ಸಿದ್ದಾಪುರ: “ಪರೇಶ್ ಮೇಸ್ತ (Paresh Mesta) ಸಾವಿನ ಕುರಿತು ಬಿಜೆಪಿಯವರು ಕರಾವಳಿಯಾದ್ಯಂತ ಪ್ರತಿಭಟನೆ ಮಾಡಿಸಿದರು. ಯಾವುದೇ ರೀತಿಯ ಸಂಬಂಧವಿಲ್ಲದಿದ್ದರೂ ಶಿರಸಿಯಲ್ಲಿ ಗಲಾಟೆ ಮಾಡಿಸಿ ಬೆಂಕಿ ಹಚ್ಚಿದ್ದೇ ಇಂದಿನ ಸಭಾಧ್ಯಕ್ಷರು” ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಭೀಮಣ್ಣ ನಾಯ್ಕ ಅವರು ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿರುದ್ಧ ಗುಡುಗಿದರು.
ಇದನ್ನೂ ಓದಿ: KMF SHIMUL Recruitment 2023 : ಹಾಲು ಒಕ್ಕೂಟದಲ್ಲಿ 194 ಹುದ್ದೆ; ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನ
ಅವರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಮುಖ್ಯಮಂತ್ರಿಗಳ ಮುಂದೆ ಕ್ಷೇತ್ರದ ಅಭಿವೃದ್ಧಿ ಕುರಿತು ಮಾತನಾಡುತ್ತಾ ಅಭಿವೃದ್ಧಿ ಕಾರ್ಯಗಳಿಗೆ ಕೆಲವರು ಅಡ್ಡ ಬಂದರು ಎಂದು ಕಾಗೇರಿ ಅವರು ಹೇಳಿಕೊಂಡಿದ್ದಾರೆ. ಯಾರು ಅಡ್ಡ ಬಂದರು ಎಂಬುದನ್ನು ಅವರು ಸ್ಪಷ್ಟಪಡಿಸಲಿ. ಒಳ್ಳೆಯ ಕಾರ್ಯಕ್ರಮ ನಡೆಯುವಲ್ಲಿ, ಅಭಿವೃದ್ಧಿ ನಡೆಯುವಲ್ಲಿ ನಮ್ಮ ಯಾವುದೇ ಕಾರ್ಯಕರ್ತರು, ಯಾರಾದರೂ ತೊಂದರೆ ಕೊಟ್ಟಲ್ಲಿ ಯೋಚಿಸಿ ಹೆಸರು ಹೇಳಲಿ” ಎಂದು ಸವಾಲು ಹಾಕಿದರು.
ಇದನ್ನೂ ಓದಿ: Swami Nithyananda: ʼಕೈಲಾಸʼದಿಂದ ವಿಶ್ವಸಂಸ್ಥೆಗೆ ಬಂದ ನಿತ್ಯಾನಂದನ ಪ್ರತಿನಿಧಿ ಯಾರೀಕೆ?
ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನ ಪ್ರಣಾಳಿಕೆಯ ಗೃಹ ಜ್ಯೋತಿ ಯೋಜನೆಯನ್ನು ಒಳಗೊಂಡ ಗ್ಯಾರಂಟಿ ಕಾರ್ಡ್ ಅನಾವರಣ ಮಾಡಿದರು. ಮುಂದಿನ ದಿನದಲ್ಲಿ ಗ್ಯಾರಂಟಿ ಕಾರ್ಡ್ ಹಾಗೂ ಕಾಂಗ್ರೆಸ್ ಯೋಜನೆಗಳ ಬಗ್ಗೆ ಪ್ರತಿ ಮನೆ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಕಾರ್ಯಕರ್ತರು ಮಾಡಲಿದ್ದಾರೆ” ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ವಸಂತ ನಾಯ್ಕ್, ವಿ ಎನ್ ನಾಯ್ಕ ಬೇಡ್ಕಣಿ, ಬಿ ಆರ್ ನಾಯ್ಕ ಹೆಗ್ಗಾರಕೈ ವೆಂಕಟೇಶ ಹೆಗಡೆ ಹೊಸಬಾಳೆ, ಸೀಮಾ ಹೆಗಡೆ, ಕಾಂಗ್ರೆಸ್ ನ ಪ್ರಮುಖರು ಉಪಸ್ಥಿತರಿದ್ದರು.
ಇದನ್ನೂ ಓದಿ: BJP Rathayatre: ವಿಜಯ ಸಂಕಲ್ಪ ರಥಯಾತ್ರೆ 2ನೇ ತಂಡಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಚಾಲನೆ