Site icon Vistara News

Reservation : ಪರಿಷ್ಕೃತ ಮೀಸಲಾತಿ ನೀಡಿ ಕನ್ನಡಿಯೊಳಗಿನ ಗಂಟು, ವೈಮನಸ್ಸು ಮೂಡಿಸುವ ಸಂಚು ಎಂದ ಸಿದ್ದರಾಮಯ್ಯ

Siddaramaiah and Basavaraj Bommai in Belgaum. Karnataka Election updateds

CM Bommai will conduct lightning traffic through Bharjari Road Show in 6 constituencies of Belgaum district and Former CM Siddaramaiah will campaign in 4 constituencies of Belgaum district through convention.

ಬೆಂಗಳೂರು: ʻʻರಾಜ್ಯ ಸರ್ಕಾರ ಘೋಷಿಸಿರುವ ಪರಿಷ್ಕೃತ ಮೀಸಲಾತಿ (Reservation) ನೀತಿ ‘ಕನ್ನಡಿಯೊಳಗಿನ ಗಂಟು’ ಅಷ್ಟೆ. ಚುನಾವಣೆಯಲ್ಲಿ ರಾಜಕೀಯ ಲಾಭದ ದುರುದ್ದೇಶದ ಈ ಮೀಸಲಾತಿ ನೀತಿಯಿಂದ ಯಾವ ಸಮುದಾಯಕ್ಕೂ ಲಾಭ ಇಲ್ಲ. ಇಂತಹ ಗಿಮಿಕ್ ಗಳಿಗೆ ಜನ ಬಲಿಯಾಗಬಾರದುʼʼ ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೀಸಲಾತಿ ಪ್ರವರ್ಗಗಳಲ್ಲಿ ಬದಲಾವಣೆ, ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಮೀಸಲಾತಿ ತಲಾ ಶೇ. 2 ಹೆಚ್ಚಳ, ಮುಸ್ಲಿಮರ ಮೀಸಲಾತಿಗೆ ಕತ್ತರಿ ಸೇರಿದಂತೆ ಕೆಲವೊಂದು ಮಹತ್ವದ ಅಂಶಗಳನ್ನು ಒಳಗೊಂಡ ಪರಿಷ್ಕೃತ ಮೀಸಲಾತಿ ನೀತಿಯನ್ನು ಶುಕ್ರವಾರ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದರು. ಸಂಪುಟ ಸಭೆಯ ಬಳಿಕ ಮಹತ್ವದ ತೀರ್ಮಾನಗಳನ್ನು ಪ್ರಕಟಿಸಿದ್ದರು.

ಇದು ಕೆಲವು ವಲಯದಲ್ಲಿ ಭಾರಿ ಸಂಭ್ರಮವನ್ನು ಉಂಟು ಮಾಡಿದ್ದರೆ ಇನ್ನು ಕೆಲವು ವಲಯದಲ್ಲಿ ಪ್ರಶ್ನೆಗಳನ್ನು ಮೂಡಿಸಿದೆ. ಈ ಪರಿಷ್ಕೃತ ನೀತಿ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಹೇಳುವುದೇನು?

ಇದನ್ನು ಓದಿ : Reservation : ಒಕ್ಕಲಿಗ, ವೀರಶೈವ ಪಂಚಮಸಾಲಿ ಮೀಸಲಾತಿ ತಲಾ 2% ಹೆಚ್ಚಳ; ಧಾರ್ಮಿಕ ಅಲ್ಪಸಂಖ್ಯಾತರ ಮೀಸಲು ರದ್ದು

Exit mobile version