ಬೆಂಗಳೂರು: ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ರೋಹಿಣಿ ಸಿಂಧೂರಿ (Sindhuri Vs Roopa) ಅವರ ಮೇಲೆ ಮಾಡಿರುವ ೧೯ ಆರೋಪಗಳು ಭಾರಿ ಚರ್ಚೆಗೆ ಕಾರಣವಾಗಿವೆ. ಇಬ್ಬರೂ ಸಾರ್ವಜನಿಕವಾಗಿ, ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೆಗಳನ್ನು ನೀಡಬಾರದು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶ ನೀಡಿದ್ದಾರಾದರೂ ಎತ್ತಿರುವ ಪ್ರಶ್ನೆಗಳ ಮೇಲಿನ ಚರ್ಚೆ ಮಾತ್ರ ಹಾಗೇ ಮುಂದುವರಿದಿದೆ.
ಡಿ. ರೂಪಾ ಅವರು ಮಾಡಿರುವ ಆರೋಪಗಳಲ್ಲಿ ಒಂದಾಗಿರುವ, ರೋಹಿಣಿ ಸಿಂಧೂರಿ ಅವರು ಜಾಲಹಳ್ಳಿಯಲ್ಲಿ ಕಟ್ಟಿಸುತ್ತಿರುವ ಮನೆಯ ಕುರಿತು ಎಲ್ಲರಿಗೂ ಕುತೂಹಲವಿದೆ. ಆ ಮನೆ ಹೇಗಿದೆ, ನಿಜಕ್ಕೂ ಮನೆ ಕಟ್ಟುವ ವಿಚಾರದಲ್ಲಿ, ವಸ್ತುಗಳ ಖರೀದಿಯಲ್ಲಿ ಅಕ್ರಮ ನಡೆದಿದೆಯಾ ಎನ್ನುವ ಕುತೂಹಲವೂ ಇದೆ. ಹಾಗಿದ್ದರೆ ಮೊದಲು ಡಿ. ರೂಪಾ ಮಾಡಿದ ಆರೋಪವೇನು ಎಂದು ಮತ್ತೊಮ್ಮೆ ಓದೋಣ.. ಬಳಿಕ ಮನೆ ಹೇಗಿದೆ ಎಂಬುದರ ಝಲಕ್ ನೋಡಬಹುದು.
ರೂಪಾ ಆರೋಪಟ್ಟಿಯಲ್ಲಿ ಇರುವುದೇನು?
ಜಾಲಹಳ್ಳಿ ಮನೆಯ ದಾಖಲೆ ಕೊಟ್ಟೇ ಇಲ್ಲ ಅಂದ್ರು ಡಿ. ರೂಪಾ
ಜಾಲಹಳ್ಳಿಯಲ್ಲಿ ಈಕೆ (ಪತಿಯದ್ದು ಇದ್ದರೂ ಈಕೆಯದೂ ಆಗುತ್ತದೆ) ದೊಡ್ಡ ಮನೆ ಒಂದು ಕಟ್ಟುತ್ತಿದ್ದು, ಐಎಎಸ್ ಅಧಿಕಾರಿ ಸಲ್ಲಿಸಬೇಕಾದ immovable property returnsನಲ್ಲಿ ಈ ಮನೆಯ ಉಲ್ಲೇಖ ಇಲ್ಲ. ಬದಲಾಗಿ ಬೇರೆಲ್ಲಾ ಲಂಗು ಲೊಟ್ಟು ಆಸ್ತಿ ಬಗ್ಗೆ ವರದಿ ಕೊಟ್ಟಿದ್ದಾರೆ. ಆ ಮನೆಗೆ ಕೋಟಿಗಟ್ಟಲೆ ಇಟಲಿ ಫರ್ನಿಚರ್, 26 ಲಕ್ಷದ ಜರ್ಮನ್ ಗೃಹೋಪಯೋಗಿ ವಸ್ತುಗಳು (ಅದನ್ನು duty free ಮಾಡಿಸಿಕೊಳ್ಳುವ ಬಗ್ಗೆ ಚರ್ಚೆ ಇದೆ) ತರಿಸಿಕೊಂಡಿದ್ದಾರೆ. ಆರು ಲಕ್ಷ ಕೇವಲ ಬಾಗಿಲಿನ ಹಿಡಿಕೆಗಳಿಗೆ ಖರ್ಚು ಮಾಡಿರುವ ಬಗ್ಗೆ ಈಕೆ ಮಾಡಿರುವ ಚಾಟ್‌ಗಳ ಮಾಹಿತಿ ಸರ್ಕಾರಕ್ಕೆ ಸಿಕ್ಕಿದೆ. ಇದರ ಮೇಲೆ ಕೂಲಂಕಷ ತನಿಖೆ ಆಗುವುದೇ ನೋಡಬೇಕಿದೆ-ಹೀಗೆಂದು ರೂಪಾ ಹೇಳಿದ್ದಾರೆ.
ಹಾಗಿದ್ದರೆ ಮನೆ ಹೇಗಿದೆ? ನಿರ್ಮಾಣ ಕಾರ್ಯ ಎಲ್ಲಿವರೆಗೆ ಬಂದಿದೆ?
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮನೆ ನಿರ್ಮಿಸುತ್ತಿರುವುದು ಜಾಲಹಳ್ಳಿ ಬಳಿಯ ಸೆಂಚುರಿ ಆರ್ಟಿಜನ್ ಲೇಔಟ್‌ನಲ್ಲಿರುವ ಸೈಟ್‌ನಲ್ಲಿ. 4800 ಅಡಿ ವಿಸ್ತೀರ್ಣದ ಜಾಗದಲ್ಲಿ ಭವ್ಯ ಬಂಗಲೆ ನಿರ್ಮಾಣವಾಗುತ್ತಿದೆ. ಜಾಗದ ಮೌಲ್ಯವೇ ಸುಮಾರು ೧೦ ಕೋಟಿ ಎಂದು ಅಂದಾಜಿಸಲಾಗಿದೆ.
ಬಂಗಲೆಯಲ್ಲಿ ಅದೆಷ್ಟೋ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಕಟ್ಟಲಾಗುತ್ತಿದೆ ಎಂದು ಹೇಳಲಾಗಿದೆ. ಬಂಗಲೆಗೆ 2 ಕೋಟಿ ಮೌಲ್ಯದ ಪಿಠೋಪಕರಣ ಬಳಕೆ ಮಾಡಿರುವ ಮಾಹಿತಿ ಇದೆ. ಬಾಗಿಲಿನ ಹಿಡಿಕೆಗೇ 6 ಲಕ್ಷ ರೂ. ಎಂದು ರೂಪಾ ಹೇಳುತ್ತಾರೆ. 26 ಲಕ್ಷ ರೂ ಮೌಲ್ಯದ ಗೃಹೋಪಯೋಗಿ ವಸ್ತುಗಳು ಬಳಕೆ ಮಾಡಿದ ಆರೋಪವಿದೆ.
ಇದನ್ನೂ ಓದಿ : Sindhuri Vs Roopa: ರೋಹಿಣಿ-ರೂಪಾ ಇಬ್ಬರಿಗೂ ಜಾಗ ತೋರಿಸದೇ ಎತ್ತಂಗಡಿ: ರೂಪಾ ಪತಿ ಮೌನೀಶ್ ಮೌದ್ಗಿಲ್ ಸಹ ವರ್ಗಾವಣೆ