ಬೆಂಗಳೂರು: ತಮ್ಮ ವಿರುದ್ಧ ನಿರಂತರ ಆರೋಪಗಳ ಸುರಿಮಳೆ ಸುರಿಸುತ್ತಿರುವ ಐಪಿಎಸ್ ಅಧಿಕಾರಿ ಡಿ. ರೂಪಾ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Sindhuri Vs Roopa) ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ದೂರು ನೀಡಿದ್ದಾರೆ.
ಬೀದಿ ಜಗಳದಲ್ಲಿ ನಿರತರಾಗಿರುವ ಇಬ್ಬರು ಅಧಿಕಾರಿಗಳನ್ನು ಕರೆಸಿ ಎಚ್ಚರಿಕೆ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಎಸ್ ವಂದಿತಾ ಶರ್ಮ ಅವರಿಗೆ ಸೂಚನೆ ನೀಡಿದ್ದರು. ವಂದಿತಾ ಶರ್ಮಾ ಅವರು ಸೂಚನೆ ನೀಡುವ ಮೊದಲೇ ವಿಧಾನಸೌಧ ತಲುಪಿದ ಸಿಂಧೂರಿ ಅವರು ಡಿ. ರೂಪಾ ಮೇಲೆ ಮೂರು ಪುಟಗಳ ದೂರು ನೀಡಿದ್ದಾರೆ.
ಡಿ. ರೂಪಾ ಅವರು ಮಾಡಿರುವ ೧೯ ಆರೋಪಗಳ ಪೈಕಿ ಆಡಳಿತಾತ್ಮಕ ವಿಚಾರಗಳಿಗೆ ಸಂಬಂಧಿಸಿ ಪ್ರತಿಯೊಂದಕ್ಕೂ ಸಿ.ಎಸ್. ಅವರಿಗೆ ವಿವರಣೆ ನೀಡಿದ್ದೇನೆ. ಉಳಿದ ವೈಯಕ್ತಿಕ ಆರೋಪಗಳಿಗೆ ಸಂಬಂಧಿಸಿ ಕಾನೂನು ಹೋರಾಟ ನಡೆಸುತ್ತೇನೆ ಎಂದು ಸಿಎಸ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರಿಗೆ ಅವರು ತಿಳಿಸಿದರು.
ರೋಹಿಣಿ ಸಿಂಧೂರಿ ಅವರು ಆಲ್ ಇಂಡಿಯಾ ಸರ್ವೀಸ್ ಕಂಡಕ್ಟ್ ರೂಲ್‌ನಡಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾಗೆ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಂಚಿಕೊಂಡು ಆರೋಪ ಮಾಡಿದ ಬಗ್ಗೆಯೂ ಸಿಎಸ್ ಅವರ ಗಮನ ಸಳೆದಿದ್ದಾರೆ.
ಸಿಎಸ್ ವಂದಿತಾ ಶರ್ಮಾ ಅವರನ್ನು ಭೇಟಿ ಮಾಡಿದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿಣಿ ಸಿಂಧೂರಿ ಅವರು, ಸರ್ಕಾರಿ ಅಧಿಕಾರಿಗಳು, ನೌಕರರು ಮೀಡಿಯಾ ಮುಂದೆ ಬರಬಾರದು ಅಂತ ಇದೆ. ಹಾಗಾಗಿ ನಾನು ಮಾತನಾಡಿಲ್ಲ ಎಂದರು.
ರೂಪಾ ಅವರು ಇಲ್ಲ ಸಲ್ಲದ ಆರೋಪ ಮಾಡಿದ್ದಾನೆ. ಅವರು ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ನಾನು ಸಾಮಾಜಿಕ ಜಾಲತಾಣದಲ್ಲಿ ಅಷ್ಟೇನೂ ಸಕ್ರಿಯವಾಗಿಲ್ಲ. ಹೀಗಾಗಿ ಹೆಚ್ಚು ಗಮನಿಸಿಲ್ಲ. ಸಿಎಸ್ ಅವರಿಗೆ ವರದಿ ನೀಡಿದ್ದೇನೆ. ವೈಯಕ್ತಿಕ ಆರೋಪದ ಬಗ್ಗೆ ನನ್ನ ಗಂಡ ಮಾತಾಡಿದ್ದಾರೆ. ಏನಾಗುತ್ತಿದೆ ಎಂದು ಸಿಎಸ್ ಅವರಿಗೆ ತಿಳಿಸಲು ಬಂದಿದ್ದೇನೆ ಎಂದು ರೋಹಿಣಿ ಸಿಂಧೂರಿ ಹೇಳಿದರು.
ರೋಹಿಣಿ ಸಿಂಧೂರಿಗೆ ಹೆಚ್ಚಿನ ಪೊಲೀಸ್ ಭದ್ರತೆ
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ನಿರ್ದೇಶಕರಾಗಿರುವ ರೋಹಿಣಿ ಸಿಂಧೂರಿ ಅವರು ಆ ಕಚೇರಿಯಿಂದ ವಿಧಾನ ಸೌಧಕ್ಕೆ ಬರುವ ಪೊಲೀಸ್ ಭದ್ರತೆ ನೀಡಲಾಗಿತ್ತು.
ಭದ್ರತೆ ದೃಷ್ಟಿಯಿಂದ ವಿಧಾನಸೌಧದ ಪಶ್ಚಿಮ ದ್ವಾರದ ಸಮೀಪ ರೋಹಿಣಿ ಸಿಂಧೂರಿ ವಾಹನವನ್ನು ತರಲಾಗಿತ್ತು. ಸಾಮಾನ್ಯವಾಗಿ ಸಿಎಂ ಹಾಗೂ ಸಚಿವರ ಯಾರ ವಾಹನ ಸಹ ದ್ವಾರದವರೆಗೂ ಬರುವುದಿಲ್ಲ. ಭದ್ರತಾ ದೃಷ್ಟಿಯಿಂದ ರೋಹಿಣಿ ಸಿಂಧೂರಿ ವಾಹನವನ್ನು ದ್ವಾರದ ಸಮೀಪ ಬಿಡಲಾಗಿತ್ತು.
ಇದನ್ನೂ ಓದಿ : Sindhuri Vs Roopa : ಐಎಎಸ್ ಅಧಿಕಾರಿಗಳಿಗೆ ನಗ್ನ ಚಿತ್ರ ಕಳಿಸಿದ್ದಾರಾ ರೋಹಿಣಿ ಸಿಂಧೂರಿ?; ಡಿ. ರೂಪಾ ಹೇಳುತ್ತಿರುವುದೇನು?