Site icon Vistara News

Bitcoin Scam: ಬಿಟ್‌ಕಾಯಿನ್ ಹಗರಣ ತನಿಖೆಗೆ ಇಸ್ರೇಲ್ ನೆರವು ಕೇಳಲು ಮುಂದಾದ ಎಸ್ಐಟಿ ಟೀಂ

crypto

ಬೆಂಗಳೂರು, ಕರ್ನಾಟಕ: ಸದ್ಯ ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣದ (Bitcoin Scam) ಮರು ತನಿಖೆಯದ್ದೆ ಸದ್ದು. ಆದ್ರೆ ಭಾರತದಲ್ಲಿ ಕ್ರಿಪ್ಟೋ ಕರೆನ್ಸಿ (Crypto Currency) ಮಾನ್ಯವಿಲ್ಲದ ಕಾರಣ ಇದರ ಮರು ತನಿಖೆ ಅಂದುಕೊಂಡಷ್ಟು ಸುಲಭವಲ್ಲ. ಅಲ್ದೆ ಕ್ರಿಪ್ಟೋ ಕರೆನ್ಸಿ ವಾಲೇಟ್ ಗಳನ್ನ ಫ್ರೀಜ್ ಮಾಡುವಷ್ಟು ಟೆಕ್ನಾಲಜಿ ನಮ್ಮಲ್ಲಿ ಇನ್ನೂ ಅಷ್ಟಾಗಿ ಬೆಳದಿಲ್ಲ. ಹೀಗಾಗಿ ಬಿಟ್ ಕಾಯಿನ್ ಹಗರಣದ ಮರು ತನಿಖೆ ಅಂದುಕೊಂಡಷ್ಟು ಸುಲಭವಲ್ಲ ಅನ್ನೋದು ತನಿಖಾಧಿಕಾರಿಗಳಿಗೆ (SIT Team) ಅರಿವಾಗಿದ್ದು, ನುರಿತ ತಜ್ಞರೊನ್ನಳಗೊಂಡ ಇಸ್ರೇಲ್ (Israel) ದೇಶದ ಸಹಾಯ ಕೇಳಲು ರಾಜ್ಯ ಸಿಐಡಿ ತಂಡ ಮುಂದಾಗಿದೆ.

ಯೆಸ್ ಇಸ್ರೇಲ್‌ ಕ್ರಿಪ್ಟೋ ಕರೆನ್ಸಿ ವಿಚಾರವಾಗಿ ಬಹಳ‌ ಮುಂದಿದೆ.‌ ಈಗಾಗಲೇ ಅಲ್ಲಿನ ರಕ್ಷಣಾ ಇಲಾಖೆಯ ನ್ಯಾಷನಲ್ ಬ್ಯುರೋ ಫಾರ್ ಕೌಂಟರ್ ಟೆರರ್ ಫೈನಾನ್ಸ್ ಸಾಕಷ್ಟು ಕ್ರಿಪ್ಟೋ ಕರೆನ್ಸಿ ವಾಲೆಟ್ ಗಳನ್ನ ವಶಪಡಿಸಿಕೊಂಡಿದೆ.‌ ಅದ್ರಲ್ಲೂ ಹಮ್ಮಾಸ್ ಉಗ್ರ ಸಂಘಟನೆಗೆ ಫಂಡಿಂಗ್ ಆಗುತ್ತಿದ್ದ ಸಾಕಷ್ಟು ಕ್ರಿಪ್ಟೋ ಕರೆನ್ಸಿ ವಾಲೇಟ್ ಗಳನ್ನ ಇಸ್ರೇಲ್ ನ ನ್ಯಾಷನಲ್ ಬ್ಯುರೋ ಫಾರ್ ಕೌಂಟರ್ ಟೆರರ್ ಫೈನಾನ್ಸ್ ವಶಪಡಿಸಿಕೊಂಡಿದೆ.

ಅಲ್ಲದೆ ಉಗ್ರ ಸಂಘಟನೆಗಳಿಗೆ ಭಾರತದಿಂದಾಗುತ್ತಿದ್ದ ಕ್ರಿಪ್ಟೋ ಕರೆನ್ಸಿ ಫಂಡಿಂಗ್ ಬಗ್ಗೆ ಹಿಂದೆ ದೆಹಲಿ ಪೊಲೀಸ್ರಿಗೆ ಇಸ್ರೇಲ್‌ಮಾಹಿತಿ ನೀಡಿತ್ತು. ಹೀಗಾಗಿ ಸಿಐಡಿಯ ಎಸ್ ಐ ಟಿ ತಂಡವೂ ಇಸ್ರೇಲ್ ಬಳಿ ಇದರ ಬಗ್ಗೆ ಸಹಾಯ ಪಡೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಸದ್ಯ ಸಿಸಿಬಿ ಅಧಿಕಾರಿಗಳಿಂದ ಬಿಟ್ ಕಾಯಿನ್ ಹಗರಣ ಸಂಬಂಧ ನಡೆಸಿರುವ ತನಿಖೆಯ ಸಂಪೂರ್ಣ ಕಡತಗಳನ್ನ ತಮ್ನ ಸುಪರ್ಧಿಗೆ ಪಡೆದು ಪರಿಶೀಲನೆ ನಡೆಸ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Bitcoin Scam : ಬಿಟ್‌ ಕಾಯಿನ್‌ ಹಗರಣ ಮರುತನಿಖೆಗೆ ಸರ್ಕಾರ ಆದೇಶ ; ಬಿಜೆಪಿಗೆ ನಡುಕ?

ಇನ್ನು ಪರಿಶೀಲನೆ ವೇಳೆ ಬಿಟ್ ಕಾಯಿನ್ ಹಗರಣದಲ್ಲಿ‌ ಸಾಕ್ಷಿ ನಾಶಪಡಿಸಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಅಗತ್ಯ ಸಾಕ್ಷಿ ಕಲೆ ಹಾಕುವ ಉದ್ದೇಶದಿಂದ ತಾಂತ್ರಿಕ ನೈಪುಣ್ಯತೆ ಹೊಂದಿರುವ ವಿದೇಶಿ ತನಿಖಾ ಸಂಸ್ಥೆಯ ಸಹಾಯಕ್ಕೆ ಮುಂದಾಗಲಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಈ ವಿಚಾರ ಸಿಐಡಿಯಲ್ಲಿ ಚರ್ಚೆಯಾಗ್ತಾ ಇದ್ದು ಇದನ್ನ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗ್ತಾರಾ ಅಥವಾ ಇವ್ರೇ ಬೇರೆ ಏನಾದ್ರು ಮಾರ್ಗದಲ್ಲಿ ತನಿಖೆ ಮಾಡ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version