ಬೆಂಗಳೂರು: ಪ್ರಯಾಣಿಕರಿಂದ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಬೆಂಗಳೂರು ಮತ್ತು ತಮಿಳುನಾಡಿನ ಕೊಯಮತ್ತೂರು (Bengaluru To Coimbatore) ನಡುವೆ ಶೀಘ್ರವೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭಿಸಲಿದೆ(Vande bharat Express train). ಈಗಾಗಲೇ ಬೆಂಗಳೂರು-ಧಾರವಾಡ (Bengaluru-Dharwad) ಮತ್ತು ಚೆನ್ನೈ-ಮೈಸೂರು (Chennai-Mysuru) ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತಿವೆ. ಈಗ ಮತ್ತೊಂದು ರೈಲು ಆರಂಭವಾಗುವುದರಿಂದ ಕರ್ನಾಟಕದ ಪ್ರಯಾಣಕರಿಗೆ ಅನುಕೂಲವಾಗಲಿದೆ.
ಇನ್ನು, ಬೆಂಗಳೂರು-ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೈಸ್ ರೈಲು, ಕೊಯಮತ್ತೂರಿಗೆ ಸಂಪರ್ಕ ಕಲ್ಪಿಸುತ್ತಿರುವ ಎರಡನೇ ವಂದೇ ಭಾರತ್ ರೈಲಾಗಲಿದೆ. ಇದಕ್ಕೂ ಮೊದಲು ಚೆನ್ನೈ-ಕೊಯಮತ್ತೂರು ವಂದೇ ಭಾರತ್ ರೈಲು ಚಾಲ್ತಿಯಲ್ಲಿದೆ.
ರೈಲ್ವೆ ಮಂಡಳಿಯಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯ ಪ್ರಾರಂಭದ ಘೋಷಣೆಯನ್ನು ಶೀಘ್ರದಲ್ಲೇ ಮಾಡಲಾಗುವುದು ಎಂದು ಭಾರತೀಯ ಜನತಾ ಪಕ್ಷದ ಕೊಯಮತ್ತೂರು ದಕ್ಷಿಣ ಶಾಸಕ ವನತಿ ಶ್ರೀನಿವಾಸನ್ ಹೇಳಿದ್ದಾರೆ. ಆದರೆ, ಈ ರೈಲು ರಾತ್ರಿ ಸಂಚರಿಸುತ್ತಿದೆಯೇ ಕಾದು ನೋಡಬೇಕು. ರಾತ್ರಿ ಸಂಚಾರದ ರೈಲು ಬೇಕು ಎಂಬ ಬೇಡಿಕೆ ಪ್ರಯಾಣಿಕರಿಂದ ಕೇಳಿ ಬರುತ್ತಿದೆ. ಬೆಂಗಳೂರು-ಕೊಯಮತ್ತೂರು ರೈಲು ರಾತ್ರಿಯಲ್ಲಿ ಸಂಚರಿಸುತ್ತಿದೆಯೇ ಎಂದು ತಿಳಿದು ಬಂದಿಲ್ಲ.
ಹೊಸ ವಂದೇ ಭಾರತ್ ರೈಲು ಕೊಯಮತ್ತೂರು-ಚೆನ್ನೈ ಸೆಂಟ್ರಲ್ ಮಾರ್ಗದಲ್ಲಿ ಕಾರ್ಯನಿರ್ವಹಿಸಿದ ನಂತರ ಕೊಯಮತ್ತೂರುಗೆ ಎರಡನೇ ವಂದೇ ಭಾರತ್ ರೈಲು ಆಗಿರುತ್ತದೆ ಎಂಬುದನ್ನು ಗಮನಿಸಬೇಕು. ಸೆಮಿ ಹೈಸ್ಪೀಡ್ ರೈಲು ಕೊಯಮತ್ತೂರಿನಿಂದ ಬೆಂಗಳೂರಿಗೆ ಎರಡನೇ ಎಕ್ಸ್‌ಪ್ರೆಸ್ ರೈಲು ಆಗಿರುತ್ತದೆ. ಇಲ್ಲಿಯವರೆಗೆ, ಉದಯ ಎಕ್ಸ್‌ಪ್ರೆಸ್ ಎರಡು ನಗರಗಳ ನಡುವಿನ ಪ್ರಯಾಣಿಕರನ್ನು ಅವರು ಸ್ಥಳಗಳಿಗೆ ತಲುಪಿಸುತ್ತಿತ್ತು. ಆದರೆ, ಈ ರೈಲು ಯಾವಾಗ ಚಾಲನೆಗೊಳ್ಳಲಿದೆ ಎಂಬ ಮಾಹಿತಿ ಇಲ್ಲ.
ಬೆಳಗಾವಿಗೂ ವಂದೇ ಭಾರತ್ ವಿಸ್ತರಿಸಿ; ರೈಲ್ವೆ ಸಚಿವರಿಗೆ ಸಿಎಂ ಪತ್ರ
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express) ಬೆಳಗಾವಿ (Belagavi Region) ತನಕ ವಿಸ್ತರಣೆ ಮಾಡಿ ಎಂದು ರೈಲ್ವೆ ಸಚಿವರಿಗೆ (Minister of Railways) ಸಿಎಂ ಸಿದ್ದರಾಮಯ್ಯ (CM Siddaramaiah) ಪತ್ರ ಬರೆದು ಕೋರಿದ್ದಾರೆ.
ವಂದೇ ಭಾರತ್ ರೈಲನ್ನು ಬೆಳಗಾವಿ ವರೆಗೆ ವಿಸ್ತರಣೆ ಮಾಡುವುದರಿಂದ ವಿವಿಧ ಕಡೆ ಸಂಪರ್ಕ ಸೇರಿದಂತೆ ಹಲವು ರೀತಿಯಿಂದ ಅನುಕೂಲವಾಗುತ್ತದೆ. ಹೀಗಾಗಿ ಈ ಬಗ್ಗೆ ಕೂಡಲೇ ಕ್ರಮವಹಿಸಬೇಕು ಎಂದು ಕೇಂದ್ರ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್‌ಗೆ ಪತ್ರದ ಮುಖೇನ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಬೆಂಗಳೂರಿನಿಂದ – ಹುಬ್ಬಳ್ಳಿ ಧಾರವಾಡ ತನಕ ಇರುವ ವಂದೇ ಭಾರತ್ ರೈಲು ಸಂಪರ್ಕ ಬೆಳಗಾವಿ ತನಕ ವಿಸ್ತರಣೆ ಮಾಡಬೇಕು. ವಂದೇ ಭಾರತ್ ರೈಲು ಸಂಪರ್ಕ ವಿಸ್ತರಣೆಯಿಂದ ಬೆಳಗಾವಿ ಜಿಲ್ಲೆಗೆ ಸಾಕಷ್ಟು ಅನುಕೂಲವಾಗಲಿದೆ. ಬೆಳಗಾವಿ ಜಿಲ್ಲೆಯತನಕ ವಿಸ್ತರಣೆ ಮಾಡಿದರೆ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೂ ಉತ್ತಮ ಸಂಪರ್ಕ ಕಲ್ಪಿಸಲು ಅನುಕೂಲವಾಗಲಿದೆ. ಹೀಗಾಗಿ ವಂದೇ ಭಾರತ್ ರೈಲು ಸಂಪರ್ಕವನ್ನು ಹುಬ್ಬಳ್ಳಿ – ಧಾರವಾಡದಿಂದ ಬೆಳಗಾವಿ ತನಕ ವಿಸ್ತರಣೆ ಮಾಡಿದರೆ ಅನಕೂಲವಾಗಲಿದೆ ಎಂದು ಪತ್ರದ ಮುಖೇನ ಮನವಿ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಕೇರಳದ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಾಂಗ್ರೆಸ್ ಸಂಸದನ ಫೋಟೋಗಳನ್ನು ಅಂಟಿಸಿದ ಕಾರ್ಯಕರ್ತರು