Site icon Vistara News

Soraba News | ಕುಮಾರ್‌ ಬಂಗಾರಪ್ಪಗೆ ಬಿಜೆಪಿ ಟಿಕೆಟ್ ನೀಡಿದರೆ ನಮೋದಿಂದ ಅಭ್ಯರ್ಥಿ ಕಣಕ್ಕೆ; ಪಾಣಿ ರಾಜಪ್ಪ ಎಚ್ಚರಿಕೆ

Namo Vedike Taluk President Pani Rajappa

ಸೊರಬ: ನಮೋ ವೇದಿಕೆಯ ಅಸಮಾಧಾನ ಶಾಸಕ ಕುಮಾರ್ ಬಂಗಾರಪ್ಪ ಅವರ ವಿರುದ್ಧ ಇದೆಯೇ ಹೊರತು ಬಿಜೆಪಿಯ ಸಂಘಟನೆಯ ವಿರುದ್ಧ ಅಲ್ಲ. ಒಂದು ವೇಳೆ ಕುಮಾರ್ ಬಂಗಾರಪ್ಪ ಅವರಿಗೆ ಟಿಕೆಟ್ ನೀಡಿದರೆ ನಮ್ಮ ವೇದಿಕೆಯಿಂದ ಅಭ್ಯರ್ಥಿಯನ್ನು ಕಣ್ಣಕ್ಕಿಳಿಸುವುದು ಖಚಿತ ಎಂದು ನಮೋ ವೇದಿಕೆಯ ತಾಲೂಕು ಅಧ್ಯಕ್ಷ ಪಾಣಿ ರಾಜಪ್ಪ ಎಚ್ಚರಿಕೆ ನೀಡಿದ್ದಾರೆ.

ಪಟ್ಟಣದ ನಮೋ ವೇದಿಕೆ ಕಚೇರಿಯಲ್ಲಿ ಮಂಗಳವಾರ (ಜ.೧೭) ಹಮ್ಮಿಕೊಂಡ ನಮೋ ವೇದಿಕೆಯ ಕಾರ್ಯಕಾರಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರ ಅನುದಾನದಿಂದ ಬಂದ ಕಾಮಗಾರಿಗಳನ್ನು ಇಲ್ಲಿಯ ಶಾಸಕರು ನೆಪ ಮಾತ್ರಕ್ಕೆ ಫ್ರೋಟೋ ಕಾಲ್ ಹಾಕಿಕೊಂಡು ಕಾರ್ಯಕರ್ತರ ಗಮನಕ್ಕೆ ತರದೆ, ಅವರ ಬೆರಳೆಣಿಕೆಯ ಹಿಂಬಾಲಕರನ್ನು ಇಟ್ಟುಕೊಂಡು ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ | Theft at birthday | ಶಾಸಕರ ಜನ್ಮ ದಿನದ ಪಾರ್ಟಿಯಲ್ಲಿ ಕಳ್ಳರ ಕರಾಮತ್ತು: ಆಪ್ತ ಸಹಾಯಕನ ಜೇಬಿನಿಂದ 1 ಲಕ್ಷ ರೂ. ಕಳವು

ತಾಲೂಕಿಗೆ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಬಹಳಷ್ಟು ಅನುದಾನಗಳನ್ನು ನೀಡಿದ್ದಾರೆ. ಆ ಕಾಮಗಾರಿಗಳ ಉದ್ಘಾಟನೆಯಲ್ಲಿ ಶಾಸಕರು ಮಗ್ನರಾಗಿದ್ದಾರೆಯೇ ಹೊರತು ಪಕ್ಷ ಸಂಘಟನೆಯಲ್ಲಿ ತೊಡಗಿಲ್ಲ. ಆದರೆ, ಶಾಸಕ ಕುಮಾರ್ ಬಂಗಾರಪ್ಪ ಅವರು ಪ್ರತಿಷ್ಠೆಯಿಂದಾಗಿ ಕಾರ್ಯಕರ್ತರನ್ನು ದೂರ ಮಾಡಿದ್ದು, ಕಾರ್ಯಕರ್ತರಲ್ಲಿ ಯಾವುದೇ ಉತ್ಸಾಹ ಇಲ್ಲ ಎಂದರು.

ಇದನ್ನೂ ಓದಿ | Arjun Tendulkar | ಮಂಕಡಿಂಗ್​ ರನೌಟ್​ಗೆ ಸಂಪೂರ್ಣ ಬೆಂಬಲ; ಅರ್ಜುನ್​ ತೆಂಡೂಲ್ಕರ್​

ತಾಲೂಕಿನಲ್ಲಿ ವ್ಯಕ್ತಿ ಪ್ರತಿಷ್ಠೆ ಹಾಗೂ ಸಾರ್ವಜನಿಕರ ಅಭಿಪ್ರಾಯಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಶಾಸಕರ ವಿರುದ್ಧವೇ ನಮೋ ವೇದಿಕೆ ಆರಂಭವಾಗಿದೆ. ಈಗಲೂ ಹಾಗೂ ಮುಂದೆಯೂ ವಿರುದ್ಧವಾಗಿಯೇ ಇರಲಿದೆ. ಬೇರೆ ತಾಲೂಕುಗಳಲ್ಲಿ ವರಿಷ್ಠರು ಇಂಥವರೇ ಮುಂದಿನ ಚುನಾವಣಾ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಆದರೆ ನಮ್ಮ ತಾಲೂಕಿನಲ್ಲಿ ಘೋಷಣೆಯಾಗದಿರಲು ಕಾರಣ ವ್ಯಕ್ತಿ ಪ್ರತಿಷ್ಠೆಯನ್ನು ವಿರೋಧಿಸುವ ನಮೋ ವೇದಿಕೆಯಿಂದಾಗಿ ಎಂದರು.

ಚುನಾವಣೆಗಳು ಸಮೀಪಿಸುತ್ತಿದ್ದಂತೆ ನಾವೆಲ್ಲ ಸರಿಪಡಿಸಿಕೊಂಡು ಒಂದಾಗಿದ್ದೇವೆ ಎಂದು ಭಾಷಣ ಬಿಗಿಯುತ್ತಿರುವ ಶಾಸಕರು, ನಮ್ಮನ್ನು ಸರಿಪಡಿಸುವುದು ಬೇಕಾಗಿಲ್ಲ. ಮೊದಲು ಅವರು ಸರಿಯಾಗಲಿ, ನಾವು ಸರಿಯಾಗಿಯೇ ಇದ್ದೇವೆ. ಶಾಸಕರ ಹೇಳಿಕೆಗಳಿಂದ ನಮೋ ವೇದಿಕೆ ವ್ಯಕ್ತಿ ಪ್ರತಿಷ್ಠೆಯನ್ನು ಒಪ್ಪಿಕೊಂಡಿದೆ ಎಂದು ತಿಳಿಯಬಾರದು. ತಾಲೂಕಿನಲ್ಲಿ ಹಾಲಿ ಇರುವ ಶಾಸಕರನ್ನು ಬಿಟ್ಟು ಬೇರೆಯವರಿಗೆ ವರಿಷ್ಠರು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರೆ ನಾವು ಬಿಜೆಪಿಯ ಸಂಘಟನೆಗೆ ಹಾಗೂ ಚುನಾವಣೆಯಲ್ಲಿ ಹೆಗಲುಕೊಟ್ಟು ನಿಲ್ಲುತ್ತೇವೆ. ಹಾಲಿ ಶಾಸಕರನ್ನೇ ಮುಂದುವರಿಸಿದರೆ ನಮೋ ವೇದಿಕೆಯಿಂದ ಒಬ್ಬರನ್ನು ಕಣಕ್ಕಿಳಿಸಿ ಚುನಾವಣೆಗೆ ಇಳಿಯುತ್ತೇವೆ ಎಂದು ಪುನರುಚ್ಚರಿಸಿದ ಅವರು, ಯಾವ ಕಾರಣಕ್ಕೂ ನಮೋ ವೇದಿಕೆ ಈ ಶಾಸಕರನ್ನು ಅಭ್ಯರ್ಥಿಯನ್ನಾಗಿ ಒಪ್ಪುವುದಿಲ್ಲ ಎಂದರು.

ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಅರುಣ್‌ ಕುಮಾರ್‌, ವಿಜಯೇಂದ್ರ ಗೌಡ, ಮಾಧ್ಯಮ ಪ್ರಮುಖ ಶಿವಯೋಗಿ ಮತ್ತು ಇತರರು ಇದ್ದರು.

ಇದನ್ನೂ ಓದಿ | ನಾರಾಯಣಪುರ ಎಡದಂಡೆ ಕಾಲುವೆ ಆಧುನೀಕರಣ ನೀರಾವರಿ ಕ್ಷೇತ್ರದಲ್ಲೇ ಮೈಲುಗಲ್ಲು ಎಂದ ಸಿಎಂ ಬೊಮ್ಮಾಯಿ

Exit mobile version