ಶಿರಸಿ: ಇಲ್ಲಿನ ಮಾರಿಕಾಂಬಾ ಪ್ರೌಢಶಾಲೆಯ ಕನ್ನಡ ಶಿಕ್ಷಕ (Kannada Teacher), ರಂಗಭೂಮಿ ಕಲಾವಿದ (Theater Artist) ನಾರಾಯಣ ಭಾಗ್ವತ್ ಅವರಿಗೆ ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ರಾಷ್ಟ್ರಮಟ್ಟದ (Teachers Day 2023) ಅತ್ಯುತ್ತಮ ಶಿಕ್ಷಕ ಪ್ರಶಸ್ತಿ (Best Teacher Award) ಪ್ರದಾನ ಮಾಡಿದರು.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಂದಿಗೋಣದ ನಾರಾಯಣ ಭಾಗ್ವತ್ ಅವರು ಕತೆ-ಕವನ-ನಾಟಕ ರಚನೆ , ಚಿತ್ರಕಲೆ , ಸಂಗೀತ , ನಾಟಕ ನಿರ್ದೇಶನ ಮತ್ತು ಅಭಿನಯ , ಉಪನ್ಯಾಸ , ರಜಾ ಶಿಬಿರಗಳ ಸಂಘಟನೆ , ಪೇಪರ್ ಕ್ರಾಫ್ಟ್ , ಹಾರ್ಮೋನಿಯಂ ವಾದನ , ನಾಟಕದ ವೇಷಭೂಷಣ ಮತ್ತು ವರ್ಣಾಲಂಕಾರ , ಯಕ್ಷಗಾನ , ಕರಕುಶಲ ಕಲೆ , ವಾಸ್ತು ಜ್ಞಾನ ಹೀಗೆ ಬಹುಮುಖಿ ಪ್ರತಿಭೆ ಉಳ್ಳವರು.
ಇದನ್ನೂ ಓದಿ: National Nutrition Week 2023: ಸಿರಿಧಾನ್ಯ ಸೇವನೆಯಿಂದ ಎಷ್ಟೊಂದು ಪ್ರಯೋಜನ! ಸೈಡ್ ಎಫೆಕ್ಟ್ ಇದೆಯಾ?
ಈಗಾಗಲೆ ರಾಷ್ಟ್ರಪತಿಗಳ ಬೆಳ್ಳಿ ಪದಕ , ಕನ್ನಡ ರತ್ನ ಶಿಕ್ಷಕ ಪ್ರಶಸ್ತಿ , ಸುವರ್ಣ ಸಂಭ್ರಮ ಶಿಕ್ಷಕ ಪ್ರಶಸ್ತಿ , ಅತ್ಯುತ್ತಮ ಮಕ್ಕಳ ನಾಟಕ ನಿರ್ದೇಶಕ ಪ್ರಶಸ್ತಿ , ಅತ್ಯುತ್ತಮ ನಟ ,ತಾಲೂಕು ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ , ರಾಜ್ಯ ಜ್ಞಾನ ಸಿಂಧು ಪ್ರಶಸ್ತಿ , ನೇಶನ್ ಬ್ಯುಲ್ಡರ್ ಪ್ರಶಸ್ತಿ , ಕ.ಸಾ.ಪ. ತಾಲೂಕು ಪ್ರಶಸ್ತಿ , ರಾಜ್ಯ ಸಿರಿ ಕನ್ನಡ ನುಡಿ ಪ್ರಶಸ್ತಿ , ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ , ರಾಷ್ಟ್ರಮಟ್ಟದ ಉತ್ತಮ ನಾಟಕ ನಿರ್ದೇಶಕ ಪ್ರಶಸ್ತಿಯೂ ಸೇರಿದಂತೆ ಹತ್ತಾರು ಪ್ರಶಸ್ತಿ – ಪುರಸ್ಕಾರಗಳನ್ನು ನೀಡಿ ಈಗಾಗಲೇ ಗೌರವಿಸಲಾಗಿದೆ. ಕನ್ನಡ ಭಾಷಾ ಶಿಕ್ಷಕರಾಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಪ್ರಶಸ್ತಿ ಪಡೆದಿರುವುದೂ ವಿಶೇಷವಾಗಿದೆ.