ಬೆಂಗಳೂರು: ತಮ್ಮ ವೈಯಕ್ತಿಕ ಫೋಟೊಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ತೇಜೋವಧೆ ಮಾಡಿದ್ದಾರೆ ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಿಡಿದಿರುವ (Sindhuri Vs Roopa) ಹೊರತಾಗಿಯೂ ಐಪಿಎಸ್ ಅಧಿಕಾರಿ ಡಿ. ರೂಪಾ ತಮ್ಮ ಆಕ್ರಮಣಕಾರಿ ನಿಲುವನ್ನು ಮುಂದುವರಿಸಿದ್ದಾರೆ. ಈಗ ಬಿಡುಗಡೆ ಮಾಡಿರುವ ಚಿತ್ರಗಳು ಕೇವಲ ಸ್ಯಾಂಪಲ್ ಅಷ್ಟೇ.. ಇನ್ನಷ್ಟು ಚಿತ್ರಗಳು ನನ್ನ ಬಳಿ ಇವೆ ಎಂದಾಕೆ ಹೇಳಿದ್ದಾರೆ.
ಭಾನುವಾರ ಮುಂಜಾನೆಯೇ ರೋಹಿಣಿ ಸಿಂಧೂರಿ ವಿರುದ್ಧ ಆರೋಪಗಳ ದೊಡ್ಡ ಚಾರ್ಜ್‌ಶೀಟನ್ನೇ ಸಲ್ಲಿಸಿದ ಡಿ. ರೂಪಾ ಅವರನ್ನು ಒಂದಂಶವನ್ನು ಗಂಭೀರವಾಗಿ ಉಲ್ಲೇಖಿಸಿದ್ದರು. ರೋಹಿಣಿ ಸಿಂಧೂರಿ ಅವರು ಕೆಲವು ಐಎಎಸ್ ಅಧಿಕಾರಿಗಳಿಗೆ ಅಷ್ಟೇನೂ ಸಭ್ಯವಲ್ಲದ ತಮ್ಮ ಖಾಸಗಿ ಚಿತ್ರಗಳನ್ನು ಆಗಾಗ ಕಳುಹಿಸಿಕೊಡುತ್ತಾರೆ. ಒಬ್ಬ ಮಹಿಳಾ ಅಧಿಕಾರಿಯಾಗಿ ಪುರುಷರಿಗೆ ಈ ರೀತಿಯ ಚಿತ್ರಗಳನ್ನು ಕಳುಹಿಸುವುದು ಸರಿಯೇ ಎಂದು ಆಕೆ ಪ್ರಶ್ನಿಸಿದ್ದರು.
ಅದಾಗಿ ಸ್ವಲ್ಪ ಹೊತ್ತಿನಲ್ಲೇ ಆ ಖಾಸಗಿ ಫೋಟೊಗಳನ್ನು ಬಿಡುಗಡೆ ಮಾಡಿದರು. ಅದರಲ್ಲಿ ಒಂದು ಹಂತದ ಆತ್ಮೀಯ ಸೀನ್‌ಗಳು ಇದ್ದವು. ಆಗ ಇಷ್ಟೇನಾ? ಇದಕ್ಕೆ ಇಷ್ಟೊಂದು ರಂಪ ಮಾಡಬೇಕಾ ಎನ್ನುವ ಪ್ರಶ್ನೆ ಎದುರಾಗಿತ್ತು. ಅದೇ ಹೊತ್ತಿಗೆ, ಇದೆಲ್ಲ ಸಾಮಾಜಿಕ ಮೀಡಿಯಾ ಮತ್ತು ವಾಟ್ಸ್ ಆಪ್ ಸ್ಟೇಟಸ್‌ನಲ್ಲಿದ್ದ ಫೋಟೊಗಳು, ಅದನ್ನು ಸಂಗ್ರಹಿಸಿ ಮಾನಹಾನಿ ಮಾಡುತ್ತಿದ್ದಾರೆ ಎಂದು ರೋಹಿಣಿ ಸಿಂಧೂರಿ ಆರೋಪಿಸಿದ್ದರು.
ಇದಾಗಿ ಸ್ವಲ್ಪ ಹೊತ್ತಿನಲ್ಲೇ ಮಾಧ್ಯಮಗಳ ಜತೆ ಮಾತನಾಡಿದ ರೂಪಾ, ಇವುಗಳಲ್ಲಿ ಯಾವುದು ಕೂಡಾ ಸಾಮಾಜಿಕ ಜಾಲ ತಾಣದಲ್ಲ, ವಾಟ್ಸ್ ಆಪ್ ಸ್ಟೇಟಸ್‌ನದ್ದೂ ಅಲ್ಲ, ಇವು ಪುರುಷ ಅಧಿಕಾರಿಗಳಿಗೆ ಕಳುಹಿಸಿದ್ದು. ಇಷ್ಟೇ ಅಲ್ಲ, ಇದು ಸ್ಯಾಂಪಲ್ ಮಾತ್ರ, ಇನ್ನಷ್ಟು ಚಿತ್ರಗಳು ನನ್ನ ಕೈಯಲ್ಲಿವೆ. ಸಮಯ ಬಂದಾಗ ಬಿಡುಗಡೆ ಮಾಡುತ್ತೇವೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದೂ ಆಗ್ರಹಿಸಿದ್ದೇನೆ ಎಂದಿದ್ದರು.
ರೂಪಾಗೆ ರೋಹಿಣಿ ಸಿಂಧೂರಿ ಪತಿ ಕಾಲ್ ಮಾಡಿದ್ರು!
ಇಷ್ಟೆಲ್ಲ ರಾದ್ಧಾಂತಗಳು ನಡೆಯುತ್ತಿರುವ ನಡುವೆ ರೋಹಿಣಿ ಸಿಂಧೂರಿ ಅವರ ಪತಿ ಸುಧೀರ್ ರೆಡ್ಡಿ ಅವರು ತನಗೆ ಕರೆ ಮಾಡಿದರು ಎಂದು ಸ್ವತಃ ಡಿ. ರೂಪಾ ಹೇಳಿದ್ದಾರೆ.
ಅವರು ಕರೆ ಮಾಡಿದ್ದು ನಿಜ. ಅದರೆ, ಅದ್ರೆ ಅವರು ಯಾಕೆ ಕರೆ ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ನಾನು ಆ ಕರೆಯನ್ನು ಸ್ವೀಕಾರ ಕೂಡಾ ಮಾಡಿಲ್ಲ ಎಂದು ಹೇಳಿದರು.
ಇದನ್ನೂ ಓದಿ : Sindhuri Vs Roopa : ಪುರುಷ ಅಧಿಕಾರಿಗಳಿಗೆ ಅಂಥ ಚಿತ್ರ ಯಾಕೆ ಕಳಿಸಬೇಕು, ಸಂಸಾರ ಹಾಳು ಮಾಡೋಕಾ?; ರೂಪಾ ಗಂಭೀರ ಪ್ರಶ್ನೆ