Site icon Vistara News

ಮದ್ಯ ಪ್ರೀಯರಿಗೆ ಬಿಗ್ ಶಾಕ್!

sales

ಬೆಂಗಳೂರು: ಇಂದಿನಿಂದ ಮೇ 19ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಮದ್ಯ ಖರೀದಿ ಸ್ಥಗಿತಗೊಳಿಸಲಾಗಿದೆ. ಕರ್ನಾಟಕ ರಾಜ್ಯ ಪಾನೀಯ ನಿಗಮದಿಂದ (KSBCL) ಆರಂಭವಾಗಲಿರುವ ಹೊಸ ವ್ಯವಸ್ಥೆಯ ವಿರುದ್ಧ ಮದ್ಯ ಮಾರಾಟಗಾರರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. KSBCL ಕಡೆಯಿಂದ ಮದ್ಯ ಖರೀದಿಸಲು ʼಇ-ಇಂಡೆಂಟಿಂಗ್‌ʼ ಎಂಬ ಹೊಸ ವ್ಯವಸ್ಥೆಯನ್ನು ಪರಿಚಯಿಸಲು ಸರ್ಕಾರ ಮುಂದಾಗಿದೆ.

ಸರ್ಕಾರದ ಈ ನಡೆಯನ್ನು ಖಂಡಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ಮದ್ಯ ಮಾರಾಟಗಾರರು ಮುಷ್ಕರ ನಡೆಸಲಿದ್ದಾರೆ. ಹಾಗೂ ಇದೇ ವೇಳೆ ವೈನ್ ಮರ್ಚೆಂಟ್ ಅಸೋಸಿಯೇಷನ್‌ಗಳ ಒಕ್ಕೂಟವು KSBCLನಿಂದ ಮದ್ಯ ಖರೀದಿ ಮಾಡದಿರಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಮದ್ಯ ವ್ಯಾಪಾರಿಗಳು ಒಂದು ದಿನ ಮದ್ಯ ಖರೀದಿ ಸ್ಥಗಿತಗೊಳಿಸಿ ಮುಷ್ಕರ ಜಾರಿಗೊಳಿಸಲಿದ್ದಾರೆ.

ಇಂದಿನಿಂದ ಮೇ 19ರವರೆಗೆ ನಡೆಯಲಿರುವ ಮದ್ಯ ಮಾರಾಟಗಾರರ ಮುಷ್ಕರದಲ್ಲಿ ಒಂದೊಂದು ದಿನ ರಾಜ್ಯದ ಒಂದೊಂದು ಭಾಗದಲ್ಲಿ ಮದ್ಯ ಮಾರಾಟ ಸ್ಥಗಿತಗೊಳಿಸಲಾಗಿದೆ. ಒಟ್ಟು 15 ದಿನಗಳ ಕಾಲ ಈ ಮುಷ್ಕರ ನಡೆಯಲಿದೆ.

ಮುಷ್ಕರ ಎಲ್ಲೆಲ್ಲಿ ಮತ್ತು ಯಾವಾಗ?

ಮೇ 6: ಗುಲ್ಬರ್ಗ ವಿಭಾಗ
ಬೀದರ್, ಗುಲ್ಬರ್ಗ, ರಾಯಚೂರು, ಯಾದಗಿರಿ.

ಮೇ 10: ಹೊಸಪೇಟೆ ವಿಭಾಗ
ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಗದಗ, ಕೊಪ್ಪಳ ಮತ್ತು ಬೆಳಗಾವಿ ವಿಭಾಗದ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ ,ಬಿಜಾಪುರ, ಧಾರವಾಡ ಹಾಗೂ ಹಾವೇರಿ.

ಮೇ 12: ಮೈಸೂರು ವಿಭಾಗ
ಮೈಸೂರು, ಚಿಕ್ಕಮಗಳೂರು, ಹಾಸನ ,ಮಂಡ್ಯ ,ಮತ್ತು ಮಂಗಳೂರು ವಿಭಾಗದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ , ಉಡುಪಿ ಹಾಗೂ ಉತ್ತರಕನ್ನಡ.

ಮೇ 17: ಬೆಂಗಳೂರು ವಿಭಾಗ
ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಹಾಗೂ ತುಮಕೂರು.

ಮೇ 19: ಬೆಂಗಳೂರು ನಗರ ವಿಭಾಗ
ಕೆಎಸ್‌ಬಿಸಿಎಲ್ ಡಿಪೋಗಳಲ್ಲಿ ಮದ್ಯ ಖರೀದಿ ಮಾಡುವುದಿಲ್ಲ.

ಇದನ್ನೂ ಓದಿ: ಬಿಸಿಬಿಸಿ ದೃಶ್ಯಗಳಿಗೆ ಹೊಸ ಟ್ರೇನರ್!

Exit mobile version