ಬೆಂಗಳೂರು: ಐಪಿಎಸ್ ಅಧಿಕಾರಿ ಡಿ. ರೂಪಾ (Sindhuri Vs Roopa) ವಸ್ತುಶಃ ರೊಚ್ಚಿಗೆದ್ದಿದ್ದಾರೆ. ರೋಹಿಣಿ ಸಿಂಧೂರಿ ಅವರ ಪ್ರತಿ ಮಾತು, ಪ್ರತಿ ಹೆಜ್ಜೆಗಳನ್ನು ಪ್ರಶ್ನಿಸುತ್ತಿರುವ ಅವರು ಒಂದೊಂದು ಮಾತಿನಲ್ಲೂ ಬಾಂಬುಗಳನ್ನೇ ಸಿಡಿಸುತ್ತಿದ್ದಾರೆ. ಅತ್ಯಂತ ಗಂಭೀರವಾದ ಆರೋಪವೆಂದರೆ, ಸಿಂಧೂರಿ ಅವರು ಐಎಎಸ್ ಅಧಿಕಾರಿಗಳಿಗೆ ನಗ್ನ ಚಿತ್ರಗಳನ್ನು ಕಳುಹಿಸಿದ್ದಾರೆ ಎಂಬುದು.
ಬೆಳಗ್ಗೆ ರೋಹಿಣಿ ಸಿಂಧೂರಿ ಅವರ ಪತಿ ಸುಧೀರ್ ರೆಡ್ಡಿ ಅವರು ಮಾಧ್ಯಮಗಳ ಜತೆ ಮಾತನಾಡುತ್ತಿದ್ದಂತೆಯೇ ತಕ್ಷಣವೇ ಪ್ರತಿಕ್ರಿಯೆ ನೀಡಿದ ಡಿ. ರೂಪಾ ಅವರು, ಮಾಧ್ಯಮಗಳ ಮುಂದೆ ಮಾತನಾಡಲು ಗಂಡನನ್ನು ಯಾಕೆ ಕಳುಹಿಸಬೇಕು, ಸಿಂಧೂರಿ ಅವರಿಗೆ ಮಾಧ್ಯಮಗಳನ್ನು ಎದುರಿಸಲು ಧೈರ್ಯ ಇಲ್ಲವೇ ಎಂದು ಪ್ರಶ್ನಿಸಿದ್ದರು. ಆಕೆ ತಮ್ಮ ತಪ್ಪುಗಳಿಗೆ ಏನು ಉತ್ತರ ಕೊಡಬಲ್ಲರು, ಹಾಗಾಗಿ ಮಾಧ್ಯಮಗಳ ಮುಂದೆ ಬರಲು ಹೆದರುತ್ತಿದ್ದಾರೆ ಎಂಬರ್ಥದಲ್ಲಿ ಮಾತನಾಡಿದ್ದರು.
ಈ ನಡುವೆ, ರೋಹಿಣಿ ಸಿಂಧೂರಿ ಅವರು ಕಚೇರಿಗೆ ತೆರಳುವ ವೇಳೆ ಮಾಧ್ಯಮದವರ ಜತೆ ಮಾತನಾಡುತ್ತಾ, ತನ್ನ ಮೇಲೆ ಆರೋಪಗಳನ್ನು ಮಾಡಿರುವ ಡಿ. ರೂಪಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಜತೆಗೆ ಕೊನೆಯದಾಗಿ ʻಗೆಟ್ ವೆಲ್ ಸೂನ್ʼ ಎಂದು ಡಿ. ರೂಪಾ ಅವರನ್ನು ಉದ್ದೇಶಿಸಿ ಹೇಳಿಕೆ ನೀಡಿದ್ದರು.
ಗೆಟ್ ವೆಲ್ ಸೂನ್ ಪದದಿಂದ ಸಿಟ್ಟಿಗೆದ್ದ ರೂಪಾ
ರೋಹಿಣಿ ಸಿಂಧೂರಿ ಅವರು ಬಳಸಿದ ಗೆಟ್ ವೆಲ್ ಸೂನ್ ಎಂಬ ಪದದಿಂದ ಸಿಟ್ಟಿಗೆದ್ದ ಡಿ. ರೂಪಾ ಅವರು ರೋಹಿಣಿ ಸಿಂಧೂರಿ ಅವರು ಐಎಎಸ್ ಅಧಿಕಾರಿಗಳಿಗೆ ತಮ್ಮ ನಗ್ನ ಚಿತ್ರಗಳನ್ನು ಕಳುಹಿಸಿದ್ದಾರೆ ಎಂಬರ್ಥದಲ್ಲಿ ಗಂಭೀರ ಆರೋಪಗಳನ್ನು ಮಾಡಿದರು.
ʻʻರೋಹಿಣಿ ಸಿಂಧೂರಿ ಅವರು Get well soon (ಬೇಗನೆ ಹುಷಾರಾಗಿ) ಅಂತಾ ನನಗೆ ಹೇಳಿದ್ದಾರಲ್ಲ ಮಾಧ್ಯಮಗಳ ಮುಂದೆ. ಹಾಗಿದ್ದರೆ ಅವರು ಅವರ ಡಿಲೀಟೆಡ್ ನಗ್ನ ಚಿತ್ರಗಳ ಬಗ್ಗೆ ಮಾತಾಡ್ತಾರಾ? ಫೋಟೊಗಳನ್ನು ಕಳುಹಿಸಿರುವ ನಂಬರ್ ಅವರದೇ ಅಲ್ವಾ? ಐಎಎಸ್ ಅಧಿಕಾರಿಗೆ ನಗ್ನ ಚಿತ್ರ, nude, naked pics ಕಳಿಸಬಹುದಾ? ಈ ರೀತಿಯ ಪಿಕ್ಸ್ ಕಳಿಸಿದ್ದು ಯಾವ ಕಾರಣಕ್ಕಾಗಿʼʼ ಎಂದು ಪ್ರಶ್ನಿಸಿದ್ದಾರೆ ಡಿ. ರೂಪಾ.
ʻʻಅವರು ನಗ್ನ ಚಿತ್ರಗಳನ್ನು ಕಳುಹಿಸಿದ್ದು ಯಾಕಾಗಿ? ಸಂಧಾನಕ್ಕಾಗಿ? ಅವರ ಮೇಲಿನ ಆರೋಪ ಸಾಬೀತಾಗಿರುವ ಪ್ರಾಥಮಿಕ ತನಿಖೆ ವಿಷಯದಲ್ಲಿ ಮುಂದೆ ಶಿಕ್ಷೆ ಆಗದಂತೆ ತಡೆಯುವುದಕ್ಕಾಗಿಯೇ? ಅವರೇ ಉತ್ತರಿಸಬೇಕು ಎಂದಿದ್ದಾರೆ
ʻʻನನಗೆ Get well soon (ಬೇಗನೆ ಹುಷಾರಾಗಿ) ಅಂತಾ ಹೇಳುವುದರ ಮೂಲಕ ಮಾನಸಿಕ ಸಮಸ್ಯೆ ಬಗ್ಗೆ ಅವರ ಅಭಿಪ್ರಾಯ ಎಷ್ಟು ಕಳಪೆಯಾಗಿದೆ ಅಂತಾ ತೋರಿಸುತ್ತದೆ. ಇದು ನಿಜಕ್ಕೂ ಮಾನಹಾನಿಕರ. ಇದನ್ನೂ ನಾನು ಕೋರ್ಟ್‌ನಲ್ಲಿ ಫೈಟ್ ಮಾಡುತ್ತೇನೆʼʼ ಎಂದಿದ್ದಾರೆ ರೂಪಾ.
ಮೂವರು ಅಧಿಕಾರಿಗಳಿಗೆ ಫೋಟೊ ರವಾನೆ
ರೋಹಿಣಿ ಸಿಂಧೂರಿ ಅವರು ಮೂವರು ಐಎಎಸ್ ಅಧಿಕಾರಿಗಳಿಗೆ ತಮ್ಮ ಸಭ್ಯವಲ್ಲದ ಫೋಟೊಗಳನ್ನು ಕಳುಹಿಸುತ್ತಿದ್ದಾರೆ ಎಂದು ತಮ್ಮ ಆರೋಪ ಪಟ್ಟಿಯಲ್ಲಿ ಹೇಳಿದ್ದ ಡಿ. ರೂಪಾ ಅವರು ಬಳಿಕ ಕೆಲವು ಫೋಟೊಗಳನ್ನು ಬಿಡುಗಡೆ ಮಾಡಿದ್ದರು. ಇಷ್ಟೇ ಅಲ್ಲ, ಇದು ಕೇವಲ ಸ್ಯಾಂಪಲ್, ಇನ್ನಷ್ಟು ಫೋಟೊಗಳಿವೆ ಎಂದು ಹೇಳಿದ್ದರು. ಈ ಫೋಟೊಗಳು ೨೦೧೩-೧೪ರದ್ದು. ರೂಪಾ ಅವರು ಯಾರದ್ದೋ ಮೊಬೈಲ್ ಹ್ಯಾಕ್ ಮಾಡಿದ್ದಾರೆ ಎಂದು ರೋಹಿಣಿ ಪತಿ ಸುಧೀರ್ ರೆಡ್ಡಿ ಹೇಳಿದ್ದರು. ಈ ಬಗ್ಗೆ ತನಿಖೆಗೆ ಆಗ್ರಹಿಸಿದ ಅವರು ಬಾಗಲಗುಂಟೆ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ : Sindhuri Vs Roopa : Get well soon; ರೂಪಾಗೆ ರೋಹಿಣಿ ತಿರುಗೇಟು; ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಸಿಂಧೂರಿ ದಂಪತಿ