Site icon Vistara News

Video viral: ನಡುರಸ್ತೆಯಲ್ಲೇ ಮೈಮರೆತ ಹಾವುಗಳು; ಜನ ಕಂಡು ದಿಕ್ಕಾಪಾಲಾಯ್ತು; ವೈರಲ್ ಆಯ್ತು ಮಿಲನದ ವಿಡಿಯೊ!

snake mating in koppala

ಕೊಪ್ಪಳ: ಎಕ್ಸ್‌ಕ್ಯೂಸ್‌ಮಿ ಪ್ಲೀಸ್‌.. ಇದು ಹಾವುಗಳು ಮಿಲನ! ರಸ್ತೆಯಾದರೂ ಸರಿ, ಮೈದಾನವಾದರೂ ಸರಿ ಎಂಬ ರೀತಿಯಲ್ಲಿ ಎರಡು ಹಾವುಗಳು ರಸ್ತೆಯ ಮಧ್ಯದಲ್ಲೇ ಮೈಮರೆತು ಮಿಲನದಲ್ಲಿ ತೊಡಗಿರುವ ವಿಡಿಯೊವೊಂದು ಈಗ ವೈರಲ್‌ (Video viral) ಆಗಿದೆ. ಕೊಪ್ಪಳ ತಾಲೂಕಿನ ಮೆಳ್ಳಿಕೇರಿ ರಸ್ತೆಯಲ್ಲಿ ಈ ದೃಶ್ಯ ಕಂಡು ಬಂದಿದ್ದು, ಸೋಶಿಯಲ್‌ ಮೀಡಿಯಾದಲ್ಲಿ (Social Media) ಸದ್ದು ಮಾಡುತ್ತಿದೆ.

ಮೆಳ್ಳಿಕೇರಿ ಗ್ರಾಮದ ಹನುಮೇಶ ಎಂಬುವವರು ಈ ಮಾರ್ಗವಾಗಿ ಸಂಚರಿಸುತ್ತಿದ್ದಾಗ ಎರಡು ಹಾವುಗಳು ಸರಸ ಸಲ್ಲಾಪದಲ್ಲಿ ತೊಡಗಿದ್ದು ಕಂಡು ಬಂದಿದೆ. ಹೀಗಾಗಿ ಅವರು ತಮ್ಮ ಮೊಬೈಲ್ ಎತ್ತಿಕೊಂಡು ಈ ದೃಶ್ಯವನ್ನು ವಿಡಿಯೊ ಮೂಲಕ ಸೆರೆ ಹಿಡಿದಿದ್ದಾರೆ. ಸುಮಾರು ನಿಮಿಷಗಳ ಕಾಲ ಈ ಹಾವುಗಳು ಮಿಲನದಲ್ಲಿ ಭಾಗಿಯಾಗಿದ್ದವು. ಕೊನೆಗೆ ಹನುಮೇಶ್‌ ಹತ್ತಿರದಲ್ಲೇ ಇರುವುದನ್ನು ತಿಳಿದು ಅಲ್ಲಿಂದ ಗದ್ದೆಯತ್ತ ಅವಸರವಸರವಾಗಿ ಚಲಿಸಿವೆ.

ಮನುಷ್ಯರು ಇರುವ ಸೂಚನೆ ಸಿಗುತ್ತಿದ್ದಂತೆ ರಸ್ತೆಯಿಂದ

ಇದನ್ನೂ ಓದಿ: Vinay Kulakarni: ಧಾರವಾಡಕ್ಕೆ ಬರುವ ವಿನಯ್‌ ಕುಲಕರ್ಣಿ ಆಸೆಗೆ ತಣ್ಣೀರು; ಅನುಮತಿ ನೀಡದ ಕೋರ್ಟ್‌!

ತಜ್ಞರು ಏನಂತಾರೆ?

ನಂಜೇದೇವನಪುರ ಗ್ರಾಮದ ಜಮೀನಿನಲ್ಲಿ ಹಾವುಗಳನ್ನು ಕಂಡ ಕೂಡಲೇ ನಾಗರಿಕರು ಅದನ್ನು ಓಡಿಸುವ ಕೆಲಸವನ್ನು ಮಾಡದಿರುವುದು ಶ್ಲಾಘನೆಗೆ ಪಾತ್ರವಾಗಿದೆ. ಕಾರಣ, ಇಂಥ ಸಂದರ್ಭದಲ್ಲಿ ಜನರು ಗಾಬರಿ ಬೀಳಬಾರದು. ಅಲ್ಲದೆ, ಅವುಗಳಿಗೆ ತೊಂದರೆಯನ್ನೂ ಮಾಡಬಾರದು ಎಂಬುದು ವನ್ಯಜೀವಿ ತಜ್ಞರ ಅಭಿಮತವಾಗಿದೆ.

ಪ್ರಕೃತಿ ಸಮತೋಲನ ಕಾಯ್ದುಕೊಳ್ಳಬೇಕೆಂದರೆ ಪ್ರತಿಯೊಂದು ಜೀವಿಗಳ ಅವಶ್ಯಕತೆ ಬಹಳವೇ ಇರುತ್ತದೆ. ಯಾವುದೇ ಒಂದರ ಕೊರತೆಯಾದರೂ ಕೊಂಡಿ ತಪ್ಪುವುದಲ್ಲದೆ, ಪರಿಸರದಲ್ಲಿ ಅಸಮತೋಲನಕ್ಕೆ ಕಾರಣವೂ ಆಗುತ್ತದೆ. ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಹಾವುಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ. ಅವುಗಳು ತಮ್ಮದೇ ಆದ ರೀತಿಯಲ್ಲಿ ಪರಿಸರಕ್ಕೆ ಕೊಡುಗೆಯನ್ನು ನೀಡುತ್ತಿರುತ್ತವೆ. ಜತೆಗೆ ಸೂಕ್ಷ್ಮ ಜೀವರಾಶಿಗಳ ನಿಯಂತ್ರಣದಲ್ಲಿ ಇವುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಪರಿಸರ ತಜ್ಞರು ಹೇಳುತ್ತಾರೆ.

ಇನ್ನು ಸೊಳ್ಳೆಗಳು ಮತ್ತದರ ಮೊಟ್ಟೆಗಳನ್ನು ಹಾವಿನ ಮರಿಗಳು ತಿನ್ನುತ್ತವೆ. ಹೀಗಾಗಿ ಸೊಳ್ಳೆಗಳ ನಿಯಂತ್ರಣವು ಆಗುವುದರಿಂದ ಅವುಗಳಿಂದ ಹರಡುವ ಸೋಂಕುಗಳು ಸಹ ನಿಯಂತ್ರಣವಾಗುತ್ತವೆ.

ಹೇಗೆ ನಡೆಯುತ್ತವೆ ಮಿಲನ?

ಎಲ್ಲರಿಗೂ ಒಂದು ಕುತೂಹಲ ಇದ್ದೇ ಇರುತ್ತವೆ. ಹಾವುಗಳ ಮಿಲನ ಪ್ರಕ್ರಿಯೆ ಹೇಗೆ ನಡೆಯುತ್ತವೆ? ಅವುಗಳಿಗೆ ಪರಸ್ಪರ ಮಿಲನ ಸೂಕ್ಷ್ಮಗಳು ಹೇಗೆ ಗೊತ್ತಾಗುತ್ತದೆ ಎಂಬ ಕುತೂಹಲ ಇರುತ್ತದೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಹೆಣ್ಣು ಹಾವುಗಳು!

ಇದನ್ನೂ ಓದಿ: Viral News: ರೈಟ್‌ ರೈಟ್‌..! ಅಯ್ಯೋ ಇಲ್ಲಿ ಬಸ್‌ ನಿಲ್ಸೋದೆ ಇಲ್ಲ; ಬಸ್‌ಗೆ ಅಡ್ಡ ಬಂದು ಬುಸ್‌ಗುಟ್ಟಿದ ರೇಣುಕಾಚಾರ್ಯ!

ಹೌದು. ಹೆಣ್ಣು ಹಾವುಗಳಿಗೆ ಮಿಲನದ ಬಯಕೆ ಆಗುತ್ತದೆ. ಆಗ ಹೆಣ್ಣು ಹಾವು ಪರಿಸರ ಪ್ರದೇಶಕ್ಕೆ ಬಂದು ಗಂಡು ಹಾವುಗಳನ್ನು ಆಕರ್ಷಿಸಲು ಫೆರೋಮೋನ್‌ ಎಂಬ ದ್ರವ್ಯವನ್ನು ಹೊರಸೂಸುತ್ತದೆ. ಈ ದ್ರವ್ಯವು ಎಲ್ಲ ಹಾವುಗಳಲ್ಲಿ ಸಾಮಾನ್ಯವಾಗಿರುತ್ತವೆ. ಈ ದ್ರವ್ಯವನ್ನು ಹೆಣ್ಣು ಹಾವುಗಳು ಹೊರಸೂಸಿವೆ ಎಂದಾದರೆ, ಅದು ಮಿಲನ ಕ್ರಿಯೆಗೆ ಆಹ್ವಾನ ನೀಡಿದಂತೆ. ಆಗ ಗಂಡು ಹಾವುಗಳು ಈ ವಾಸನೆಯನ್ನು ಗ್ರಹಿಸಿ ಅಲ್ಲಿಗೆ ಬರುತ್ತವೆ. ಮಿಲನದಲ್ಲಿ ತೊಡಗುತ್ತವೆ. ಇನ್ನು ಕೆಲವು ಸಂದರ್ಭದಲ್ಲಿ ಹಾವುಗಳು ಯಾವುದಾದರೂ ದಾಳಿಗೆ ತುತ್ತಾಗಿದ್ದರೆ ಇಲ್ಲವೇ ಅಪಾಯದ ಮುನ್ಸೂಚನೆಯಲ್ಲಿದ್ದರೂ ಈ ಫೆರೋಮೋನ್‌ ದ್ರವ್ಯವನ್ನು ಹೊರಸೂಸುತ್ತವೆ. ಆಗ ಈ ವಾಸನೆ ಗ್ರಹಿಸಿ ಆ ಜಾತಿಯ ಹಾವುಗಳು ಸ್ಥಳಕ್ಕೆ ಬರುತ್ತವೆ ಎಂದು ಉರಗ ತಜ್ಞರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Exit mobile version