ರಾಯಚೂರು: ಡಿಕೆಶಿ ಅಕ್ರಮ ದುಡ್ಡು ಹೊಡೆದಿದ್ದಾನೆ. ಕೋರ್ಟ್ ಮೂರು ತಿಂಗಳಲ್ಲಿ ಸಿಬಿಐ ತನಿಖೆ ಮುಗಿಯಬೇಕು ಎಂದು ಹೇಳಿದೆ. ಹೀಗಾಗಿ ತನಿಖೆ ಮುಗಿಯುವವರೆಗೆ ಡಿಸಿಎಂ ಸ್ಥಾನದಲ್ಲಿ ಡಿ.ಕೆ.ಶಿವಕುಮಾರ್ ಇರಬಾರದು, ತಕ್ಷಣ ರಾಜೀನಾಮೆ ಕೊಡಬೇಕು. ಅದುಬಿಟ್ಟು ಕುಡಿದವನೇನೋ (ಡಿಕೆಶಿ) ಮಾತಾಡ್ತಾನೆ ಅಂತ ನಾನು ಉತ್ತರ ಕೊಡಬೇಕಾ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ವ್ಯಂಗ್ಯವಾಡಿರುವುದು ಕಂಡುಬಂದಿದೆ.
ಸಿಬಿಐ ವಿಚಾರದಲ್ಲಿ ಬಿಜೆಪಿ ಹಸ್ತಕ್ಷೇಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನೋಡ್ರಿ ಕುಡಿದವನೇನೋ (ಡಿಕೆಶಿ) ಮಾತಾಡ್ತಾನೆ ಅಂತ ನಾನು ಉತ್ತರ ಕೊಡಬೇಕಾ? ಸುಪ್ರೀಂ ಕೋರ್ಟ್, ಲೋಕಾಯುಕ್ತ, ಸಿಬಿಐ ಇರುವುದು ರಾಜಕಾರಣ ಮಾಡಲು ಅಲ್ಲ. ಯಾವಾಗ ನನ್ನ ಮೇಲೆ ಬಂದ್ರೆ ರಾಜಕಾರಣ, ಬೇರೆಯವರ ಮೇಳೆ ಬಂದ್ರೆ ಅದು ರಾಜಕಾರಣ ಅಲ್ಲ. ಎಲ್ಲಾ ಕಾಂಗ್ರೆಸ್ಸಿಗರು ಅಲ್ಲ ಇದು ಬರೀ ಡಿಕೆಶಿ ತಂತ್ರ ಎಂದು ಕಿಡಿಕಾರಿದ್ದಾರೆ.
100ಕ್ಕೆ 100 ನಂಬಿಕೆ ಇದೆ, ಡಿಕೆಶಿ ತಪ್ಪಿತಸ್ಥನಾಗಿದ್ದಾನೆ. ಅಕ್ರಮ ದುಡ್ಡು ಹೊಡೆದಿದ್ದಾನೆ. ತನಿಖೆಯಾದ ಮೇಲೆ ಮಂತ್ರಿಯಾದರೂ ಆಗಲಿ, ಇಲ್ಲ ಜೈಲಿಗಾದರೂ ಹೋಗಲಿ. ಆದರೆ, ತಕ್ಷಣ ರಾಜೀನಾಮೆ ಕೊಡಬೇಕು. ಅವರ ಮನೆಯಲ್ಲಿ ಸಿಕ್ಕ ಬಂಡಲ್‌ಗಟ್ಟಲೇ ನೋಟನ್ನು ನಾವು ಮಾಧ್ಯಮಗಳನ್ನು ನೋಡಿದ್ದೆವು, ಅದಕ್ಕಿಂತ ಸಾಕ್ಷಿಬೇಕಾ ಎಂದು ಪ್ರಶ್ನಿಸಿದರು.
ಆತನನ್ನು ಮೊದಲ ತನಿಖೆಯಲ್ಲೇ ತಪ್ಪಿತಸ್ಥ ಎಂದು ತಿಹಾರ್ ಜೈಲಿನಲ್ಲಿಟ್ಟಿದ್ದರು. ಅದಕ್ಕಿಂತ ಸಾಕ್ಷಿ ಬೇಕಾ? ಬೇಲ್ ಮೇಲೆ ಹೊರಗೆ ಬಂದಿದ್ದಾರೆ ಎಂದು ಕಿಡಿಕಾರಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಏನು ಜಡ್ಜಾ?
ಡಿಕೆಶಿ ಅವರು ನಾನೇನು ತಪ್ಪು ಮಾಡಿಲ್ಲ, ಹಾಗೆ ಹೊರಗಡೆ ಬರುತ್ತೀನಿ ಎನ್ನುತ್ತಿದ್ದರು. ನೆನ್ನೆ ಕೋರ್ಟ್ 3 ತಿಂಗಳಲ್ಲಿ ಸಿಬಿಐ ವರದಿ ನೀಡಬೇಕು ಎಂದು ಸೂಚಿಸಿದೆ. ಆದೇಶ ಬಂದಮೇಲೆ ಡಿಕೆಶಿ ಮತ್ತೊಮ್ಮೆ ಜೈಲಿಗೆ ಹೋಗುವುದು ಖಾತ್ರಿ ಎಂದು ಹೇಳಿದ್ದೆ. ಇದಕ್ಕೆ ಸಹೋದರಿ ಲಕ್ಷ್ಮೀ ಹೆಬ್ಬಾಳ್ಕರ್ ಇದನ್ನು ನಿಭಾಯಿಸುವುದು ಡಿಕೆಶಿಗೆ ಗೊತ್ತು. ಯಾವುದೇ ಕಾರಣಕ್ಕೂ ಜೈಲಿಗೆ ಹೋಗಲ್ಲ, ಡಿಕೆಶಿ ಪರ ನ್ಯಾಯ ಸಿಗುತ್ತೆ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ. ಈಶ್ವರಪ್ಪ ಜಡ್ಜ್? ಜಡ್ಜ್ ಹೇಳಿದರೆ ನಾನು ಜೈಲಿಗೆ ಹೋಗುತ್ತೀನಿ ಅಂತ ಡಿಕೆಶಿ ಹೇಳಿದ್ದಾರೆ. ಹಾಗಾದರೆ ಲಕ್ಷ್ಮೀ ಹೆಬ್ಬಾಳ್ಕರ್ ಏನು ಜಡ್ಜಾ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | DK Shivakumar : ಬಿಎಸ್‌ವೈ ರಾಜಕೀಯ ಕಾರಣಕ್ಕೆ ಸಿಬಿಐ ತನಿಖೆಗೆ ಆದೇಶ ಕೊಟ್ಟಿದ್ದರು; ಡಿ.ಕೆ.ಶಿವಕುಮಾರ್
ಬಾಗಲಕೋಟೆಯ ಬಾದಾಮಿಯ ಬನಶಂಕರಿಯಲ್ಲಿ ಅವರು ಮಾತನಾಡಿ, ಸಿದ್ದರಾಮಯ್ಯ ಪ್ರಮಾಣಿತೆ ಬಗ್ಗೆ ಪ್ರಶ್ನೆ ಮಾಡುತ್ತೇನೆ. ಸಿಬಿಐ ಎಲ್ಲವನ್ನೂ ಬಹಿರಂಗ ಮಾಡಿದೆ. ಸಿದ್ದರಾಮಯ್ಯ ತಕ್ಷಣ ಡಿಕೆಶಿ ಅವರನ್ನು ಡಿಸಿಎಂ ಸ್ಥಾನದಿಂದ ಅಷ್ಟೇ ಅಲ್ಲ, ಮಂತ್ರಿ ಮಂಡಲದಿಂದಲೂ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಸಚಿವ ಶರಣ ಪ್ರಕಾಶ್ ಪಾಟೀಲ್ ರಾಜೀನಾಮೆ ನೀಡಲಿ
ರಾಯಚೂರು: ನನ್ನ ಹೆಸರು ಬರೆದಿಟ್ಟು ಯಾರೋ ಆತ್ಮಹತ್ಯೆ ಮಾಡಿಕೊಂಡರು. ನಾನು ತಕ್ಷಣ ರಾಜೀನಾಮೆ ಕೊಟ್ಟೆ, ಆಗ ತನಿಖೆ ಆದ ಬಳಿಕ ನಾನು ನಿರ್ದೋಷಿ ಅಂತ ತೀರ್ಮಾನ ಆಯಿತು. ನಾನು ಶರಣ ಪ್ರಕಾಶ್‌ರನ್ನು ದೋಷಿ ಎನ್ನಲ್ಲ. ಅವರ ಹೆಸರು ಬರೆದಿಟ್ಟು ಸತ್ತಿರುವುದರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ | Operation Hasta: ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸೇರಿ 750ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್ ಸೇರ್ಪಡೆ
ಸಚಿವ ಶರಣ ಪ್ರಕಾಶ್ ಪಾಟೀಲ್ ಹೆಸರು ಬರೆದಿಟ್ಟು ಬಿಜೆಪಿ ಮುಖಂಡ ಆತ್ಮಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ನನ್ನ ಹೆಸರು ಬರೆದಿಟ್ಟು ವ್ಯಕ್ತಿ ಸತ್ತಾಗ ಕಾಂಗ್ರೆಸ್‌ನವರು, ನನ್ನ ರಾಜೀನಾಮೆಗೆ ಪಟ್ಟು ಹಿಡಿಯಲಿಲ್ಲ. ನಾನೇ ಮೋದಿ, ಅಮಿತ್ ಶಾಗೆ ಹೇಳಿ, ರಾಜೀನಾಮೆ ಪಡೆಯಿರಿ ಎಂದು ಹೇಳಿದ್ದೆ. ನಿಮ್ಮ ಹೆಸರು ಬರೆದಿಟ್ಟಿದ್ದಾನೆ ಎಂದರೆ ಶರಣ ಪ್ರಕಾಶ್ ಪಾಟೀಲ್ ಅವರೇ ಯೋಚನೆ ಮಾಡಬೇಕು. ತನಿಖೆ ಆದಮೇಲೆ ಬೇಕಾದರೆ ಮಂತ್ರಿಯಾಗಿ ಎಂದು ಆಗ್ರಹಿಸಿದರು.