ರಿಪ್ಪನ್ಪೇಟೆ : ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಟ್ಟಣದ ಶಬರೀಶ ನಗರದ ನಿವಾಸಿ ಯೋಧ ಸಂದೀಪ್ (27) ಅಸ್ಸಾಂನ ಮಣಿಪುರದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಸೋಮವಾರ (ಮಾ.20) ಬೆಳಗ್ಗೆ ಮೃತಪಟ್ಟಿದ್ದಾರೆ (Soldier Death).
ಮಣಿಪುರದ ಅಸ್ಸಾಂ ರೈಫಲ್ಸ್ನಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತಿದ್ದ ಸಂದೀಪ್ ಅವರು ರಿಪ್ಪನ್ಪೇಟೆ ಗ್ರಾಪಂ ಸದಸ್ಯರಾದ ವಿನೋದಮ್ಮ ಹಿರಿಯಣ್ಣ ಅವರ ಪುತ್ರರಾಗಿದ್ದಾರೆ.
ತಾವು ಕರ್ತವ್ಯ ನಿರ್ವಹಿಸುತಿದ್ದ ಸ್ಥಳದಲ್ಲಿ ವೈಯಕ್ತಿಕ ಕಾರಣಗಳಿಂದ ಬೇಸತ್ತು ಸೋಮವಾರ (ಮಾ.20) ಮುಂಜಾನೆ ತಾವೇ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.
ಇದನ್ನೂ ಓದಿ: Karnataka Election 2023: ಜೀವರಾಜ್ಗೆ ಪಕ್ಷೇತರ ಬಿಸಿ; ಅಭ್ಯರ್ಥಿ ಕಣಕ್ಕಿಳಿಸಲು ಹಿಂದು ಬ್ರಿಗೇಡ್ ಸಜ್ಜು