ಶಿರಸಿ: ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವನ್ನು ಆಟೊ ಚಾಲಕ, ಉರಗಪ್ರೇಮಿ ರಾಜೀವ್ ನಾಯ್ಕ ಅವರು ರಕ್ಷಣೆ ಮಾಡಿದ್ದಾರೆ. ಇವರು ಹಾವುಗಳನ್ನು ರಕ್ಷಣೆ ಮಾಡಿ ನಂತರ ಕಾಡಿಗೆ ಬಿಡುವ ಕೆಲಸವನ್ನು ಕಳೆದ 11 ವರ್ಷಗಳಿಂದ ಮಾಡುತ್ತಿದ್ದಾರೆ.
ಶಿರಸಿ ನಗರದ ಅಂಬಾಗಿರಿಯ ಗಣೇಶ್ ನಾಯ್ಕ್ ಎಂಬುವರ ಮನೆಯಲ್ಲಿ ಬಾವಿಗೆ ಮುಚ್ಚಿದ್ದ ಬಲೆಗೆ ಹಾವಿನ ತಲೆ ಸಿಲುಕಿತ್ತು. ಈ ಮಾಹಿತಿ ತಿಳಿದು ಸ್ಥಳಕ್ಕೆ ತಕ್ಷಣ ಧಾವಿಸಿದ ಉರಗತಜ್ಞ ರಾಜೀವ್ ನಾಯ್ಕ್ ಬಲೆಯನ್ನು ತುಂಡು ಮಾಡಿ ನಾಗರಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಈ ಕುರಿತು ಮಾತನಾಡಿದ ಅವರು ʼʼಈ ಹಾವು ಸುಮಾರು ಎರಡು ವರ್ಷದ್ದಾಗಿದೆ. 3 ಅಡಿ ಉದ್ದ ಇತ್ತು. ನಗರ ಹಾಗೂ ಗ್ರಾಮೀಣ ಪ್ರದೇಶದ ಯಾರದೇ ಮನೆಯಿಂದ ಕರೆ ಬಂದರೂ ನಾನು ಕೂಡಲೇ ಅಲ್ಲಿಗೆ ಹೋಗಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟು ಬರುತ್ತೇನೆʼʼ ಎಂದರು.
ಇದನ್ನೂ ಓದಿ:ಮನೆಯ ಗೇಟಿನ ಪೋಸ್ಟ್ ಬಾಕ್ಸ್ರ ಒಳಗೆ ಬೆಚ್ಚಗೆ ಮಲಗಿತ್ತು ತೋಳದ ಹಾವು!