Site icon Vistara News

Soraba News | ಮಕ್ಕಳ ಸುಪ್ತ ಪ್ರತಿಭೆ ಅರಳಿಸಲು ಸಾಹಿತ್ಯ ಸಮ್ಮೇಳನ ಸಹಕಾರಿ: ಡಿ.ಎಸ್. ಶಂಕರ್‌

childrens Kannada Sahitya Sammelana soraba Kittur Rani Chennamma Residential School

ಸೊರಬ: ಸದೃಢ ಸಮಾಜಕ್ಕೆ ಸಾಹಿತ್ಯ ಸಹಕಾರಿಯಾಗಿದೆ. ದೇಹಕ್ಕೆ ಆಹಾರ ಎಷ್ಟು ಮುಖ್ಯವೋ ಹಾಗೇ ಜ್ಞಾನಕ್ಕೆ ಪುಸ್ತಕ ಅತ್ಯಂತ ಆಗತ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಡಿ.ಎಸ್. ಶಂಕರ್‌ ತಿಳಿಸಿದರು.

ಆನವಟ್ಟಿ ಸಮೀಪದ ಹುಣಸವಳ್ಳಿ ಗ್ರಾಮದ ಕಿತ್ತೂರು ಚೆನ್ನಮ್ಮ ವಸತಿ ಶಾಲೆಯ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಸೊರಬ ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.

ಮಕ್ಕಳಲ್ಲಿನ ಸುಪ್ತ ಪ್ರತಿಭೆಗಳನ್ನು ಹೊರತರುವಲ್ಲಿ ಸಮ್ಮೇಳನಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇಂತಹ ವೇದಿಕೆಯಲ್ಲಿ ಅವರ ಪ್ರತಿಭೆಗಳ ಅನಾವರಣಕ್ಕೆ ಅವಕಾಶ ಸಿಗಲಿದೆ ಎಂದು ಹೇಳಿದರು.

ಇದನ್ನೂ ಓದಿ | CJI DY Chandrachud | ವಕೀಲರ ಅಲಭ್ಯತೆಯಿಂದಾಗಿ 63 ಲಕ್ಷ ಕೇಸ್ ಪೆಂಡಿಂಗ್: ಸಿಜೆಐ ಡಿ ವೈ ಚಂದ್ರಚೂಡ್

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ ಮಾತನಾಡಿ, ಭಾರತ ವೈವಿಧ್ಯತೆಯ ನಾಡಾಗಿದ್ದು, ಭಾವೈಕ್ಯತೆಯ ಬದುಕನ್ನು ಕರ್ನಾಟಕದಲ್ಲಿ ಕಾಣಬಹುದಾಗಿದೆ. ವ್ಯಾಪಾರ-ವಹಿವಾಟುಗಳೂ ಸೇರಿದಂತೆ ಹಲವು ಸೌಲಭ್ಯಗಳು ಮತ್ತು ಅವಕಾಶಗಳಿರುವ ಬೆಂಗಳೂರಿನಂತಹ ಸ್ಥಳಗಳಲ್ಲಿ ಹಲವು ಭಾಷಿಕರು ವಾಸ ಮಾಡುವುದು ಸಹಜವಾಗಿದೆ. ಕನ್ನಡದ ಶ್ರೇಷ್ಠ ಕವಿ ಕುವೆಂಪು ಅವರ ಜನ್ಮ ದಿನದಂದು ತಮಿಳಿನ ಶ್ರೇಷ್ಠ ಸಾಹಿತಿಗೆ ಗೌರವ ಪುರಸ್ಕಾರವನ್ನು ನೀಡಲಾಗಿದೆ. ಈ ರೀತಿಯ ಭಾವೈಕ್ಯತೆಯ ನಾಡು ಕರ್ನಾಟಕವಾಗಿದ್ದು, ಇಂತಹ ಸಮ್ಮೇಳನಗಳಿಂದ ಕೇವಲ ಕನ್ನಡದ ವೈಭವವನ್ನು ಆನಂದಿಸಿದರೆ ಸಾಲದು, ನಮ್ಮ ಮನೆಯಲ್ಲಿ ಮಕ್ಕಳಿಗೆ ಸರಿಯಾದ ಕನ್ನಡ ಭಾಷೆ ಕಲಿಸುವಲ್ಲಿ ನಾವೂ ಪ್ರಯತ್ನಿಸಬೇಕು. ಕೇವಲ ಶಾಲೆಗಳಲ್ಲಿ ಶಿಕ್ಷಕರ ಜವಾಬ್ದಾರಿ ಎಂದು ಸುಮ್ಮನಿರಬಾರದು ಎಂದರು.

ಇದನ್ನೂ ಓದಿ |Medical negligence | ಆಪರೇಷನ್‌ ಮಾಡಿದ ಕೆಲವೇ ಹೊತ್ತಲ್ಲಿ ಯುವತಿ ಸಾವು; ಆಸ್ಪತ್ರೆಗೆ ಕಲ್ಲು ತೂರಾಟ, ಪ್ರತಿಭಟನೆ

ಪ್ರತಿ ವ್ಯಕ್ತಿಯಲ್ಲಿಯೂ ಕಥೆಗಾರ, ಭಾಷಣಗಾರ, ಕವಿತೆಯನ್ನು ರಚಿಸುವ ಕಲೆಗಳಿರುತ್ತವೆ. ಆದರೆ, ಅಭಿವ್ಯಕ್ತಿಗೆ ಅವಕಾಶವಿಲ್ಲದೇ ಅವು ಮುದಡಿ ಹೋಗುತ್ತವೆ. ಇಂತಹ ಕಾರ್ಯಕ್ರಮಗಳಿಂದ ಪ್ರತಿಭಾನ್ವಿತ ಮಕ್ಕಳಿಗೆ ಅವಕಾಶ ದೊರೆತಂತಾಗುತ್ತದೆ ಎಂದರು.

ಸಮ್ಮೇಳನಾಧ್ಯಕ್ಷೆ ನಿಸರಾಣಿ ವಿದ್ಯಾಭಿವೃದ್ಧಿ ಸಂಘದ ಪ್ರೌಢಶಾಲೆಯ ವಿದ್ಯಾರ್ಥಿನಿ ಕು. ಮಾನ್ಯ ಮಾತನಾಡಿ, ಪುರಾತನ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯನ್ನು ಮಾತನಾಡುವವರು ಇತ್ತೀಚೆಗೆ ಅತ್ಯಂತ ವಿರಳವಾಗುತ್ತಿದ್ದಾರೆ. ಪ್ರತಿ ಶಬ್ದಗಳ ನಡುವೆಯೂ ಆಂಗ್ಲ ಭಾಷೆಯ ಪದಗಳ ಜೋಡಣೆ ಸಾಮಾನ್ಯವಾಗಿದೆ. ಆಂಗ್ಲ ಭಾಷಾ ವ್ಯಾಮೋಹದಿಂದ ನಾವು ಹೊರಬರಬೇಕಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಹಣ ತನ್ನ ಪ್ರಭಾವವನ್ನು ಹೊಂದಿದೆ. ಆದರೆ, ಸಾಹಿತ್ಯ ಕ್ಷೇತ್ರ ಮಾತ್ರ ಜ್ಞಾನದ ಮೇಲೆ ನಿಂತಿದೆ ಎಂದರು.

ಇದನ್ನೂ ಓದಿ | RBI Bond | ಆರ್‌ಬಿಐ ಬಾಂಡ್‌ ಬಡ್ಡಿ ದರ ಜನವರಿ 1 ರಿಂದ 7.35%ಕ್ಕೆ ಏರಿಕೆ

ಕೋಟಿಪುರ ಎವರಾನ್ ಇಂಟರ್ ನ್ಯಾಷನಲ್ ಸ್ಕೂಲ್‍ನ ವಿದ್ಯಾರ್ಥಿನಿ ಸಾನಿಕಾ ಬಿ. ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹುಣಸವಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಸಿ.ವೈ.ಐಶ್ವರ್ಯ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಪ್ರಭಾರ ಇ.ಓ ನಾಗರಾಜ ಟಿ. ಅನ್ವೇಕರ್ ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಕಸಪ ತಾಲೂಕು ಅಧ್ಯಕ್ಷ ಶಿವಾನಂದ ಪಾಣಿ, ಕಾರ್ಯದರ್ಶಿ ಬಿ. ರಮೇಶ, ವಸತಿ ಶಾಲೆಯ ಪ್ರಾಂಶುಪಾಲ ಸಂತೋಷ ಕುಮಾರ್, ವಿಶ್ವನಾಥ ಹೆಚ್ಚೆ, ಬಸವನ ಗೌಡ ಮಲ್ಲಾಪುರ, ಕಾರ್ತಿಕ್ ಸಾಹುಕಾರ್, ಖಲಂದರ್ ಸಾಬ್, ಸಂಪತ್ ಕುಮಾರ್, ಕೃಷ್ಣಾನಂದ, ಹಾಲೇಶ ನವಲೆ, ವಿನಾಯಕ ಕಾನಡೆ, ಮಹೇಶ ಖಾರ್ವಿ, ಮಂಜಪ್ಪ ಮತ್ತಿತರರಿದ್ದರು.

ಇದನ್ನೂ ಓದಿ | Medical negligence | ಆಪರೇಷನ್‌ ಮಾಡಿದ ಕೆಲವೇ ಹೊತ್ತಲ್ಲಿ ಯುವತಿ ಸಾವು; ಆಸ್ಪತ್ರೆಗೆ ಕಲ್ಲು ತೂರಾಟ, ಪ್ರತಿಭಟನೆ

Exit mobile version