Site icon Vistara News

Sindhuri Vs Roopa: ಸಿಂಧೂರಿಗೆ ರೂಪಾ ಅವಾಚ್ಯವಾಗಿ ಬೈದ ಹಳೇ ಆಡಿಯೋ ವೈರಲ್‌

Rs 1 crore defamation suit for not apologising; Rohini Sindhuri issues notice to Roopa

#image_title

ಮೈಸೂರು: ಅಧಿಕಾರಿಗಳಾಗಿರುವ ರೋಹಿಣಿ- ರೂಪಾ ಅವರ ಸದ್ಯದ ಕಿತ್ತಾಟಕ್ಕೂ ಮುನ್ನವೇ ಆರ್‌ಟಿಐ ಕಾರ್ಯಕರ್ತರೊಬ್ಬರಿಗೆ ಡಿ.ರೂಪಾ ಅವಾಜ್ ಹಾಕಿರುವ, ರೋಹಿಣಿ ಸಿಂಧೂರಿ ಅವರ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿರುವ ಆಡಿಯೋ ಒಂದು ವೈರಲ್‌ ಆಗಿದೆ.

ರೂಪಾ ಮಾತಾಡಿದರು ಎನ್ನಲಾದ ಆಡಿಯೋ ಇಲ್ಲಿದೆ:

http://vistaranews.com/wp-content/uploads/2023/02/WhatsApp-Audio-2023-02-22-at-7.33.40-AM.mp3

ಈ ಪ್ರಕರಣ ತುಸು ತಡವಾಗಿ ಬೆಳಕಿಗೆ ಬಂದಿದೆ. ಆರ್‌ಟಿಐ ಕಾರ್ಯಕರ್ತ ಎನ್.ಗಂಗರಾಜು ಎಂಬವರು ತಮ್ಮಲ್ಲಿದ್ದ ಈ ಆಡಿಯೋ ಅನ್ನು ಹೊರಬಿಟ್ಟಿದ್ದು, ಅದೀಗ ವೈರಲ್ ಆಗಿದೆ. ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ, ಶಾಸಕ ಸಾ.ರಾ.ಮಹೇಶ್ ಸೇರಿದಂತೆ ಹಲವರ ಭೂ ಅಕ್ರಮಗಳ ಬಗ್ಗೆ ಗಂಗರಾಜು ದೂರು ನೀಡಿದ್ದರು. ದೂರು ಆಧರಿಸಿ ರೋಹಿಣಿ ಸಿಂಧೂರಿ ತನಿಖೆಗೆ ಆದೇಶಿಸಿದ್ದರು.

ಈ ಬಗ್ಗೆ ಮಾಹಿತಿ ಪಡೆಯಲು ಸರ್ವೇ ಆಯುಕ್ತರಾಗಿದ್ದ ಮುನೇಶ್ ಮೌದ್ಗಿಲ್ ಅವರನ್ನು ಗಂಗರಾಜು ಭೇಟಿಯಾಗಿದ್ದರು. ಈ ವೇಳೆ ಗಂಗರಾಜು ಅವರಿಗೆ ಕರೆ ಮಾಡಿ ಮಾಡಿ ರೂಪಾ ಆವಾಜ್ ಹಾಕಿದ್ದು, ʼಮನೆ ಹಾಳು ಮಾಡುವ ರೋಹಿಣಿಗೆ ಯಾಕೆ ಸಪೋರ್ಟ್ ಮಾಡ್ತೀಯ? ನೀನು ದುಡ್ಡು ಮಾಡಿಕೊಳ್ಳುತ್ತಿದ್ದೀಯʼ ಎಂದು ಗದರಿಸಿದ್ದಾರೆ. ಈ ಸಂಬಂಧ ಮಾಹಿತಿ ನೀಡಲು ಆರ್‌ಟಿಐ ಕಾರ್ಯಕರ್ತ ಗಂಗರಾಜು ಇಂದು ಸುದ್ದಿಗೋಷ್ಠಿ ಕರೆದಿದ್ದು, ಇನ್ನಷ್ಟು ಆಡಿಯೋ ದಾಖಲೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: Sindhuri Vs Roopa : ರೂಪಾ ಹೇಳಿದ, ರೋಹಿಣಿ ಸಿಂಧೂರಿ ಕಟ್ಟಿಸುತ್ತಿರುವ ಮನೆ ಹೇಗಿದೆ? ನೀವೇ ನೋಡಿ

Exit mobile version