ಚಿಕ್ಕಬಳ್ಳಾಪುರ: ಭಾನುವಾರ ನಡೆದ ಕ್ರಿಕೆಟ್ ಮ್ಯಾಚ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆದ್ದಿದ್ದರಿಂದ ಕೆಲವರಿಗೆ ಭಾರಿ ಬೇಸರವಾಗಿದೆ: ಹೀಗೆಂದು ಹೇಳಿದ್ದಾರೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರು.
ಇಡೀ ದೇಶವೇ ಭಾನುವಾರದ ಪಂದ್ಯದಿಂದ ಥ್ರಿಲ್ಲೆದ್ದು ಹೋಗಿದೆ. ಕೊನೆಯ ಎಸೆತದ ವರೆಗೂ ಕುತೂಹಲ ಉಳಿಸಿಕೊಂಡ ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತ್ತು. ಪಾಕಿಸ್ತಾನ ಮೊದಲು ಬ್ಯಾಟಿಂಗ್ ನಡೆಸಿ ೧೫೯ ರನ್ ಗಳಿಸಿದ್ದರೆ, ಭಾರತ ಕೊನೆಯ ಎಸೆತದಲ್ಲಿ ೧೬೦ ರನ್ ಗಳಿಸಿ ಗೆದ್ದು ಬೀಗಿತ್ತು. ಆದರೆ, ಕೆಲವರಿಗೆ ಈ ಗೆಲುವಿನಿಂದ ಬೇಸರವಾಗಿದೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಅವರು ಚಿಕ್ಕಬಳ್ಳಾಪುರದಲ್ಲಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ನಡೆದ ಆರ್ ಎಸ್ ಎಸ್ ಪಥ ಸಂಚಲನ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ʻʻʻದೇಶದಲ್ಲಿ ಇನ್ನೂ ಭಯೋತ್ಪಾದಕ ಮುಸ್ಲಿಂರ ಹಾವಳಿ ನಿಂತಿಲ್ಲ. ಎಲ್ಲಾ ಮುಸ್ಲಿಮರು ಭಯೋತ್ಪಾದಕರಲ್ಲ. ಅವರಲ್ಲೂ ಒಳ್ಳೆಯವರು ಇದ್ದಾರೆ. ಎ.ಪಿ.ಜೆ. ಅಬ್ದುಲ್ ಕಲಾಂ, ಅಬ್ದುಲ್ ನಜೀರ್ ಸಾಬ್, ಕೆ.ಕೆ ಮಹಮದ್ ಮೊದಲಾದವರು ಒಳ್ಳೆಯವರೇ ಇದ್ದರುʼʼ ಎಂದರು.
ʻʻಆದರೆ ಕೆಲವರು ಯಾವಾಗಲೂ ಪಾಕಿಸ್ತಾನದ ಬಗ್ಗೆಯೇ ಚಿಂತಿಸುತ್ತಾರೆ. ಭಾನುವಾರ ಭಾರತ-ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ನಡೆದಿತ್ತು. ಅದರಲ್ಲಿ ಭಾರತ ಗೆದ್ದಿದ್ದಕ್ಕೆ ತುಂಬಾ ಜನಕ್ಕೆ ಬೇಸರವಾಗಿದೆ. ಪಾಕಿಸ್ತಾನ ಗೆದ್ದಿದ್ರೆ ತುಂಬಾ ಜನರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಿದ್ದರು. ಅಂತಹ ಮನಸ್ಥಿತಿ ನಮ್ಮ ದೇಶದಲ್ಲಿ ಕೆಲವು ಮಸ್ಲಿಮರಿಗೆ ಇದೆ. ಭಾರತವನ್ನು ಪಾಕಿಸ್ತಾನ ಮಾಡ್ತೇವೆ ಎಂಬ ನಿಲುವನ್ನೂ ಇನ್ನೂ ಹೊಂದಿದ್ದಾರೆʼʼ ಎಂದು ಅವರು ಕಾಲೆಳೆದರು.
ಇದನ್ನೂ ಓದಿ | IND VS PAK | ಪಾಕ್ ವಿರುದ್ಧ ಭಾರತದ ಗೆಲುವಿನಿಂದ ಟಿ20 ವಿಶ್ವ ಸಮರಕ್ಕೆ ಮತ್ತಷ್ಟು ರಂಗು