳುನಲ್ಲಿ ನಿಧನ ಹೊಂದಿದ್ದಾರೆ.

ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ 1978ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಬೋರ್ಕರ್ ಗೆಲುವು ಸಾಧಿಸಿದ್ದರು. ಹಲವಾರು ವರ್ಷಗಳಿಂದ ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ಅರಸಾಳು ಗ್ರಾಮದಲ್ಲಿ ವಾಸಿಸುತ್ತಿದ್ದು. ಅವರ ಪತ್ನಿ ಮಂಜುಳಾ ಬೋರ್ಕರ್ ಪ್ರಮುಖ ರಾಜಕೀಯ ಪಕ್ಷವಾದ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. 1978ರಲ್ಲಿ ತುರ್ತು ಪರಿಸ್ಥಿತಿಯ ಪ್ರಭಾವದಿಂದ ಉಮಾಕಂತ್ ಕಾಂಗ್ರೆಸ್‌ನ ರೇವಣಕರ್ ಶಂಕರ್ ಪುರುಷೋತ್ತಮ್ ಅವರ ವಿರುದ್ಧ 2713 ಮತಗಳ ಅಂತರದಿಂದ ಗೆಲುವು ದಾಖಲಿದ್ದರು.

ಇದನ್ನೂ ಓದಿ: Shivamogga Rural Election Results: ಶಿವಮೊಗ್ಗ ಗ್ರಾಮಾಂತರದಲ್ಲಿ ಶಾರದೆಗೆ ಕೃಪೆ; ಮತ್ತೆ ಜೆಡಿಎಸ್‌ ತೆಕ್ಕೆಗೆ ಕ್ಷೇತ್ರ
ಉಮಾಕಾಂತ್‌ ಅವರು ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ. ಅರಸಾಳಿನ ಮೃತರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಉಮಾಕಾಂತ್ ಬೋರ್ಕರ್ ನಿಧನಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು, ಕೆಪಿಸಿಸಿ ವಕ್ತಾರ ಕಲಗೋಡು ರತ್ನಾಕರ್, ಬಿ.ಪಿ.ರಾಮಚಂದ್ರ, ಅಮ್ಮೀರ್ ಹಂಜಾ, ಅಶೀಫ್ ಭಾಷಾ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

Exit mobile version