ಬಳ್ಳಾರಿ: ಬಿಜೆಪಿಗೆ ಸಡ್ಡು ಹೊಡೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಸ್ಥಾಪಿಸಿರುವ ಗಾಲಿ ಜನಾರ್ದನ ರೆಡ್ಡಿ (Janardhana Reddy) ಅವರಿಗೆ ಅವರ ಜತೆ ಈ ಹಿಂದೆ ಇದ್ದ ಯಾರ ಬೆಂಬಲವೂ ಸಿಗುವ ಲಕ್ಷಣ ಕಾಣಿಸುತ್ತಿಲ್ಲ. ಈ ನಡುವೆ ಅವರ ಸಹೋದರ ಸೋಮಶೇಖರ್ ರೆಡ್ಡಿ ಅವರು ಕೂಡಾ ಜನಾರ್ದನ ರೆಡ್ಡಿ ಬೆಂಬಲ ನೀಡುವ ಲಕ್ಷಣಗಳು ಕಾಣಿಸುತ್ತಿಲ್ಲ.
ಇದನ್ನು ಪರೋಕ್ಷವಾಗಿ ಸ್ವತಃ ಸೋಮಶೇಖರ ರೆಡ್ಡಿ ಅವರೇ ಹೇಳಿದ್ದಾರೆ. ಆ ಮೂಲಕ ಕಾರ್ಯಕರ್ತರ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಬಳ್ಳಾರಿ ನಗರದಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸೋಮಶೇಖರ ರೆಡ್ಡಿ ಅವರು, ʻʻನನ್ನ ಜೀವನ ಇರುವವರೆಗೂ ಬಿಜೆಪಿ ಪಕ್ಷದಲ್ಲಿ ಇರುತ್ತೇನೆ, ಮನೆಯ ಮೇಲೆ ಹಾರಾಡುತ್ತಿರುವ ಬಿಜೆಪಿ ಬಾವುಟ ತೆಗೆಯಲ್ಲ, ಕಾರ್ಯಕರ್ತರು ಯಾವುದೇ ಕಾರಣಕ್ಕೂ ಗೊಂದಲ ಆಗಬಾರದುʼʼ ಎಂದಿದ್ದಾರೆ.
ʻʻಶ್ರೀರಾಮುಲು ಬಿಜೆಪಿ ಪಕ್ಷವನ್ನು ಫಾಲೋ ಮಾಡುತ್ತಿದ್ದಾರೆ, ನಾನು ಶ್ರೀರಾಮುಲು ಅವರನ್ನು ಫಾಲೋ ಮಾಡುತ್ತೇನೆ, ನನ್ನ ರಾಜಕೀಯ ಬೆಳವಣಿಗೆಗೆ ಶ್ರೀರಾಮುಲು ಕಾರಣ. ನಾನು ನಗರಸಭೆ ಉಪಾಧ್ಯಕ್ಷ ಹುದ್ದೆಯಿಂದ ಹಿಡಿದು ಶಾಸಕ ವರೆಗೆ ಆಗಲು ಶ್ರೀರಾಮುಲು ಅವರೇ ಕಾರಣʼʼ ಎಂದು ಹೇಳಿದರು.
ಶ್ರೀರಾಮುಲು ಮುಂದೆ ರಾಜಕೀಯವಾಗಿ ದೊಡ್ಡ ನಾಯಕರಾಗಿ ಬೆಳೆಯುತ್ತಾರೆ ಎಂದು ಶ್ರೀರಾಮುಲು ಅವರನ್ನು ಹಾಡಿ ಹೊಗಳಿದರು ಶಾಸಕ ಸೋಮಶೇಖರ್ ರೆಡ್ಡಿ.
ಇದನ್ನೂ ಓದಿ | Gali Janardhana Reddy | ಜನಾರ್ದನ ರೆಡ್ಡಿಗೆ ಆರಂಭದಲ್ಲೇ ಹ್ಯಾಕರ್ಸ್ ಹಾವಳಿ