Site icon Vistara News

Video Viral : ಸುರಪುರದಲ್ಲಿ ನಾಗರ ಹಾವುಗಳ ಸಲ್ಲಾಪ; ವೈರಲ್ ಆಯ್ತು ರಾಜ-ರಾಣಿಯ ವಿಡಿಯೊ!

snake mate in yadgiri

ಯಾದಗಿರಿ: ಸುರಪುರ ತಾಲೂಕಿನ ನಗನೂರ ಗ್ರಾಮದ ಜಮೀನೊಂದರಲ್ಲಿ ನಾಗರ ಹಾವುಗಳು ಸರಸ ಸಲ್ಲಾಪದಲ್ಲಿ (Snake Mate) ತೊಡಗಿದ್ದವು. ನಾಗರಾಜ-ನಾಗರಾಣಿಯ ಈ ಏಕಾಂತದ ಸನ್ನಿವೇಶವನ್ನು ಸ್ಥಳೀಯರೊಬ್ಬರು ವಿಡಿಯೊ ಮಾಡಿಕೊಂಡಿದ್ದು, ಅದೀಗ ವೈರಲ್‌ (Video Viral) ಆಗಿದೆ.

ವೈದ್ಯ ಕಿರಣ ಜಕರಡ್ಡಿ ಎನ್ನುವವರ ಜಮೀನಿನಲ್ಲಿ ಸರಸ ಸಲ್ಲಾಪದಲ್ಲಿ ಜೋಡಿ ಹಾವುಗಳು ತೊಡಗಿದ್ದವು. ಐದಾರು ಅಡಿ ಎತ್ತರಕ್ಕೆ ಹೆಡೆ ಎತ್ತಿದ್ದ ಈ ಹಾವುಗಳು ಸರಸ ಸಲ್ಲಾಪ ನಡೆಸಿವೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಹಾವುಗಳು ತಲ್ಲೀನವಾಗಿದ್ದವು ಎನ್ನಲಾಗಿದೆ. ಈ ವಿಡಿಯೊ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: Forest Encroachment : ಡೀಮ್ಡ್‌ ಫಾರೆಸ್ಟ್‌ ಒತ್ತುವರಿ ಮಾಡಿದ್ದ ಸಕಲೇಶಪುರ ರೆಸಾರ್ಟ್‌ಗೆ ಬೀಗ!

ತಜ್ಞರು ಏನಂತಾರೆ?

ನಂಜೇದೇವನಪುರ ಗ್ರಾಮದ ಜಮೀನಿನಲ್ಲಿ ಹಾವುಗಳನ್ನು ಕಂಡ ಕೂಡಲೇ ನಾಗರಿಕರು ಅದನ್ನು ಓಡಿಸುವ ಕೆಲಸವನ್ನು ಮಾಡದಿರುವುದು ಶ್ಲಾಘನೆಗೆ ಪಾತ್ರವಾಗಿದೆ. ಕಾರಣ, ಇಂಥ ಸಂದರ್ಭದಲ್ಲಿ ಜನರು ಗಾಬರಿ ಬೀಳಬಾರದು. ಅಲ್ಲದೆ, ಅವುಗಳಿಗೆ ತೊಂದರೆಯನ್ನೂ ಮಾಡಬಾರದು ಎಂಬುದು ವನ್ಯಜೀವಿ ತಜ್ಞರ ಅಭಿಮತವಾಗಿದೆ.

ಪ್ರಕೃತಿ ಸಮತೋಲನ ಕಾಯ್ದುಕೊಳ್ಳಬೇಕೆಂದರೆ ಪ್ರತಿಯೊಂದು ಜೀವಿಗಳ ಅವಶ್ಯಕತೆ ಬಹಳವೇ ಇರುತ್ತದೆ. ಯಾವುದೇ ಒಂದರ ಕೊರತೆಯಾದರೂ ಕೊಂಡಿ ತಪ್ಪುವುದಲ್ಲದೆ, ಪರಿಸರದಲ್ಲಿ ಅಸಮತೋಲನಕ್ಕೆ ಕಾರಣವೂ ಆಗುತ್ತದೆ. ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಹಾವುಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ. ಅವುಗಳು ತಮ್ಮದೇ ಆದ ರೀತಿಯಲ್ಲಿ ಪರಿಸರಕ್ಕೆ ಕೊಡುಗೆಯನ್ನು ನೀಡುತ್ತಿರುತ್ತವೆ. ಜತೆಗೆ ಸೂಕ್ಷ್ಮ ಜೀವರಾಶಿಗಳ ನಿಯಂತ್ರಣದಲ್ಲಿ ಇವುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಪರಿಸರ ತಜ್ಞರು ಹೇಳುತ್ತಾರೆ.

ಇನ್ನು ಸೊಳ್ಳೆಗಳು ಮತ್ತದರ ಮೊಟ್ಟೆಗಳನ್ನು ಹಾವಿನ ಮರಿಗಳು ತಿನ್ನುತ್ತವೆ. ಹೀಗಾಗಿ ಸೊಳ್ಳೆಗಳ ನಿಯಂತ್ರಣವು ಆಗುವುದರಿಂದ ಅವುಗಳಿಂದ ಹರಡುವ ಸೋಂಕುಗಳು ಸಹ ನಿಯಂತ್ರಣವಾಗುತ್ತವೆ.

ಸುರಪುರದಲ್ಲಿ ಹಾವುಗಳ ಮಿಲನ; ಇಲ್ಲಿದೆ ವಿಡಿಯೊ

ಹೇಗೆ ನಡೆಯುತ್ತವೆ ಮಿಲನ?

ಎಲ್ಲರಿಗೂ ಒಂದು ಕುತೂಹಲ ಇದ್ದೇ ಇರುತ್ತವೆ. ಹಾವುಗಳ ಮಿಲನ ಪ್ರಕ್ರಿಯೆ ಹೇಗೆ ನಡೆಯುತ್ತವೆ? ಅವುಗಳಿಗೆ ಪರಸ್ಪರ ಮಿಲನ ಸೂಕ್ಷ್ಮಗಳು ಹೇಗೆ ಗೊತ್ತಾಗುತ್ತದೆ ಎಂಬ ಕುತೂಹಲ ಇರುತ್ತದೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಹೆಣ್ಣು ಹಾವುಗಳು!

ಇದನ್ನೂ ಓದಿ: Love Case : ಪ್ರೀತ್ಸೆ ಪ್ರೀತ್ಸೆ ಎಂದು ಬ್ಲ್ಯಾಕ್‌ಮೇಲ್ ಮಾಡಿದ ಗೆಳೆಯರ ಕಾಟಕ್ಕೆ ಬೇಸತ್ತು ನದಿಗೆ ಹಾರಿದ ಯುವತಿ

ಹೌದು. ಹೆಣ್ಣು ಹಾವುಗಳಿಗೆ ಮಿಲನದ ಬಯಕೆ ಆಗುತ್ತದೆ. ಆಗ ಹೆಣ್ಣು ಹಾವು ಪರಿಸರ ಪ್ರದೇಶಕ್ಕೆ ಬಂದು ಗಂಡು ಹಾವುಗಳನ್ನು ಆಕರ್ಷಿಸಲು ಫೆರೋಮೋನ್‌ ಎಂಬ ದ್ರವ್ಯವನ್ನು ಹೊರಸೂಸುತ್ತದೆ. ಈ ದ್ರವ್ಯವು ಎಲ್ಲ ಹಾವುಗಳಲ್ಲಿ ಸಾಮಾನ್ಯವಾಗಿರುತ್ತವೆ. ಈ ದ್ರವ್ಯವನ್ನು ಹೆಣ್ಣು ಹಾವುಗಳು ಹೊರಸೂಸಿವೆ ಎಂದಾದರೆ, ಅದು ಮಿಲನ ಕ್ರಿಯೆಗೆ ಆಹ್ವಾನ ನೀಡಿದಂತೆ. ಆಗ ಗಂಡು ಹಾವುಗಳು ಈ ವಾಸನೆಯನ್ನು ಗ್ರಹಿಸಿ ಅಲ್ಲಿಗೆ ಬರುತ್ತವೆ. ಮಿಲನದಲ್ಲಿ ತೊಡಗುತ್ತವೆ. ಇನ್ನು ಕೆಲವು ಸಂದರ್ಭದಲ್ಲಿ ಹಾವುಗಳು ಯಾವುದಾದರೂ ದಾಳಿಗೆ ತುತ್ತಾಗಿದ್ದರೆ ಇಲ್ಲವೇ ಅಪಾಯದ ಮುನ್ಸೂಚನೆಯಲ್ಲಿದ್ದರೂ ಈ ಫೆರೋಮೋನ್‌ ದ್ರವ್ಯವನ್ನು ಹೊರಸೂಸುತ್ತವೆ. ಆಗ ಈ ವಾಸನೆ ಗ್ರಹಿಸಿ ಆ ಜಾತಿಯ ಹಾವುಗಳು ಸ್ಥಳಕ್ಕೆ ಬರುತ್ತವೆ ಎಂದು ಉರಗ ತಜ್ಞರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Exit mobile version