Site icon Vistara News

Sindhuri Vs Roopa : ವಿವಾದದ ಬಿಸಿ ಏರಿಸಿದ್ದ ಡಿ. ರೂಪಾ IPS ಈಗ ಫಾರಿನ್‌ನಲ್ಲಿ ತಣ್ಣಗಿದ್ದಾರೆ!

D Roopa IPS in America

#image_title

ಬೆಂಗಳೂರು: ಮೂರು ವಾರದ ಹಿಂದೆ ರಾಜ್ಯಾದ್ಯಂತ ಸುದ್ದಿಯ ಕೇಂದ್ರ ಬಿಂದುವಾಗಿದ್ದ ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್‌ (D. Roopa Moudgil) ಅವರು ಈಗ ಏನು ಮಾಡುತ್ತಿದ್ದಾರೆ ಗೊತ್ತೇ?

ಅಮೆರಿಕದ ಸಿಯೆಟಲ್‌ನಲ್ಲಿ ಜೋಡಿಗಳ ರೂಪಾ ಮೌದ್ಗಿಲ್‌, ಮೌನೀಶ್‌ ಮೌದ್ಗಿಲ್‌ ಖುಷಿಯ ಕ್ಷಣ

ಕಳೆದ ಫೆಬ್ರವರಿ 19ರಂದು 19 ಪ್ರಶ್ನೆಗಳ ಜಾರ್ಚ್‌ಶೀಟ್‌ ಮೂಲಕ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಮೇಲೆ ಸಮರವನ್ನೇ ಸಾರಿದ್ದರು ಡಿ. ರೂಪಾ. ಡಿ.ಕೆ. ರವಿ ಪ್ರಕರಣ, ಮೈಸೂರಿನ ಪಾರಂಪರಿಕ ಕಟ್ಟಡ, ಐಎಎಸ್‌ ಅಧಿಕಾರಿಗಳಿಗೆ ಅಸಭ್ಯ ಚಿತ್ರಗಳನ್ನು ಕಳುಹಿಸುವುದು, ಕಟ್ಟಿಸುತ್ತಿರುವ ಅರಮನೆಯಂಥ ಮನೆ ಹೀಗೆ ಥರಹೇವಾರಿ ಆರೋಪಗಳನ್ನು ಮಾಡಿದ್ದರು ಡಿ. ರೂಪಾ. ಇದಕ್ಕೆ ರೋಹಿಣಿ ಸಿಂಧೂರಿ ಅವರು ಕೂಡಾ ಪ್ರತ್ಯುತ್ತರ ನೀಡಿದ್ದರು.

ಸಿಯೆಟಲ್‌ನ ಕೆರೆ ದಂಡೆಯ ಮೇಲೆ

ಇಬ್ಬರು ಅಧಿಕಾರಿಗಳ ಜಡೆ ಜಗಳದಿಂದ ಬೇಸತ್ತ ಸರ್ಕಾರ ಇಬ್ಬರಿಗೂ ಎಚ್ಚರಿಕೆ ನೀಡಿ, ಯಾವುದೇ ಬಹಿರಂಗ ಹೇಳಿಕೆಯನ್ನು ನೀಡದಂತೆ ನಿರ್ಬಂಧ ವಿಧಿಸಿತ್ತು. ರೋಹಿಣಿ ಸಿಂಧೂರಿ ಅವರು ಕೂಡಾ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಹಾಗಂತ ರೂಪಾ ಅವರು ತಮ್ಮ ಆರೋಪಾಸ್ತ್ರಗಳನ್ನು ಒಳಗಿಟ್ಟಿರಲಿಲ್ಲ. ಕೊನೆಗೆ ಸರ್ಕಾರ ಅವರಿಬ್ಬರನ್ನು ತಮ್ಮ ಹುದ್ದೆಗಳಿಂದ ಮುಕ್ತಗೊಳಿಸಿ, ಹೊಸ ಹುದ್ದೆ ತೋರಿಸದೆ ತಾತ್ಕಾಲಿಕವಾಗಿ ಮನೆಯಲ್ಲೇ ಇರಿ ಎಂದಿತ್ತು.

ಈ ನಡುವೆ ಇವರ ಜಗಳದಲ್ಲಿ ಸಿಕ್ಕಾಕಿಕೊಂಡ ಸರ್ವೇ ವಿಭಾಗದಲ್ಲಿ ಆಯುಕ್ತರಾಗಿದ್ದ ಡಿ. ರೂಪಾ ಅವರ ಪತಿ ಮೌನೀಶ್‌ ಮೌದ್ಗೀಲ್‌ ಅವರಿಗೂ ಟ್ರಾನ್ಸ್‌ಫರ್‌ ಭಾಗ್ಯ ಸಿಕ್ಕಿತ್ತು.

ಮತ್ತದೇ ಹಳೆ ನಗುವಿನೊಂದಿಗೆ ರೂಪಾ ಮೌದ್ಗಿಲ್

ಇದೆಲ್ಲ ಆಗಿ ಈಗ 20 ದಿನಗಳೇ ಕಳೆದಿವೆ. ಡಿ. ರೂಪಾ ಮತ್ತು ರೋಹಿಣಿ ಸಿಂಧೂರಿ ಅವರಿಬ್ಬರೂ ಸೈಲೆಂಟ್‌ ಆದ ಹಾಗೆ ಇದ್ದಾರೆ. ಯಾಕೆ? ಇವರೆಲ್ಲಿ ಹೋದರು ಎಂದು ಹುಡುಕಿದರೆ ಡಿ. ರೂಪಾ ಅವರ ಬಗ್ಗೆ ಒಂದಿಷ್ಟು ಮಾಹಿತಿಗಳು ಸಿಗುತ್ತಿವೆ. ಹೌದು ಡಿ. ರೂಪಾ ಅವರು ಇಲ್ಲಿ ವಿವಾದದ ಬೆಂಕಿ ಹಚ್ಚಿ ಈಗ ತಾವು ಫಾರಿನ್‌ನಲ್ಲಿ ತಣ್ಣಗಿದ್ದಾರೆ. ಜತೆಗೆ ಗಂಡ ಮೌನೀಶ್‌ ಮೌದ್ಗೀಲ್‌ ಅವರನ್ನೂ ಕರೆದುಕೊಂಡು ಹೋಗಿದ್ದಾರೆ.

ಸಿಯೆಟಲ್‌ನಲ್ಲಿರುವ ಮೈಕ್ರೋಸಾಫ್ಟ್‌ ಕಚೇರಿಯಲ್ಲಿ

ಡಿ. ರೂಪಾ ಅವರು ತಾವು ಅಮೆರಿಕ ಸಿಯೆಟಲ್‌ನಲ್ಲಿ ರಜೆಯನ್ನು ಎಂಜಾಯ್‌ ಮಾಡುತ್ತಿರುವ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದಾರೆ. ಅವರು ಅಲ್ಲಿನ ಚಳಿ, ನೀರು, ನಗರಗಳನ್ನೆಲ್ಲ ಖುಷಿಯಾಗಿ ಅನುಭವಿಸುತ್ತಿರುವ ಚಿತ್ರಗಳು ಮನಸಿಗೆ ಮುದ ನೀಡುತ್ತಿವೆ.

ಸಿಯೆಟಲ್‌ನಲ್ಲಿರುವ ಮೈಕ್ರೋಸಾಫ್ಟ್‌ ಪ್ರಧಾನ ಕಚೇರಿಯ ಮುಂದೆ

ಒಂದು ಹಂತದಲ್ಲಿ ಮೌನೀಶ್‌ ಮುದ್ಗೀಲ್‌ ಅವರು ಮನೆ ಕಡೆಗೆ ಹೆಚ್ಚು ಗಮನ ಕೊಡುತ್ತಿಲ್ಲ, ರೋಹಿಣಿ ಸಿಂಧೂರಿ ಹೇಳುವ ಕೆಲಸ ಮಾಡಿಕೊಡುವುದರಲ್ಲೇ ಬ್ಯುಸಿಯಾಗಿದ್ದಾರೆ ಎಂದೆಲ್ಲ ಆರೋಪ ಮಾಡಿದ್ದರು ಡಿ. ರೂಪಾ. ಇದು ಡಿ. ರೂಪಾ ಮತ್ತು ಮೌನೀಶ್‌ ಅವರ ದಾಂಪತ್ಯ ಜೀವನದಲ್ಲೇ ಬಿರುಕು ಮೂಡಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಆದರೆ, ಅಮೆರಿಕದಲ್ಲಿ ಅವರಿಬ್ಬರು ಓಡಾಡುತ್ತಿರುವ ಚಿತ್ರಗಳನ್ನು ನೋಡಿದರೆ ಈಗಷ್ಟೇ ಮದುವೆಯಾಗಿ ಹನಿಮೂನಿಗೆ ಹೋದ ಜೋಡಿಯಂತಿದ್ದಾರೆ.

ಸಿಯೆಟಲ್‌ನಲ್ಲಿರುವ ಮೈಕ್ರೋಸಾಫ್ಟ್‌ ಕಚೇರಿಯಲ್ಲಿ ಆರಾಮದ ಕ್ಷಣ

ಅಧಿಕಾರಿಯೇ ಆಗಿದ್ದರೂ ನಮ್ಮಂತೆ ಮನುಷ್ಯರು, ಅವರಿಗೂ ಭಾವನೆಗಳಿರುತ್ತವೆ ಎಂಬ ಮಾತಿಗೆ ಒಪ್ಪುವಂತೆ ಅವರಿಬ್ಬರು ಪರಸ್ಪರರ ಸಾಂಗತ್ಯದಲ್ಲಿ ಖುಷಿಯ ಕ್ಷಣಗಳನ್ನು ಕಳೆಯುತ್ತಿರುವುದು ಇಲ್ಲಿ ಕಾಣುತ್ತಿದೆ. ಗಂಡನ ಎದೆಗೊರಗಿ ನಿಂತ ರೂಪಾ ಅವರ ಚಿತ್ರಗಳು, ಮೌನೀಶ್‌ ಅವರು ತೋರಿಸುತ್ತಿರುವ ಅನುಭೂತಿ ಹಿತವಾಗಿದೆ.

ಇದನ್ನೂ ಓದಿ : Sindhuri VS Roopa: ರೋಹಿಣಿ, ರೂಪಾ ಸಂಘರ್ಷದ ಬೆನ್ನಲ್ಲೇ ಇವರ ಹೆಸರಿನಲ್ಲಿ 2 ಸಿನಿಮಾ ನೋಂದಣಿ, ಹೇಗಿವೆ ಟೈಟಲ್?

Exit mobile version