Site icon Vistara News

Sonu Srinivas Gowda: ಸೋನು ಗೌಡಗೆ 4 ದಿನ ಪೊಲೀಸ್‌ ಕಸ್ಟಡಿ; ಸೋಮವಾರ ಮತ್ತೆ ಕೋರ್ಟ್‌ನಲ್ಲಿ ವಿಚಾರಣೆ

sonu dowda

ಬೆಂಗಳೂರು: ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಹಿನ್ನೆಲೆ ಬಂಧನವಾಗಿರುವ ‘ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1’ರ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡರನ್ನು (Sonu Srinivas Gowda) ನಾಲ್ಕು ದಿನ ಪೊಲೀಸ್‌ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶಿಸಿದೆ. ಹೀಗಾಗಿ ಅವರನ್ನು ಪೊಲೀಸರು ಕೋರ್ಟ್‌ನಿಂದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಿದ್ದಾರೆ.

ಏಳು ವರ್ಷದ ಮಗುವನ್ನು ಕಾನೂನು ಬಾಹಿರವಾಗಿ ದತ್ತು ಪಡೆದ ಹಿನ್ನೆಲೆಯಲ್ಲಿ ಸೋನು ಶ್ರೀನಿವಾಸ್ ಗೌಡರನ್ನು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿ, ಕೋರ್ಟ್​ಗೆ ಹಾಜರು ಪಡಿಸಿದ್ದರು. ಹೀಗಾಗಿ ನ್ಯಾಯಾಧೀಶರು, ಇಂದಿನಿಂದ ನಾಲ್ಕು ದಿನಗಳ ಕಾಲ ಸೋನು ಗೌಡ ಅವರನ್ನು ಕಸ್ಟಡಿಗೆ ನೀಡಲು ಆದೇಶಿಸಿದ್ದು, ಸೋಮವಾರ ಮತ್ತೆ ಕೋರ್ಟ್​ಗೆ ಹಾಜರುಪಡಿಸಲು ಸೂಚನೆ ನೀಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಒಟಿಟಿ 1’ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ಉತ್ತರ ಕರ್ನಾಟಕದ 8 ವರ್ಷದ ಸೇವಂತಿ ಎನ್ನುವ ಬಡ ಹುಡುಗಿಯನ್ನು ದತ್ತು ತೆಗೆದುಕೊಂಡಿದ್ದರು. ಆದರೆ, ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆಯಲಾಗಿದೆ ಎಂದು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಲ್ಯಾಣ ಇಲಾಖೆ ದೂರು ದಾಖಲಿಸಿತ್ತು. ದತ್ತು ತೆಗೆದುಕೊಂಡ ಮಕ್ಕಳ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಳ್ಳುವಂತಿಲ್ಲ. ಆದರೆ ಸೋನುಗೌಡ ವಿಡಿಯೊದಲ್ಲಿ ಮಗುವಿನ ಮಾಹಿತಿ ಹಂಚಿಕೊಂಡ ಹಿನ್ನೆಲೆಯಲ್ಲಿ ಜೆಜೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು, ಸೋನು ಗೌಡ ಅವರನ್ನು ಪೊಲೀಸರು ಬಂಧಿಸಿದ್ದರು.

ದತ್ತು ಪ್ರಕರಣದಲ್ಲಿ ಸೋನು ಗೌಡ ಅರೆಸ್ಟ್‌; ರೂಲ್ಸ್ ಏನು ಹೇಳುತ್ತವೆ?

ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಒಟಿಟಿ 1’ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ಸೇವಂತಿ ಎನ್ನುವ ಬಡ ಹುಡುಗಿಯನ್ನು ದತ್ತು ತೆಗೆದುಕೊಂಡಿದ್ದರು. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಲ್ಯಾಣ ಇಲಾಖೆಯಿಂದ ಈ ವಿಚಾರವಾಗಿ ಸೋನು ಗೌಡ (Sonu Srinivas Gowda Arrested) ವಿರುದ್ಧ ದೂರ ದಾಖಲಾಗಿದೆ. ಹಾಗಾದರೆ ಅವರು ಬಂಧನಕ್ಕೆ ಒಳಗಾಗೋಕೆ ಕಾರಣ ಏನು? ಮುಂದೆ ಓದಿ.

ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಸೋನು ಶ್ರೀನಿವಾಸ್ ಗೌಡ ಬಂಧನ ಮಾಡಿದ್ದಾರೆ. ಏಳು ವರ್ಷದ ಮಗುವನ್ನು ಕಾನೂನು ಬಾಹಿರವಾಗಿ ಅವರು ದತ್ತು ಪಡೆದಿದ್ದರು. ಇದೀಗ ಜೆ.ಜೆ.ಆ್ಯಕ್ಟ್ ಅಡಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿಕೊಂಡು ಬಂಧಿಸಿದ್ದಾರೆ.

ಏನಿದು ನಿಯಮ?

ದತ್ತು ತೆಗೆದುಕೊಳ್ಳಬೇಕಾದರೆ‌ ಕೆಲವೊಂದು ನಿಯಮ ಪಾಲಿಸಬೇಕಾಗುತ್ತದೆ. ದತ್ತು ತೆಗೆದುಕೊಳ್ಳುವ ತಾಯಿ ಮತ್ತು ಮಗುವಿಗೆ 25 ವರ್ಷಗಳ ಅಂತರವಿರಬೇಕು. ಆದರೆ ಇಲ್ಲಿ ಮಗುವಿಗೆ 8 ವರ್ಷ ಮತ್ತು ಆಕೆಗೆ 26 ವರ್ಷ. ಹೀಗಾಗಿ ಅದು ನಿಯಮ ಉಲ್ಲಂಘನೆ ಮಾಡಿದಂತಾಗತ್ತದೆ. ಇನ್ನು ರೀಲ್ಸ್‌ ಮಾಡುವ ಉದ್ದೇಶದಿಂದ ಸೋನು ಮಗುವನ್ನು ತನ್ನಿಷ್ಟ ಬಂದಂತೆ ಬಳಸಿಕೊಂಡಿದ್ದಾಳೆಂಬ ಆರೋಪ ಕೂಡ ಇದೆ. ಮಕ್ಕಳ ಕಲ್ಯಾಣ ಸಮಿತಿ ಈ ಎಲ್ಲ ಆಧಾರದ ಮೇಲೆ ಸೋನು ವಿರುದ್ಧ ದೂರು ದಾಖಲಿಸಿದೆ.

ಇದನ್ನೂ ಓದಿ: Sonu Srinivas Gowda: ʻಬಿಗ್ ಬಾಸ್ ಕನ್ನಡ ಒಟಿಟಿ 1’ ಖ್ಯಾತಿಯ ಸೋನು ಗೌಡ ಬಂಧನ

ಸೇವಂತಿ ಪರಿಚಯವಾಗಿದ್ದು ಹೇಗೆ?

ಕೆಲ ತಿಂಗಳುಗಳಿಂದ ಸೋನು ಗೌಡ (Sonu Srinivas Gowda) ಅವರು ಸೇವಂತಿ ಎನ್ನುವ ಹುಡುಗಿಗೆ ಮನೆಯಲ್ಲಿ ಊಟ ಹಾಕಿಸೋದು, ಮೂಗು ಸುಚ್ಚಿಸಿ ಮೂಗುತಿ ಹಾಕೋದು, ಊಟ ಮಾಡಿಸುವ ವಿಡಿಯೊ ಮಾಡಿ, ಅದನ್ನು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. “ಮನೆಯ ಸುತ್ತ ಇರುವ ನಾಯಿಗಳಿಗೆ ಬಿಸ್ಕಟ್ ಹಾಕುವಾಗ ನನಗೆ ಸೇವಂತಿ ಎನ್ನುವ 7 ವರ್ಷದ ಮಗುವಿನ ಪರಿಚಯ ಆಯ್ತು ಎಂದು ಸೋನು ಹೇಳಿಕೊಂಡಿದ್ದರು. ಮಾತ್ರವಲ್ಲ ಈ ಮುಂಚೆ ಸೇವಂತಿಯನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದರೆ ಅವರ ತಾಯಿ ಒಪ್ಪಿಲ್ಲ. ಬಳಿಕ ಕಾನೂನ ಪ್ರಕಾರ ಸೇವಂತಿಯನ್ನು ಪಡೆದೆ. ಅದಕ್ಕೆ 3 ತಿಂಗಳುಗಳೇ ತೆಗೆದುಕೊಂಡಿದೆ. ಬಡ ಹುಡುಗಿಯನ್ನು ಮನೆಗೆ ಕರೆದುಕೊಂಡು ಬಂದಿದ್ದೀನಿ ಅಂತ ಅಂದ್ರೆ ಮೆಚ್ಚುಗೆ ಸೂಚಿಸಿ, ಇಲ್ಲ ಅಂದ್ರೆ ಸುಮ್ಮನೆ ಇರಿ. ನೆಗೆಟಿವ್ ಕಮೆಂಟ್ ಮಾಡುವರಿಗೆ ನಾನು ಸೈಬರ್ ಕ್ರೈಂ ಕೊಡ್ತೀನಿʼʼಎಂದು ಸೋನು ಈ ಹಿಂದೆ ವಿಡಿಯೊ ಮೂಲಕ ಹೇಳಿಕೊಂಡಿದ್ದರು.

ಇದನ್ನೂ ಓದಿ: Sonu Srinivas Gowda: ಟ್ರೋಲ್‌ ಮೂಲಕವೇ ಸುದ್ದಿಯಾಗೋ ಸೋನು ಗೌಡ ಆದಾಯ ಎಷ್ಟು?

ಮಗು ದತ್ತು ಸಂಬಂಧ ಸೋನು ಗೌಡ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಲ್ಯಾಣ ಇಲಾಖೆಯಿಂದ ದೂರು ದಾಖಲಾಗಿತ್ತು. ಬಿಗ್‌ ಬಾಸ್‌ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ (sonu srinivas gowda) ತಮ್ಮ ಫೋಟೊ, ರೀಲ್ಸ್‌, ವಿಡಿಯೊ ಮೂಲಕ ಟ್ರೋಲ್‌ಗೆ (Sonu Gowda) ಗುರಿಯಾಗುತ್ತಲೇ ಇರುತ್ತಾರೆ.

Exit mobile version