ಬೆಂಗಳೂರು: ಸ್ಪಂದನಾ- ವಿಜಯ ರಾಘವೇಂದ್ರ (Spandana Vijay Raghavendra) ಅವರ ಕುಟುಂಬದ ಮೇಲೆ ಯಾರ ಕೆಟ್ಟ ಕಣ್ಣು ಬಿತ್ತೋ ಗೊತ್ತಿಲ್ಲ. ಅವರಿಗೆ ನೋವು ಭರಿಸುವ ಶಕ್ತಿ ದೊರೆಯಲಿ ಎಂದು ನಟಿ ಸುಧಾರಾಣಿ (Sudharani) ಹೇಳಿದ್ದಾರೆ. ಮಲ್ಲೇಶ್ವರಂನಲ್ಲಿ ಸ್ಪಂದನಾ ವಿಜಯ ರಾಘವೇಂದ್ರ ಅಂತಿಮ ದರ್ಶನದ ಬಳಿಕ ಅವರು ಮಾತನಾಡಿದರು.
ಸ್ಪಂದನಾ ಆಗಲಿ, ವಿಜಯ ರಾಘವೇಂದ್ರ ಆಗಲಿ ಮೃದುವಾಗಿ ಮಾತನಾಡುವವರು. ಒಳ್ಳೆಯ ಸಂಸ್ಕೃತಿ ಹೊಂದಿದ್ದವರು. ಇವರ ಕುಟುಂಬದ ಮೇಲೆ ಯಾರ ಕೆಟ್ಟ ಕಣ್ಣು ಬಿತ್ತೋ ಗೊತ್ತಿಲ್ಲ. ವಿಜಯ ರಾಘವೇಂದ್ರ ಹಾಗೂ ಅವರ ಕುಟುಂಬದವರಿಗೆ ಈ ನೋವು ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ನಟಿ ಸುಧಾರಾಣಿ ಹೇಳಿದರು. ವಿಜಯ ರಾಘವೇಂದ್ರ ಅ
ಡಿನ್ನರ್ಗೆ ಸೇರೋಣ ಎಂದ ಗೆಳೆಯನಿಗೆ ಸಾಂತ್ವನ ಹೇಳುವಂತಾಯ್ತು: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಅವರು ಮಲ್ಲೇಶ್ವರಂನ ಮನೆಗೆ ಆಗಮಿಸಿ ಸ್ಪಂದನಾ ವಿಜಯ ರಾಘವೇಂದ್ರ (Spandana Vijay Raghavendra) ಅವರ ಪಾರ್ಥಿವ ಶರೀರದ ದರ್ಶನ ಪಡೆದರು. ವಿಜಯ ರಾಘವೇಂದ್ರ ಅವರ ಶಾಲಾ ದಿನಗಳ ಗೆಳೆಯರಾದ ಪ್ರಿಯಾಂಕ್, ಪತ್ನಿಯನ್ನು ಕಲೆದುಕೊಂಡ ಗೆಳೆಯನಿಗೆ ಸಾಂತ್ವನ ಹೇಳಿದರು.
ಸ್ಪಂದನ ನಿಧನದಿಂದ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ವೈಯಕ್ತಿಕವಾಗಿ ಸ್ಪಂದನ ತುಂಬಾ ಸ್ನೇಹಜೀವಿಯಾಗಿದ್ದು, ನಮ್ಮ ಕುಟುಂಬದ ಮೇಲೆ ಪ್ರಭಾವ ಬೀರಿದ್ದಾರೆ. ವಿಜಯ್ ಮತ್ತು ನಾನು ಸ್ಕೂಲ್- ಕಾಲೇಜುಗಳಲ್ಲಿ ಜೊತೆಗೆ ಓದಿದವರು. ವಿಜಯ್ ಅವರಲ್ಲಿ ಯಾವಾಗಲೂ ಸ್ಟಾರ್ ವರ್ತನೆ ಇರಲಿಲ್ಲ. ಎರಡು ವಾರದ ಹಿಂದೆ ನನಗೆ ಕಾಲ್ ಮಾಡಿದ್ದರು. 3ನೇ ಬಾರಿಗೆ ಮಂತ್ರಿ ಆಗಿದೀಯ, ನಿನಗೆ ಸನ್ಮಾನ ಮಾಡಬೇಕು ಅಂದಿದ್ದರು. 30 ನಿಮಿಷ ಜತೆಯಾಗಿ ಕಾಲ ಕಳೆಯೋಣ, ಡಿನ್ನರ್ಗೆ ಸೇರೋಣ, ಶಾಲೆಯ ಸ್ನೇಹಿತರು ಮೀಟ್ ಮಾಡೋಣ. ಆಗಸ್ಟ್ 15ರ ನಂತರ ಭೇಟಿಯಾಗೋಣ ಅಂದಿದ್ದರು ಎಂದು ಖರ್ಗೆ ತಿಳಿಸಿದರು.
ಈ ಘಟನೆ ಅಘಾತವಾಗಿದೆ. ಇವರಿಬ್ಬರೂ ಬಹಳಷ್ಟು ಹೃದಯಗಳನ್ನ ಗೆದ್ದಿದ್ದಾರೆ. ಎಲ್ಲರ ಜೊತೆ ಮಾತನಾಡುವವರು. ಬೇರೆಯವರ ಯಶಸ್ಸಿನಲ್ಲಿ ಸಂತೋಷ ಕಾಣುವವರು. ಸ್ಪಂದನಾ ಸಹೋದರರಿಗೆ ಸ್ಫೂರ್ತಿಯಾಗಿದ್ದರು. 37 ವರ್ಷ ಸಾಯುವ ವಯಸ್ಸು ಅಲ್ಲ. ಈ ಕಷ್ಟ ಕಾಲದಲ್ಲಿ ಕುಟುಂಬಕ್ಕೆ ದೇವರು ಸಹಿಸಿಕೊಳ್ಳುವ ಶಕ್ತಿ ತುಂಬಲಿ ಎಂದು ಪ್ರಿಯಾಂಕ್ ಖರ್ಗೆ ಪ್ರಾರ್ಥಿಸಿದರು.
ಇದನ್ನೂ ಓದಿ: Spandana Vijay Raghavendra : ಸ್ಪಂದನಾ ಜಿಮ್ ಸೇರಿದ್ದು ಬಾಡಿ ಬಿಲ್ಡ್ ಮಾಡಲು ಅಲ್ಲ, ಜೋತುಬಿದ್ದ ಚರ್ಮ tight ಆಗಲು!