ಬೆಂಗಳೂರು: ಎಲೆಕ್ಟ್ರಾನಿಕ್ಸ್‌ಗೆ ಸಂಬಂಧಿಸಿದ ಯಾವುದೇ ವಸ್ತುಗಳು ಬೇಕಾದರೂ ಬಹುತೇಕ ಬೆಂಗಳೂರಿಗರು ನಗರದ ಎಸ್‌ಪಿ ರೋಡ್‌ಗೆ ಹೋಗುವುದು ಮಾಮೂಲಿ. ಆದರೆ ಎಸ್‌ಪಿ ರಸ್ತೆಯಲ್ಲಿ (SP Road) ಬ್ರೋಕರ್‌ಗಳ ಹಾವಳಿ ಮಿತಿಮೀರಿದಿದೆ.
ರಸ್ತೆ ರಸ್ತೆಗಳಲ್ಲಿ ನಿಂತು ಗ್ರಾಹಕರ ಹಿಂದೆ ಬೀಳುವ ಬ್ರೋಕರ್‌ಗಳು ನಡುರಸ್ತೆಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಬಡಿದಾಟದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಕೆಲವೊಂದಷ್ಟು ಅಂಗಡಿ ಮಾಲೀಕರು ಬ್ರೋಕರ್‌ಗಳನ್ನು ನೇಮಿಸಿಕೊಂಡಿದ್ದಾರೆ. ಆದರೆ ಇದುವೇ ಗ್ರಾಹಕರಿಗೂ, ಇತರೆ ಅಂಗಡಿ ಮಾಲೀಕರಿಗೂ ಕಿರಿಕಿರಿ ಉಂಟು ಮಾಡಿದೆ.
ಶುಕ್ರವಾರ ಮಧ್ಯಾಹ್ನ ಗ್ರಾಹಕರಿಗಾಗಿ ಅಂಗಡಿ ಮಾಲೀಕರು ಹಾಗೂ ಬ್ರೋಕರ್‌ಗಳ ಮಧ್ಯೆ ಗಲಾಟೆ ನಡೆದಿದೆ. ರಸ್ತೆಯಲ್ಲಿಯೇ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಈ ಬಗ್ಗೆ ಹಲವು ಬಾರಿ ಪೊಲೀಸರ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಟ್ವೀಟ್ ಮೂಲಕ ಅಂಗಡಿ ಮಾಲೀಕ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Road Accident: ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ; ಸ್ಥಳದಲ್ಲಿ ಪ್ರಾಣಬಿಟ್ಟ ಮೂವರು ಯುವಕರು
ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸನ್ನಿ ಎಂಬುವವರು ಹೊಡೆದಾಟದ ವಿಡಿಯೊ ಅಪ್ಲೋಡ್ ಮಾಡಿ ಬೆಂಗಳೂರು ನಗರ ಪೊಲೀಸ್ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿ ದೂರು ದಾಖಲಿಸಿದ್ದಾರೆ.