Site icon Vistara News

Solar Eclipse 2022 | ಗ್ರಹಣದ ಆಚರಣೆ ಮೂಢನಂಬಿಕೆ ಎಂದು ಮಾಂಸಾಹಾರ ಸೇವಿಸಿದರು!

ಆನೇಕಲ್: ಸೂರ್ಯಗ್ರಹಣ (Solar Eclipse 2022) ಸಂದರ್ಭದಲ್ಲಿ ಪೂಜೆ-ಪುನಸ್ಕಾರ, ಹೋಮ-ಹವನಗಳು ನಡೆಯುತ್ತಿದ್ದರೆ, ಇತ್ತ ಸೂರ್ಯಗ್ರಹಣದ ಸಂದರ್ಭದಲ್ಲಿ ಮಾಡುವ ಆಚರಣೆಗಳು ಮೂಢನಂಬಿಕೆ ಎಂದು ವಿರೋಧಿಸಿದ ಸಾಹಿತಿಗಳು ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

“ವಿಜ್ಞಾನದ ಕಡೆಗೆ ನಮ್ಮ ನಡಿಗೆ” ಎಂದು ಘೋಷವಾಕ್ಯದೊಂದಿಗೆ ಆನೇಕಲ್ ತಾಲೂಕಿನ ಬಂಡಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿಗಳು, ಹೋರಾಟಗಾರರು ಭಾಗಿಯಾಗಿದ್ದರು.

ಆನೇಕಲ್ ಮೌಢ್ಯ ವಿರೋಧಿ ವೇದಿಕೆಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೂರ್ಯಗ್ರಹಣದ ವೇಳೆಯೇ ಹಣ್ಣು, ಮೊಟ್ಟೆ, ಮಾಂಸ ಹಾಗೂ ವಿವಿಧ ರೀತಿಯ ಆಹಾರವನ್ನು ಸೇವನೆ ಮಾಡಲಾಯಿತು. ಆ ಮೂಲಕ ಸೂರ್ಯಗ್ರಹಣಕ್ಕೆ ಸ್ವಾಗತ ಕೋರಲಾಯಿತು.

ಮೂಢನಂಬಿಕೆ ಬಿಡಿ ವಿಜ್ಞಾನಕ್ಕೆ ಮಹತ್ವ ಕೊಡಿ‌. ಗ್ರಹಣದ ಬಗ್ಗೆ ಜ್ಯೋತಿಷಿಗಳ ಮಾತು ನಂಬಬೇಡಿ ಎಂದು ಹೇಳಿಕೆ ನೀಡುವ ಮೂಲಕ ಆಹಾರ ಸೇವಿಸಿ ವಿಜ್ಞಾನದ ಮಹತ್ವದ ಕುರಿತು ತಿಳಿಹೇಳಿದರು.

ಇದನ್ನೂ ಓದಿ | Solar Eclipse 2022 | ಗ್ರಹಣ ವೇಳೆ ಒನಕೆ ಪರೀಕ್ಷೆ ಯಶಸ್ವಿ; ಮೋಕ್ಷವಾಗುತ್ತಿದ್ದಂತೆ ನೆಲಕ್ಕುರುಳಿತು!

Exit mobile version