Site icon Vistara News

Murder Case : ಭೂಸ್ವಾಧೀನ ಹಣಕ್ಕಾಗಿ ತಂದೆಯನ್ನೇ ಕೊಂದು ಹೂತಿಟ್ಟ ಕಿರಾತಕ!

Son kills father for land acquisition in raichur

ರಾಯಚೂರು: ಭೂಮಿ, ಹಣಕ್ಕಾಗಿ ಮಾನವೀಯ ಸಂಬಂಧಗಳು ಹದಗೆಡುತ್ತಿವೆಯೇ? ಎಂಬ ಸಂಶಯ ಮೂಡತೊಡಗಿವೆ. ಇತ್ತೀಚೆಗೆ ಕುಟುಂಬಗಳಲ್ಲಿಯೇ ಕಲಹಗಳು (Quarrels within families) ಏರ್ಪಡುತ್ತಿದ್ದು, ಹಣ, ಆಸ್ತಿಗಾಗಿ ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು, ಮಕ್ಕಳನ್ನು ಅಪ್ಪ, ಅಪ್ಪನನ್ನು ಮಕ್ಕಳು ಕೊಲೆ ಮಾಡುವಂತಹ ಪ್ರಕರಣಗಳು ಕಂಡುಬರುತ್ತಿವೆ. ಈ ನಡುವೆ ತಾಲೂಕಿನ ವಡ್ಲೂರು ಗ್ರಾಮದಲ್ಲಿ ಮಗನಿಂದಲೇ ತಂದೆಯ ಭೀಕರ ಹತ್ಯೆ ಯಾಗಿರುವ (Murder Case) ಘಟನೆ ಬೆಳಕಿಗೆ ಬಂದಿದೆ. ಅಲ್ಲದೆ, ತಂದೆಯ ಶವವನ್ನು ಹೂತಿಟ್ಟು ಏನೂ ಆಗದೇ ಇರುವವನಂತೆ ಆತ ನಟಿಸಿದ್ದಾನೆ. ಕಿರಾತಕ ಮಗನ ದುಷ್ಕೃತ್ಯ ಈಗ ಬಯಲಾಗಿದೆ.

ರಾಯಚೂರು ತಾಲೂಕು ವಡ್ಲೂರು ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಈರಣ್ಣ (36) ಎಂಬಾತ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಶಿವನಪ್ಪ (70) ಮಗನಿಂದ ಹತ್ಯೆಗೆ ಒಳಗಾದ ತಂದೆಯಾಗಿದ್ದಾರೆ. ಸುಮಾರು 15 ದಿನಗಳ ಹಿಂದೆಯೇ ಕೊಲೆ ಮಾಡಿ ಹೂತಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಭೂಸ್ವಾಧೀನ ಹಣಕ್ಕಾಗಿ (Land Acquisition Money) ಈ ಹತ್ಯೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: Gruha lakshmi Scheme : ಗೃಹಲಕ್ಷ್ಮಿಗೆ ಆರಂಭದಲ್ಲೇ ವಿಘ್ನ; ಅರ್ಜಿ ಸ್ವೀಕಾರಕ್ಕೆ ಗ್ರಾಮ ಒನ್‌ ನಕಾರ!

ಭೂಸ್ವಾಧಿನ ಹಣಕ್ಕಾಗಿ ತಂದೆ-ಮಗ ಇಬ್ಬರೂ ಜಗಳವಾಡಿದ್ದರು. ಭಾರತ ಮಾಲಾ ಯೋಜನೆ (Bharatmala Project) ಸಂಬಂಧ 25 ಲಕ್ಷ ರೂಪಾಯಿಯು ಪರಿಹಾರ (Compensation of Rs 25 lakh) ರೂಪವಾಗಿ ಕುಟುಂಬಕ್ಕೆ ಬಂದಿತ್ತು. ಇದೇ ವಿಚಾರಕ್ಕೆ ನಿತ್ಯ ತಂದೆ ಮತ್ತು ಮಗನ ನಡುವೆ ಜಗಳ ನಡೆಯುತ್ತಿತ್ತು. ಆ ಹಣವನ್ನು ತನಗೆ ಕೊಡುವಂತೆ ಮಗ ಈರಣ್ಣ ಒತ್ತಾಯಿಸಿದ್ದ. ಆದರೆ, ತಂದೆ ಶಿವನಪ್ಪ ಒಪ್ಪಿರಲಿಲ್ಲ. ಕೊನೆಗೆ ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.

ಅಪ್ಪನನ್ನೇ ಕೊಂದು ಹೂತುಹಾಕಿದ ಕಿರಾತಕ

ತಂದೆಯನ್ನು ಕೊಲೆ ಮಾಡಿದ ಬಳಿಕ ಶವವನ್ನು ಹೂತು ಹಾಕಿದ್ದ ಈರಣ್ಣ, ಏನೂ ಆಗಲಿಲ್ಲ ಎಂಬಂತೆ ಇದ್ದ. ಕೊನೆಗೆ ಸೀದಾ ಪೊಲೀಸ್‌ ಠಾಣೆಗೆ ಹೋಗಿ ಪೊಲೀಸ್‌ ಠಾಣೆಗೆ ಹೋಗಿ ತಂದೆ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದ. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆಯನ್ನು ಆರಂಭಿಸಿದ್ದಾರೆ.

ಈತನ ಮನೆ ಹಾಗೂ ಸುತ್ತಮುತ್ತಲೂ ವಿಚಾರಣೆ ನಡೆಸಿದ್ದಾರೆ. ಆಗ ಅಪ್ಪ ಮತ್ತು ಮಗನ ನಡುವೆ ಆಗಾಗ ಜಗಳಗಳು ನಡೆಯುತ್ತಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. ಜತೆಗೆ ಈರಣ್ಣ ನೀಡುತ್ತಿದ್ದ ಹೇಳಿಕೆ ಮೇಲೂ ಅನುಮಾನ ಮೂಡಿದೆ. ಹೀಗಾಗಿ ಆತನನ್ನು ವಶಕ್ಕೆ ಪಡೆದು ಬಲವಾಗಿ ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Road Accident : ಅಪಘಾತವಾಗಿ ಗಂಟೆಗಟ್ಟಲೆ ನರಳಿದರೂ ಕೈಕಟ್ಟಿ ನೋಡಿದ ಜನ!

ಪೊಲೀಸ್ ಠಾಣೆಯಲ್ಲಿ ತಂದೆ ಹತ್ಯೆಗೈದಿರೋ ಬಗ್ಗೆ ಸತ್ಯ ಬಯಲಾಗಿದೆ. ಹೂತಿಟ್ಟಿರುವ ಶವಕ್ಕಾಗಿ ಪೊಲೀಸರ ಹುಡುಕಾಟ ಆರಂಭವಾಗಿದೆ. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version