Site icon Vistara News

Sindhuri Vs Roopa : ಡಿ. ರೂಪಾ ರಿಲೀಸ್‌ ಮಾಡಿದ ವಾಟ್ಸ್‌ಆಪ್‌ ಚಾಟ್‌ ನಕಲಿ; ಸಿಂಧೂರಿ ಪತಿ ವಾದವೇನು?

sudheer reddy

#image_title

ಬೆಂಗಳೂರು: ಐಪಿಎಸ್‌ ಅಧಿಕಾರಿ ಡಿ. ರೂಪಾ ಅವರು ತಮ್ಮ ಪತ್ನಿಯ ವಿರುದ್ಧ ಮಾಡುತ್ತಿರುವ (Sindhuri Vs Roopa) ಆಪಾದನೆಗಳಿಗೆ ಸಂಬಂಧಿಸಿ ಬಹಿರಂಗ ಹೋರಾಟಕ್ಕೆ ಇಳಿದಿರುವ, ರೋಹಿಣಿ ಸಿಂಧೂರಿ ಅವರ ಪತಿ ಸುಧೀರ್‌ ರೆಡ್ಡಿ ಅವರು ಹೊಸ ವಾದವನ್ನು ಮಂಡಿಸಿದ್ದಾರೆ. ರೋಹಿಣಿ ಸಿಂಧೂರಿ ಅವರದ್ದೆಂದು ಬಿಂಬಿಸಿ ಡಿ. ರೂಪಾ ಅವರು ಬಿಡುಗಡೆ ಮಾಡಿರುವ ಕೆಲವು ಆಕ್ಷೇಪಾರ್ಹ ವಾಟ್ಸ್‌ ಆಪ್‌ ಚಾಟ್‌ಗಳು ಅಸಲಿಯಲ್ಲ, ನಕಲಿ ಎನ್ನುವುದು ಅವರ ವಾದ. ಅದಕ್ಕೆ ಅವರು ಕೆಲವು ತಾಂತ್ರಿಕ ಕಾರಣಗಳನ್ನು ನೀಡಿದ್ದಾರೆ.

ಡಿ. ರೂಪಾ ಅವರು ಒಂದು ವಾಟ್ಸ್‌ ಆಪ್‌ ಚಾಟ್‌ನ ಸ್ಕ್ರೀನ್‌ ಶಾಟ್‌ ಒಂದನ್ನು ಫೇಸ್‌ ಬುಕ್‌ನಲ್ಲಿ ಬಿಡುಗಡೆ ಮಾಡಿದ್ದರು. ಅದರಲ್ಲಿ ಹಲವಾರು ಡಿಲೀಟೆಡ್‌ ಮೆಸೇಜ್‌ಗಳಿದ್ದವು. ಅದರ ಕೊನೆಯಲ್ಲಿ ʻಸೋ ಮ್ಯಾಡ್ಲಿ ಮ್ಯಾಡ್ಲಿ ಬ್ಯೂಟಿಫುಲ್‌ʼ ಎಂಬ ಬರಹವಿತ್ತು. ಡಿ. ರೂಪಾ ಅವರ ಪ್ರಕಾರ, ರೋಹಿಣಿ ಸಿಂಧೂರಿ ಅವರು ತಾವೇ ಕಳುಹಿಸಿದ ನಗ್ನ ಚಿತ್ರಗಳನ್ನು ಅವರೇ ಡಿಲೀಟ್‌ ಮಾಡಿದ್ದರ ಪುರಾವೆ ಇದು. ಸಾಲದ್ದಕ್ಕೆ ಆ ಚಾಟ್‌ ಸಿಂಧೂರಿಯದ್ದು ಅನ್ನುವುದಕ್ಕೆ ನಂಬರ್‌ನ ಸಾಕ್ಷಿ ಕೂಡಾ ಇದೆ ಎನ್ನುವುದು ಡಿ. ರೂಪಾ ವಾದ.

ಆದರೆ, ಇದಕ್ಕೆ ಪ್ರತಿಯಾಗಿ ಸುಧೀರ್‌ ರೆಡ್ಡಿ ಅವರು ಇನ್ನೊಂದು ವಾದ ಮಂಡನೆ ಮಾಡಿದ್ದಾರೆ

ವಾಟ್ಸ್‌ ಆಪ್‌ನಲ್ಲಿ ಮಾಡಿದ ಪೋಸ್ಟ್‌ ಎಡಿಟೆಡ್‌. ವಾಟ್ಸ್‌ ಆಪ್‌ನಲ್ಲಿ ನಂಬರ್‌ ಸೇವ್‌ ಮಾಡದೆ ಇದ್ದರೆ ಬರೀ ನಂಬರ್‌ ಮಾತ್ರ ಬರುವುದಿಲ್ಲ. ಅದರ ಜತೆ ʻ+91ʼ ಎಂದು ಕೂಡಾ ಬರುತ್ತದೆ. ಅಂದರೆ, ಡಿ ರೂಪ ಯಾರದ್ದೋ ನಂಬರ್ ಗೆ ಸಿಂಧೂರಿ ನಂಬರ್ ಸೇವ್ ಮಾಡಿ, ಇದು ರೋಹಿಣಿಯೇ ಕಳುಹಿಸಿದ್ದು ಎಂದು ಪ್ರಚಾರ ಮಾಡಿದ್ದಾರೆ. ಡಿ ರೂಪ ಹಾಕಿರುವ ಚಾಟ್ ಗಮನಿಸಿದ್ರೆ ನಿಮಗೆ ಗೊತ್ತಾಗುತ್ತದೆ ಎಂದಿದ್ದಾರೆ ಸುಧೀರ್‌ ರೆಡ್ಡಿ.

ಇದೇ ಕಾರಣಕ್ಕಾಗಿ ಡಿ. ರೂಪಾ ಅವರು ಫೇಸ್‌ ಬುಕ್‌ನಿಂದ ಆ ಪೋಸ್ಟನ್ನು ಡಿಲೀಟ್‌ ಮಾಡಿದ್ದಾರೆ ಎನ್ನುವುದು ಸುಧೀರ್‌ ವಾದ. ಹೀಗಾಗಿ ಆ ಮೆಸೇಜ್‌ ಮಾಡಿರುವುದು, ಡಿಲೀಟ್‌ ಮಾಡಿರುವುದು ರೋಹಿಣಿ ಸಿಂಧೂರಿ ಅಲ್ಲ, ಅದಕ್ಕೆ ಬರೆದಿರುವ ಪ್ರತಿಕ್ರಿಯೆ ಕೂಡಾ ಅವರಿಗೆ ಸಂಬಂಧಿಸಿದ್ದಲ್ಲ ಎನ್ನುತ್ತಾರೆ ಸುಧೀರ್‌ ರೆಡ್ಡಿ. ಈ ವಿಚಾರದಲ್ಲಿ ಕೂಡಾ ಸಿಂಧೂರಿ ಕಾನೂನು ಹೋರಾಟ ನಡೆಸಲು ಮುಂದಾಗಿದ್ದಾರೆ.

ಸಿಡಿದ ರೋಹಿಣಿ ಅಭಿಮಾನಿಗಳು, ಚಾಟ್‌ ನಕಲಿ ಎಂದ ಫ್ಯಾನ್ಸ್‌

ಈ ನಡುವೆ, ಮೈಸೂರಿನಲ್ಲಿ ರೋಹಿಣಿ ಸಿಂಧೂರಿ ಅಭಿಮಾನಿಗಳು ಕೆರಳಿದ್ದಾರೆ. ವಾಟ್ಸ್‌ ಆಪ್‌ ಚಾಟ್‌ಗಳನ್ನು ನಕಲಿ ಮಾಡಲು ನೂರಾರು ಆಪ್‌ ಬಂದಿದೆ. ಅಂತಹುದೇ ಆಪ್‌ ಬಳಸಿ ನಕಲಿ ಮೆಸೇಜ್‌ ಗಳನ್ನು ಸೃಷ್ಟಿಸಲಾಗಿದೆ ಎಂದಿದ್ದಾರೆ. ಮೂಲಕ ರೋಹಿಣಿ ಸಿಂಧೂರಿ ಪತಿಯ ವಾದವನ್ನು ಪುಷ್ಟೀಕರಿಸಿದ್ದಾರೆ.

ʻವಾಟ್ಸ್ ಆಪ್ ಚಾಟ್ ಗಳನ್ನು ನಕಲು ಮಾಡಲು ನೂರಾರು ಆಪ್ ಬಂದಿದೆ‌.‌ ಇದರ ಒಂದು ಸ್ಯಾಂಪಲ್ ನಿಮ್ಮದ್ದನ್ನೆ ನಕಲಿ ಸೃಷ್ಟಿ ಮಾಡಿದ್ದೇವೆ ನೋಡಿʼʼ ಎಂದು ಹೇಳಿ, ರೂಪ ಫೋಟೊ ಜೊತೆಗೆ ಒಂದು ಚಾಟನ್ನು ವೈರಲ್ ಮಾಡಿದ್ದಾರೆ ರೋಹಿಣಿ ಸಿಂಧೂರಿ ಅಭಿಮಾನಿಗಳು.

ಇದನ್ನೂ ಓದಿ : Sindhuri Vs Roopa : ನಾನೂ ನನ್ನ ಗಂಡ ಇನ್ನೂ ಜತೆಗಿದ್ದೇವೆ, ಆದರೆ ಕುಟುಂಬ ಒಡೆಯೋರನ್ನು ಪ್ರಶ್ನಿಸಿ: ಮತ್ತೆ ಸಿಡಿದ ರೂಪಾ

Exit mobile version