ಬೆಂಗಳೂರು: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಜನ್ಮ ದಿನೋತ್ಸವಕ್ಕೆ ದಾವಣಗೆರೆಯಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಇದರ ನಡುವೆಯೇ ಸಿದ್ದರಾಮೋತ್ಸವದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು ಇಂಟ್ರೆಸ್ಟಿಂಗ್ ಹಾಡುಗಳು ಕೂಡಾ ರೆಡಿಯಾಗಿವೆ.
ಆಗಸ್ಟ್ ೩ರಂದು ಜನ್ಮ ದಿನೋತ್ಸವದ ವೇದಿಕೆಯಲ್ಲೇ ಈ ಹಾಡುಗಳು ಬಿಡುಗಡೆಯಾಗಲಿದೆ. ಸಿದ್ದರಾಮಯ್ಯ ಅವರ ಜೀವನ, ಸಾಧನೆಗಳನ್ನು ವರ್ಣಿಸುವ ಹಾಡುಗಳು ಇವಾಗಿದ್ದು, ಜನ ಹುಚ್ಚೆದ್ದು ಕುಣಿಯುವಂತೆ ಸಾಹಿತ್ಯ ಮತ್ತು ಸಂಗೀತವನ್ನು ಸಂಯೋಜಿಸಲಾಗಿದೆ.
ಕೈ ಹಿಡಿಯೋ ಸಿದ್ದರಾಮಯ್ಯ, ಮೈಸೂರು ಹುಲಿಯಾ, ಸೆಲ್ಫ್ ಮೇಡ್ ಸಿದ್ದಣ್ಣ ಮೊದಲಾದ ಹಾಡುಗಳು ಈಗ ರೆಡಿಯಾಗಿವೆ. ಟಿಣಿಂಗ ಮಿಣಿಂಗ ಟಿಶ್ಯಾ ಹಾಡಿನ ಮೂಲಕ ಜನಪ್ರಿಯತೆ ಗಳಿಸಿದ ಗಿರಿಜಾ ಹಾಡಿರುವ ಹಾಡು ಭಾರಿ ಆಕರ್ಷಣೆ ಹೊಂದಿದೆ. ಜನಪದ ಶೈಲಿಯಲ್ಲಿರುವ ಹಾಡಿಗೆ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ. ಸಿನಿಮಾ ಶೈಲಿಯಲ್ಲಿ ಹಾಡು ಮೂಡಿಬಂದಿದ್ದು ನಿರ್ದೇಶಕ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ.
ಸಿದ್ದರಾಮಯ್ಯ ಅವರ ಜೀವನ ಸಾಧನೆಯ ವರ್ಣನೆ ಹೊಂದಿರುವ ಹಾಡಿನಲ್ಲಿ “ಕೈ ಹಿಡಿಯೋ ಕೈ ಸಿದ್ದರಾಮಯ್ಯ” ಎನ್ನುವ ಸಾಲುಗಳಿವೆ. ಮೈಸೂರು ಹುಲಿಯಾ, ಸೆಲ್ಫ್ ಮೇಡ್ ಸಿದ್ದಣ್ಣ ಹಾಡು ಭಾರಿ ಜನಪ್ರಿಯವಾಗಲಿದೆ ಎಂದು ಆಯೋಜಕರು ಹೇಳಿದ್ದಾರೆ.
ಸೆಲ್ಫ್ ಮೇಡ್ ಸಿದ್ದಣ್ಣ ಹಾಡನ್ನು ಚುಟು ಚುಟು ಅಂತೈತಿ ಖ್ಯಾತಿಯ ರವೀಂದ್ರ ಸೊರಬಾವಿ ಹಾಡಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತ, ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹಾಡು ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ| Siddaramotsava | ನಾನೂ ಸಿಎಂ ಆಕಾಂಕ್ಷಿ ಅನ್ನೋದರಲ್ಲಿ ತಪ್ಪೇನಿದೆ?: ಸಿದ್ದರಾಮಯ್ಯ ನೇರ ಮಾತು