Site icon Vistara News

Sindhuri Vs Roopa : ಖಾಸಗಿ ಫೋಟೊ ಸಂಗ್ರಹಿಸಿ ತೇಜೋವಧೆ ಮಾಡಿದ ರೂಪಾ ವಿರುದ್ಧ ಕಾನೂನು ಕ್ರಮ: ಸಿಂಧೂರಿ

Dr Roopa Sindhuri

#image_title

ಬೆಂಗಳೂರು: ಐಪಿಎಸ್‌ ಅಧಿಕಾರಿಯಾಗಿರುವ ಡಿ. ರೂಪಾ ಅವರು ನನ್ನ ಖಾಸಗಿ ಫೋಟೊ ಸಂಗ್ರಹಿಸಿ ತೇಜೋವಧೆ ಮಾಡಲು ಬಳಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದೇನೆ (Sindhuri Vs Roopa) ಎಂದು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪತ್ರ ಬರೆದಿರುವ ಅವರು, ʻʻರೂಪಾ ಅವರು ಸಾಮಾಜಿಕ ಮಾಧ್ಯಮಗಳಿಂದ ಹಾಗೂ ವಾಟ್ಸ್ ಆ್ಯಪ್ ಸ್ಟೇಟಸ್‌ಗಳಿಂದ ಸ್ಕ್ರೀನ್‌ ಶಾಟ್‌ಗಳ ಮೂಲಕ ಸಂಗ್ರಹಿಸಿರುವ ಫೋಟೊಗಳನ್ನು ನನ್ನ ತೇಜೋವಧೆ ಮಾಡಲು ಬಳಸಿದ್ದಾರೆ. ಒಬ್ಬ ಹಿರಿಯ ಪೊಲೀಸ್ ಅಧಿಕಾರಿಯಾಗಿ ಅದರಲ್ಲೂ ಒಬ್ಬ ಮಹಿಳೆಯಾಗಿ ಇನ್ನೊಬ್ಬ ಮಹಿಳೆಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಕಾನೂನು ಉಲ್ಲಂಘನೆಯನ್ನು ಮಾಡಿದ್ದಾರೆ. ಸದರಿಯವರ ವಿರುದ್ಧ ನಾನು ಶೀಘ್ರದಲ್ಲಿಯೇ ಕಾನೂನು ಕ್ರಮ ಕೈಗೊಳ್ಳಲಿದ್ದೇನೆʼʼ ಎಂದಿದ್ದಾರೆ.

ಈ ಫೋಟೊಗಳೆಲ್ಲವೂ ಸಾಮಾಜಿಕ ಮಾಧ್ಯಮಗಳು, ವಾಟ್ಸ್‌ ಆ್ಯಪ್ ಸ್ಟೇಟಸ್‌ನಲ್ಲಿದ್ದವು ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.

ಮಾಧ್ಯಮಗಳಿಗೂ ಮನವಿ

ಈ ನಡುವೆ, ಈ ಫೋಟೊಗಳನ್ನು ಮಾಧ್ಯಮಗಳಲ್ಲಿ ಬಳಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಒಬ್ಬರು ತಮ್ಮ ವೈಯಕ್ತಿಕ ಹಗೆತನಕ್ಕೆ ನನ್ನ ವೈಯಕ್ತಿಕ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದನ್ನು ಮಾಧ್ಯಮಗಳಲ್ಲಿ ಬಿತ್ತರವಾಗುವುದು ಬಹಳ ನೋವಿನ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ನನ್ನ ವೈಯಕ್ತಿಕ ಫೋಟೋಗಳನ್ನು ತಮ್ಮ ಗೌರವಾನ್ವಿತ ಮಾಧ್ಯಮಗಳಲ್ಲಿ ಬಳಸದಂತೆ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದೂ ಕೇಳಿಕೊಂಡಿದ್ದಾರೆ.

ಡಿ. ರೂಪಾ ಅವರು ರೋಹಿಣಿ ಸಿಂಧೂರಿ ಅವರ ಮೇಲೆ ಹೊರಡಿಸಿದ ೧೯ ಆರೋಪಗಳ ಚಾರ್ಜ್‌ಶೀಟ್‌ನಲ್ಲಿ, ಆಕೆ ಕೆಲವು ಐಎಎಸ್‌ ಅಧಿಕಾರಿಗಳಿಗೆ ತಮ್ಮ ಸಭ್ಯತೆ ಮೀರಿದ ಫೋಟೊಗಳನ್ನು ಕಳುಹಿಸುತ್ತಾರೆ ಎಂದು ಆರೋಪಿಸಿದ್ದರು. ಅದಕ್ಕೆ ಪೂರಕವಾಗಿ ಕೆಲವು ಫೋಟೊಗಳನ್ನು ಕೂಡಾ ಬಿಡುಗಡೆ ಮಾಡಿದ್ದರು.

ಇದನ್ನೂ ಓದಿ : Sindhuri Vs Roopa : ಸಿಂಧೂರಿ- ರೂಪಾ ಜಗಳದಲ್ಲಿ ಡಿ.ಕೆ. ರವಿ ಪತ್ನಿ ಕುಸುಮಾ ಎಂಟ್ರಿ: ಕರ್ಮ ಫಲ ಸಿಕ್ಕೇ ಸಿಗುತ್ತದೆ ಅಂತ ಹೇಳಿದ್ಯಾರಿಗೆ?

Exit mobile version