Site icon Vistara News

ಕಾಂಗ್ರೆಸ್‌ ತ್ಯಜಿಸುವ ಅನೇಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಶೋಭಾ ಕರಂದ್ಲಾಜೆ

ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ಒಪ್ಪಿ ಅನೇಕರು ಭಾರತೀಯ ಜನತಾ ಪಕ್ಷಕ್ಕೆ (BJP) ಸೇರ್ಪಡೆ ಆಗುತ್ತಿದ್ದು, ಕಾಂಗ್ರೆಸ್‌ ತ್ಯಜಿಸಲಿರುವವರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಸುದ್ದಿಗಾರರ ಜತೆಗೆ ಮಾತನಾಡಿದ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪಕ್ಷ. ಕಾಲಕಾಲಕ್ಕೆ ನಮ್ಮ ಪಕ್ಷವನ್ನು ಅನೇಕರು ಸೇರುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ವಿದೇಶದಲ್ಲಿಯೂ ಅಪಾರ ಗೌರವ ಸಿಗುತ್ತಿದೆ. ಮೋದಿಯವರದ್ದು ಅಭಿವೃದ್ಧಿ, ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರರಹಿತ ಆಡಳಿತ. ಅವರ ನೇತೃತ್ವವನ್ನು ಒಪ್ಪಿ ಹಲವಾರು ಜನ ಪಕ್ಷ ಸೇರ್ಪಡೆಗೊಳ್ಳುತ್ತಿದ್ದಾರೆ. ಒಳ ಜಗಳದಿಂದ ರಾಜ್ಯ ಕಾಂಗ್ರೆಸ್ ಅವನತಿಯತ್ತ ಸಾಗಿದೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ಗೆ ನೇತೃತ್ವ ಇಲ್ಲ. ಕಾಂಗ್ರೆಸನ್ನು ತ್ಯಜಿಸುವ ಹಲವಾರು ನಾಯಕರು ನಮ್ಮ ಸಂಪರ್ಕಕ್ಕೆ ಬಂದಿದ್ದಾರೆ.
ಮುಂದಿನ ದಿನಗಳಲ್ಲಿ ಹಲವಾರು ನಾಯಕರು ಬಿಜೆಪಿಯನ್ನು ಸೇರುತ್ತಾರೆ. ಬಿಜೆಪಿಗೆ ಯಾರೇ ಬಂದರೂ ಬಾಗಿಲು ತೆರೆದಿದೆ. ಕ್ರಿಮಿನಲ್ ಕೇಸು ಇದ್ದವರಿಗೆ ಬಿಜೆಪಿ ಪ್ರವೇಶಕ್ಕೆ ಅವಕಾಶ ಇಲ್ಲ ಎಂದು ತಿಳಿಸಿದರು.
ಇದನ್ನೂ ಓದಿ | JDSಗೆ ಟಕ್ಕರ್ ನೀಡಲು ಮುಂದಾದ ಲಕ್ಷ್ಮೀ ಅಶ್ವಿನ್‌ಗೌಡ: ಇಂದು BJP ಸೇರ್ಪಡೆ

ರಾಜ್ಯದಲ್ಲಿ ನಡೆದ ಗಲಭೆಗಳ ಕುರಿತು ಪ್ರತಿಕ್ರಿಯಿಸಿದ ಕರಂದ್ಲಾಜೆ, ಹಲವು ಗಲಭೆ, ಪಾಕಿಸ್ತಾನ ಜಿಂದಾಬಾದ್ ವಿಚಾರ ಎಲ್ಲಾ ಘಟನೆಗಳ ಎನ್ಐಎ ತನಿಖೆ ಆಗುತ್ತದೆ. ಈ ಘಟನೆ ಹಿಂದಿರುವ ಷಡ್ಯಂತ್ರ ಇದಕ್ಕೆ ಇರುವ ಬೆಂಬಲ ಯಾರು ಎಂಬುದರ ಕುರಿತು ತನಿಖೆ ಆಗಲಿದೆ. ಈ ರೀತಿ ಚಟುವಟಿಕೆ ಮಾಡುವವರಿಗೆ ಯಾವ ದೇಶದ ಬೆಂಬಲ ಇದೆ, ನಮ್ಮ ದೇಶದವರ ಬೆಂಬಲ ಇದ್ದರೆ ಅದು ಯಾರು ಎಂಬ ಬಗ್ಗೆ ಎನ್ಐಎ ತನಿಖೆ ಆಗಲಿದೆ ಎಂದು ಹೇಳಿದರು..

ಇದನ್ನೂ ಓದಿ | Modi in Europe | ಜರ್ಮನಿ ಚಾನ್ಸಲರ್‌ ಭೇಟಿಯಾದ ಪ್ರಧಾನಿ ಮೋದಿ

Exit mobile version