ವಿಜಯಪುರ: ಶಿವಮೊಗ್ಗದಲ್ಲಿ ಸಾವರ್ಕರ್ ಫ್ಲೆಕ್ಸ್ ತೆರವು ಹಾಗೂ ಹುಬ್ಬಳ್ಳಿಯಲ್ಲಿ ಭಾವಚಿತ್ರ ಸುಟ್ಟಿದ್ದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೊ ಅಂಟಿಸಿದ್ದ ಪ್ರಕರಣದ ಬೆನ್ನಲ್ಲೇ, ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು ಯತ್ನಿಸಿದ ಸುಮಾರು 20ಕ್ಕೂ ಹೆಚ್ಚು ಬಿಜೆಪಿ ಯುವ ಮೋರ್ಚಾ ಕಾಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಾನುವಾರ ಮುಂಜಾನೆ ಕೆಲವರು ಕೋರ್ಟ್ ಸರ್ಕಲ್ ಬಳಿಯಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡ, ಬಾಗಿಲು ಹಾಗೂ ಕಿಟಕಿಗಳಿಗೆ ಹತ್ತಾರು ಕಡೆ ಸಾವರ್ಕರ್ ಫೋಟೋ ಅಂಟಿಸಲಾಗಿತ್ತು. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ತಕ್ಷಣ ಸ್ಥಳಕ್ಕೆ ಪೊಲೀಸರು ಆಗಮಿಸಿ ಸಾವರ್ಕರ್ ಫೋಟೊಗಳನ್ನು ತೆರವುಗೊಳಿಸಿದ್ದರು.
ಇದನ್ನೂ ಓದಿ | MP Pratap Simha : ನಾಟಿಕೋಳಿ ತಿಂದು ನಾಡದೇವತೆಗೆ ಪುಷ್ಪಾರ್ಚನೆ ಮಾಡಿದ್ದರಾ ಸಿದ್ದು..?
ಇದಾದ ಬಳಿಕ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋ ಅಂಟಿಸಿದ್ದು ನಾವೇ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ ಸ್ಪಷ್ಟಪಡಿಸಿ, ಶಿವಮೊಗ್ಗದಲ್ಲಿ ಸಾವರ್ಕರ್ ಫೋಟೊ ತೆರವು ಮಾಡಿದ್ದರಿಂದ ಹೀಗೆ ಮಾಡಿದ್ದೇವೆ. ನಂತರ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಹೀಗಾಗಿ ಜಲನಗರ ಠಾಣೆ ಪೊಲೀಸರಿಂದ ಕಾಂಗ್ರೆಸ್ ಕಚೇರಿಗೆ ಭಾರಿ ಭದ್ರತೆ ಏರ್ಪಡಿಸಲಾಗಿತ್ತು.
ಭಾರಿ ಪೊಲೀಸ್ ಬಂದೋಬಸ್ತ್ ಇದ್ದರೂ ಬ್ಯಾರಿಕೇಡ್ ತಳ್ಳಿ ಒಳ ನುಗ್ಗಿದ ಬಿಜೆಪಿ ಕಾರ್ಯಕರ್ತರು ಒಳನುಗಿದ್ದಾರೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರು ಡಿಎಸ್‌ಪಿ ಸಿದ್ಧೇಶ್ವರ ಅವರನ್ನು ತಳ್ಳಿ ಒಳ ನುಗ್ಗಿದ್ದರಿಂದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ್ ಹೂಗಾರ್ ಸೇರಿ 20ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು.
ಬಿಜೆಪಿ ಕಚೇರಿಗೆ ಟಿಪ್ಪು ಫೋಟೋ ಅಂಟಿಸಬೇಕಾಗುತ್ತದೆ
ಸಾವರ್ಕರ್ ಫೋಟೊ ಅಂಟಿಸಿದ ಬಿಜೆಪಿ ಕಾರ್ಯಕರ್ತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳದಿದ್ದರೆ ನಾವೂ ಹೋರಾಟ ಮಾಡುತ್ತೇವೆ. ಬಿಜೆಪಿ ಕಚೇರಿಗೆ ಟಿಪ್ಪು ಸುಲ್ತಾನ್ ಫೋಟೊ ಅಂಟಿಸಬೇಕಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಆಲಗೂರು ಎಚ್ಚರಿಸಿದ್ದಾರೆ. ಸಾವರ್ಕರ್ ವಿಚಾರ ನಮ್ಮ ಪಕ್ಷದ ವಿಚಾರಧಾರೆಗಿಂತ ಭಿನ್ನವಾಗಿದೆ. ಅಂತಹ ಸಾವರ್ಕರ್ ಫೋಟೋ ನಮ್ಮ ಕಚೇರಿಗೆ ಅಂಟಿಸಿರುವುದು ನಮಗೆ ನೋವು ತರಿಸಿದೆ ಎಂದು ಅಸಮಾಧಾನ ಹೊರಹಾಕಿದರು.
ಸ್ವಾತಂತ್ರ್ಯ ಹೋರಾಟಗಾರರನ್ನು ಸಮಾನವಾಗಿ ಗೌರವಿಸಿ
ಕಾಂಗ್ರೆಸ್‌ನವರು ಸಾವರ್ಕರ್ ವಿಚಾರವನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅವರು ಸಾವರ್ಕರ್ ಬಗ್ಗೆ ತಿಳಿದುಕೊಂಡು ಗೌರವಿಸಬೇಕು. ಸಾವರ್ಕರ್ ಫೋಟೊ ತೆರವು ಮಾಡುವುದು ಹಾಗೂ ಸುಡುವ ಮೂಲಕ ಏನು ಸಂದೇಶ ಕೊಡಲು ಹೊರಟಿದ್ದಾರೆ. ಕಾಂಗ್ರೆಸ್‌ನವರು ಇಲ್ಲಿಗೆ ನಿಲ್ಲಿಸಿದರೆ ಸರಿ, ಈಗ ಕಾಂಗ್ರೆಸ್ ಕಚೇರಿಗೆ ಅಂಟಿಸಿದ್ದೇವೆ, ಇಲ್ಲವಾದರೆ ಕಾಂಗ್ರೆಸ್‌ನವರ ಮನೆಗಳಿಗೂ ಅಂಟಿಸಬೇಕಾಗುತ್ತದೆ ಎಂದು
ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ ಎಚ್ಚರಿಕೆ ನೀಡಿದ್ದಾರೆ.
ಸಾವರ್ಕರ್ ಕೋಮಿಗಾಗಿ ಹೋರಾಟ ಮಾಡಿಲ್ಲ. ಸಾವರ್ಕರ್ ಹೆಸರು ಬಂದರೆ ಆರ್‌ಎಸ್ಎಸ್ ಎನ್ನುತ್ತಾರೆ, ಮಹಾತ್ಮ ಗಾಂಧಿ ಅವರ ಹೆಸರು ಬಂದರೆ ಎಂದರೆ ನಾವು ಕಾಂಗ್ರೆಸ್ ಎನ್ನುತ್ತೀವಾ? ದೇಶಕ್ಕಾಗಿ ಹೋರಾಟ ಮಾಡಿದವರನ್ನು ಸಮಾನವಾಗಿ ಗೌರವಿಸಬೇಕು. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲ ಎಂದು ಹೇಳಿದ್ದರಿಂದ ಕೈ ನಾಯಕರಿಗೆ ಬಿಸಿ ಮುಟ್ಟಿಸಲು ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋ ಅಂಟಿಸಲಾಗಿದೆ ಎಂದರು.
ಇದನ್ನೂ ಓದಿ | ಮೊಟ್ಟೆ ಎಸೆದ ಸಂಪತ್‌ಗೆ ನಾನು ಜಾಮೀನು ಕೊಡಿಸಿಲ್ಲ; ಶಾಸಕ ಅಪ್ಪಚ್ಚು ರಂಜನ್