Site icon Vistara News

Shivaraj Kumar: ನನ್ನ ಹೆಂಡತಿ ಗೆಲ್ಲಲಿ ಎಂದು ಆಸೆ ಪಟ್ಟಿದ್ದು ತಪ್ಪಾ?: ನಟ ಶಿವರಾಜ್‌ ಕುಮಾರ್‌

Shivaraj Kumar

ಶಿವಮೊಗ್ಗ: ಚುನಾವಣೆಯಲ್ಲಿ ನಾನೂ ಒಬ್ಬ ಕಾರ್ಯಕರ್ತನಾಗಿ ಕೆಲಸ‌ ಮಾಡಿದ್ದೇನೆ. ಆದರೆ ಕೆಲವರು ಅದನ್ನು ಬಣ್ಣ ಹಚ್ಚಿದ್ದಾರೆಂದು ಹೇಳಿದ್ದಾರೆ. ನಾನು ರಿಯಲ್‌ ಲೈಫ್‌ನಲ್ಲಿ ಬಣ್ಣ ಹಚ್ಚಿಲ್ಲ. ನನ್ನ ಹೆಂಡತಿ ಗೆಲ್ಲಲಿ ಎಂದು ಆಸೆ ಪಟ್ಟಿದ್ದು ತಪ್ಪಾ? ಸೋತಿದ್ದು ಬೇಸರವಾಯಿತು ಎಂದು ನಟ ಶಿವರಾಜ್‌ ಕುಮಾರ್‌ (Shivaraj Kumar) ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ಸಾರ್ವಜನಿಕವಾಗಿ ಮಾತನಾಡುವಾಗ ಭಯ ಆಗುತ್ತದೆ. ಆದರೂ ಎಲ್ಲವನ್ನೂ ಬಿಟ್ಟುಬಂದು, ನನ್ನ ಹೆಂಡತಿ‌- ಮಕ್ಕಳನ್ನು ಸಾಕುವ ಶಕ್ತಿ ನನಗಿದೆ. ಸಿನಿಮಾದಲ್ಲಿ ಸಣ್ಣ-ಪುಟ್ಟ ಪಾತ್ರಗಳು ಬರುತ್ತವೆ. ಆದರೆ, ರಾಜಕೀಯ ಆಗಿಲ್ಲ. ಪ್ರತಿಯೊಬ್ಬರಿಗೂ ಆಸೆ ಇರುತ್ತದೆ ಎಂದು ತಿಳಿಸಿದ್ದಾರೆ.

ನಿಮ್ಮೊಂದಿಗೆ ಇದ್ದಿದ್ದೆ ಖುಷಿ ವಿಚಾರ. ಜೀವನ ನಡೆಯಬೇಕು, ಸಾವಿರ ಜನ ಸಾವಿರ ಮಾತನಾಡುತ್ತಾರೆ. ನಮ್ಮ ನಿಯತ್ತು ನಮ್ಮನ್ನು ಕಾಪಾಡುತ್ತದೆ. ನನ್ನ ಜೀವನ ನಾವೇ ರೂಪಿಸಿಕೊಳ್ಳಬೇಕು. ನನ್ನ ಹೆಂಡತಿ ಗೆಲ್ಲಲಿ ಎಂದು ಅಸೆ ಪಟ್ಟಿದ್ದು ತಪ್ಪಾ? ಸೋತಿದ್ದು ಬೇಸರವಾಯಿತು. ಸೋಲೇ ಗೆಲುವಿನ‌ ಮೆಟ್ಟಿಲು, ಹತಾಷರಾಗುವ ಅವಶ್ಯಕತೆ ಇಲ್ಲ. ನಾನು ತಪ್ಪು ಮಾಡಿದರೆ ನನಗೇ ಶಿಕ್ಷೆ ಆಗುತ್ತದೆ. ಮನಸ್ಥಾಪ ತೆಗೆದುಬಿಡಿ, ತಪ್ಪು ದಾರಿಯಿಂದ ಒಳ್ಳೆಯ ದಾರಿಗೆ ಕರೆದುಕೊಂಡು ಬರಬೇಕು. ಸಾವಿರ ಜನ ಸಾವಿರ ಮಾತಾನಾಡಲಿ ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬಾರದು. ಈ ಕಿವೀಲಿ ಕೇಳಿ, ಆ ಕಿವೀಲಿ ಬಿಡಬೇಕು ಎಂದು ತಿಳಿಸಿದ್ದಾರೆ.

ಶಿವಮೊಗ್ಗ ಬಿಟ್ಟು ಹೋಗುವ ಪ್ರಶ್ನೆ ಇಲ್ಲ: ಗೀತಾ ಶಿವರಾಜ್‌ ಕುಮಾರ್

ಗೀತಾ ಶಿವರಾಜ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ದೊಡ್ಡ ಪ್ರಮಾಣದ ಮತಗಳು ಬಂದಿರುವುದು ಇದೇ‌ ಮೊದಲು. ಮತದಾರರೇ ದೇವರು, ಸಹೋದರ ಮಧು ತೀವ್ರ ಶ್ರಮ ಪಟ್ಟಿದ್ದಾರೆ. ಪತಿ ಶಿವರಾಜ್ ಕುಮಾರ್ ಕೂಡ ನನ್ನ ಜತೆಗಿದ್ದರು. ಚುನಾವಣೆ ಮಾತ್ರ ಅಲ್ಲ, ಯಾವಾಗಲೂ ಅವರು ನನ್ನ ಜತೆಗಿರುತ್ತಾರೆ. ಚುನಾವಣೆಯಲ್ಲಿ ಸೋಲಾಗಿದೆ ಎಂದು ಶಿವಮೊಗ್ಗ ಬಿಟ್ಟು ಹೋಗುವ ಪ್ರಶ್ನೆ ಇಲ್ಲ. ಇಲ್ಲೇ ಇರುತ್ತೇನೆ ಶಕ್ತಿಧಾಮ ಮಾದರಿ ಇಲ್ಲೊಂದು ಪುನರ್ವಸತಿ ಕೇಂದ್ರ ಶುರು ಮಾಡುತ್ತೇವೆ, ಮನೆ ಕೂಡ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | R Ashok: ವಾಲ್ಮೀಕಿ ನಿಗಮ ಹಗರಣದಲ್ಲಿ ಸಿದ್ದರಾಮಯ್ಯ ಮೊದಲ ಆರೋಪಿ ಎಂದ ಆರ್‌.ಅಶೋಕ್‌

ಟಾಟಾ ಬಾಯ್ ಬಾಯ್ ಏನೂ ಇಲ್ಲ, ನಿಮ್ಮೊಂದಿಗೆ ಇರಲಿದ್ದೇನೆ. ಇನ್ನೂ ಸಾಕಷ್ಟು ವಿಚಾರಗಳಿವೆ. ಆದರೆ ಅದನ್ನು ಇನ್ನೊಮ್ಮೆ ಅದನ್ನು ಬಹಿರಂಗ ಪಡಿಸುತ್ತೇನೆ. ಚುನಾವಣೆಯಲ್ಲಿ ಸೋತಿದ್ದಕ್ಕೆ ಬೇಜಾರ್ ಇಲ್ಲ, ನನ್ನ ತಂದೆಯೂ ಸೋತಿದ್ದರು. ಗೆಲ್ಲುತ್ತೇವೆ ಎಂದುಕೊಂಡಿದ್ದೆ. ಐದೂವರೆ ಲಕ್ಷ ಜನರು ಮತ ಹಾಕಿದ್ದಾರೆ ಎಂದರೆ ಸಣ್ಣ ವಿಚಾರವಲ್ಲ ಎಂದು ತಿಳಿಸಿದ್ದಾರೆ.

Exit mobile version