ದಾವಣಗೆರೆ: ಸಿದ್ದರಾಮೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ನಗರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹುಬ್ಬಳ್ಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸುವ ಹಿನ್ನೆಲೆಯಲ್ಲಿ ವಿವಿಧೆಡೆ ಬ್ಯಾನರ್, ಕಟೌಟ್‌ಗಳು ರಾರಾಜಿಸುತ್ತಿವೆ. ಹುಬ್ಬಳ್ಳಿಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರಾಹುಲ್ ಗಾಂಧಿ ಅವರ ಅಭಿಮಾನಿಗಳು ರಸ್ತೆಯುದ್ದಕ್ಕೂ ಬ್ಯಾನರ್ ಹಾಕಿ ಸ್ವಾಗತ ಕೋರಿದ್ದಾರೆ.
ಬಳಿಕ ಪಕ್ಷದ ಪ್ರಮುಖರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೆಲಕಾಲ ಚರ್ಚೆ ನಡೆಸಲಿದ್ದಾರೆ. ಬಹುತೇಕ ಕಾಂಗ್ರೆಸ್ ನಾಯಕರು ಸಂಜೆ ವೇಳೆಗೆ ನಗರಕ್ಕೆ ಆಗಮಿಸುವ ಸಾಧ್ಯತೆ ಇದೆ. ಈಗಾಗಲೇ ದಾವಣಗೆರೆಯಲ್ಲಿ ಕಾಂಗ್ರೆಸ್ ನಾಯಕರಾದ ಆರ್.ವಿ.ದೇಶಪಾಂಡೆ, ಎಚ್.ಸಿ.ಮಹಾದೇವಪ್ಪ, ಬೈರತಿ ಸುರೇಶ್, ಕೆ.ಎನ್.ರಾಜಣ್ಣ, ಬಸವರಾಜರಾಯರೆಡ್ಡಿ, ಉಮಾಶ್ರೀ, ಜಯಮಾಲ ಮತ್ತಿತರರು ಬೀಡುಬಿಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ರಾಹುಲ್ ಗಾಂಧಿ ಸಭೆ
ಹುಬ್ಬಳ್ಳಿ: ನಗರಕ್ಕೆ ಸಂಜೆ ಆಗಮಿಸುವ ರಾಹುಲ್ ಗಾಂಧಿ ಅವರು, ನಗರದ ಏರ್‌ಪೋರ್ಟ್ ಪಕ್ಕದಲ್ಲಿರುವ ಖಾಸಗಿ ಹೊಟೇಲ್‌ನಲ್ಲಿ ಪಕ್ಷದ ಮುಂದಿನ ಬೆಳವಣಿಗೆಗಳ ಬಗ್ಗೆ ಸಭೆ ನಡೆಸಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯ ಕುರಿತು ಕೆಲವು ನಿರ್ದೇಶನಗಳನ್ನು ನೀಡುವ ಸಾಧ್ಯತೆಯಿದೆ. ಸಭೆಯಲ್ಲಿ ರಾಷ್ಟ್ರ ಮತ್ತು ರಾಜ್ಯ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ. ಸಭೆಯ ನಂತರ ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ. ರಾಹುಲ್ ಗಾಂಧಿ ಅವರ ಅಭಿಮಾನಿಗಳು ನಗರದ ಗೋಕುಲ ರೋಡ್ ಉದ್ದಕ್ಕೂ ಬ್ಯಾನರ್‌ಗಳನ್ನು ಹಾಕಿ ರಾಗಾ ಅವರಿಗೆ ಸ್ವಾಗತ ಕೋರಿದ್ದಾರೆ.
ಇದನ್ನೂ ಓದಿ | ರಾಜೀವ್ ಹಂತಕರ ಜತೆ ಸಿದ್ದರಾಮಯ್ಯ ಸಖ್ಯ? ರಾಹುಲ್ ಗಾಂಧಿಯವರೇ ಗಮನಿಸಿ ಎಂದ ಬಿಜೆಪಿ
ಒಂದೂವರೆ ಕೆಜಿ ಬೆಳ್ಳಿ ಮೂರ್ತಿ ಸಿದ್ಧ
75ನೇ ಜನ್ಮದಿನ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಒಂದೂವರೆ ಕೆಜಿ ಬೆಳ್ಳಿ ಮೂರ್ತಿಯನ್ನು ಕಾಂಗ್ರೆಸ್ ಮುಖಂಡ
ಸಿದ್ಧಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅರಭಾವಿ ಮುಖಂಡ ಲಕ್ಕಣ್ಣ ಸಂಸುದ್ದಿಯಿಂದ ಬೆಳ್ಳಿ ಮೂರ್ತಿ ಸಿದ್ಧಪಡಿಸಿದ್ದು, ಬುಧವಾರ ನಡೆಯುವ ಸಿದ್ದರಾಮೋತ್ಸವದಲ್ಲಿ ಮಾಜಿ ಸಿಎಂಗೆ ಗಿಫ್ಟ್ ನೀಡಲಿದ್ದಾರೆ. ಒಂದು ವಾರದ ಕಾಲ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬೆಳ್ಳಿ ಮೂರ್ತಿ ಸಿದ್ಧಗೊಂಡಿದೆ.
ಮುಂದಿನ ಸಿಎಂ ಸಿದ್ದರಾಮಯ್ಯ ವಿಶೇಷ ಹಾಡು
ಧಾರವಾಡ: ಸಿದ್ದರಾಮೋತ್ಸವಕ್ಕೆ ಅಭಿಮಾನಿಯಿಂದ ವಿಶೇಷ ಹಾಡು ರಚಿಸಲಾಗಿದೆ. ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಅಭಿಮಾನಿ ಮುಂದಿನ ಸಿಎಂ ಸಿದ್ದರಾಮಯ್ಯ ಎನ್ನುವ ಮೂಲಕ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಲು ಸಜ್ಜಾಗಿದ್ದಾರೆ. ಮುಂದಿನ ಸಿಎಂ ಸಿದ್ದರಾಮಯ್ಯ ಖಾಯಂ ಎನ್ನುವ ಹಾಡನ್ನು ದಾವಣಗೆರೆಯಲ್ಲಿ ಜನರಿಗೆ ತೋರಿಸುವ ಸಾಧ್ಯತೆ ಇದೆ. ಅಜಯ್ ವಿನಾಯಕ್ ಎನ್ನುವ ಯುವ ಪ್ರತಿಭೆ ಹಾಡು ಸಂಯೋಜನೆ ಮಾಡಿ ಹಾಡಿದ್ದಾನೆ.
ಇದನ್ನೂ ಓದಿ | ಕೈ ಹಿಡಿಯೋ ಸಿದ್ದರಾಮಯ್ಯ, ಮೈಸೂರು ಹೌಲಿಯಾ: ಜನ್ಮದಿನೋತ್ಸವಕ್ಕೆ ರೆಡಿ ಆಗಿವೆ ಭರ್ಜರಿ ಹಾಡುಗಳು!