ಶಿರಸಿ: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ, ಭಕ್ತಿಯ ಸ್ಥಳವಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ (Sirsi News) ಸಹಸ್ರ ಲಿಂಗದಲ್ಲಿ ಮುಸ್ಲಿಂ ದಂಪತಿ ಚಿಕನ್ ಬಿರಿಯಾನಿ ಸೇವನೆ ಮಾಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಸಹಸ್ರ ಲಿಂಗಕ್ಕೆ ಪ್ರವಾಸಕ್ಕೆಂದು ಬಂದಿದ್ದ ಮುಸ್ಲಿಂ ದಂಪತಿಯು ಲಿಂಗಗಳಿರುವ ಪಕ್ಕದ ಕಲ್ಲಿನಲ್ಲಿ ಕುಳಿತು ಬಿರಿಯಾನಿ ಸೇವನೆ ಮಾಡಿದ್ದಾರೆ. ಇದನ್ನು ಅಲ್ಲಿಯೇ ಇದ್ದ ಪ್ರವಾಸಿಗರೊಬ್ಬರು ವಿಡಿಯೊ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಈ ಪ್ರಸಂಗವು ಇತ್ತೀಚೆಗೆ ನಡೆದಿದೆ ಎನ್ನಲಾಗಿದ್ದು, ವಿಡಿಯೊ ನೋಡಿ ಜಿಲ್ಲೆಯ ಜನರು ಅಸಮಾಧಾನ ವ್ಯಕ್ತವಾಗುತ್ತಿದೆ. ಮಹಿಳೆಯೊಬ್ಬರು ಈ ವಿಡಿಯೊ ಮಾಡಿದ್ದು, “ನೀವಿಲ್ಲಿ ಬಿರಿಯಾನಿ ತಿನ್ನುತ್ತಿದ್ದೀರಾ?” ಎಂದು ಪ್ರಶ್ನಿಸಿರುವುದು ಗೊತ್ತಾಗುತ್ತದೆ. ಸಹಸ್ರ ಲಿಂಗವು ಹಿಂದುಗಳ ಧಾರ್ಮಿಕ ತಾಣವಾಗಿದ್ದು, ಇಲ್ಲಿ ಸಾವಿರಾರು ಶಿವಲಿಂಗಗಳಿವೆ. ಮುಸ್ಲಿಂ ದಂಪತಿಯ ನಡೆಗೆ ನೆಟ್ಟಿಗರಿಂದಲೂ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವವರ ವಿರುದ್ಧ ಕ್ರಮಕ್ಕೆ ಜನರಿಂದ ಒತ್ತಾಯ ಕೇಳಿಬಂದಿದೆ.
ಇದನ್ನೂ ಓದಿ | Rishab Shetty | ಬೆಳಕು, ಆದರೆ ಇದು ಬೆಳಕಲ್ಲ! 100 ದಿನದ ದರ್ಶನ ಎಂದು ಸ್ಪೆಷಲ್ ಪೋಸ್ಟ್ ಹಂಚಿಕೊಂಡ ರಿಷಬ್ ಶೆಟ್ಟಿ