Site icon Vistara News

Spandana Vijay Raghavendra: ಸ್ಪಂದನಾ ಅಂತಿಮ ದರ್ಶನ ಶುರು, ಚಿನ್ನಾರಿ ಮುತ್ತ ಗಾಢ ಮೌನ

vijaya raghavendra

ಬೆಂಗಳೂರು: ಹೃದಯಾಘಾತದಿಂದ ನಿಧನರಾದ ಸ್ಪಂದನಾ ವಿಜಯ ರಾಘವೇಂದ್ರ (Spandana Vijay Raghavendra) ಅವರ ಪಾರ್ಥಿವ ಶರೀರ ಮಂಗಳವಾರ ರಾತ್ರಿ ನಗರಕ್ಕೆ ತಲುಪಿದ್ದು, ಮಲ್ಲೇಶ್ವರಂನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ತಂದೆ ಬಿ.ಕೆ.ಶಿವರಾಂ ಮನೆ ಆವರಣದಲ್ಲಿ ಸ್ಪಂದನಾ ಅವರ ಮೃತ ದೇಹವನ್ನು ಅಂತಿಮ ದರ್ಶನಕ್ಕಾಗಿ ಇರಿಸಲಾಗಿದ್ದು, ಪೂಜಾ ಕಾರ್ಯಗಳನ್ನು ಸ್ಪಂದನ ಕುಟುಂಬಸ್ಥರು ನೆರವೇರಿಸಿದರು. ದೀಪ ಬೆಳಗಿಸಿ ಪ್ರದಕ್ಷಿಣೆ ಹಾಕಿದರು. ಈ ಸಂದರ್ಭದಲ್ಲಿ ವಿಜಯ್ ರಾಘವೇಂದ್ರ ಹಾಗೂ ಶ್ರೀ ಮುರುಳಿ ಅಲ್ಲಿದ್ದು, ತಟಸ್ಥರಾಗಿ ನಿಂತದ್ದು ಕಂಡುಬಂತು.

ಸ್ಪಂದನಾ ಅಂತಿಮ ದರ್ಶನಕ್ಕಾಗಿ ಗಣ್ಯರು ಹಾಗೂ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಪತಿ ವಿಜಯ ರಾಘವೇಂದ್ರ ಸ್ಪಂದನಾ ತಲೆದೆಸೆಯಲ್ಲಿ ಮೌನವಾಗಿ ಕುಳಿತಿದ್ದಾರೆ. ಚಿತ್ರರಂಗದ ಗಣ್ಯರಾದ ಗಿರಿಜಾ ಲೋಕೇಶ್‌, ವಿಜಯ್‌ ಪ್ರಕಾಶ್‌, ಶ್ರೀನಾಥ್‌, ರಾಘವೇಂದ್ರ ರಾಜಕುಮಾರ್, ಸುಧಾರಾಣಿ, ರಾಜಕೀಯ ಮುಖಂಡರಾದ ಯು.ಟಿ ಖಾದರ್‌, ಮಧು ಬಂಗಾರಪ್ಪ, ಕುಮಾರ್‌ ಬಂಗಾರಪ್ಪ, ಸುನಿಲ್‌ ಕುಮಾರ್ ಮುಂಜಾನೆ ಆಗಮಿಸಿ ಅಂತಿಮ ದರ್ಶನ ಪಡೆದರು.

ಬೆಂಗಳೂರಿನ ಶ್ರೀರಾಂಪುರದ ಹರಿಶ್ಚಂದ್ರ ಘಾಟ್ ನಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನೂ ಓದಿ: Spandana Vijay Raghavendra : ಸ್ಪಂದನಾ ಜಿಮ್‌ ಸೇರಿದ್ದು ಬಾಡಿ ಬಿಲ್ಡ್‌ ಮಾಡಲು ಅಲ್ಲ, ಜೋತುಬಿದ್ದ ಚರ್ಮ tight ಆಗಲು!

Exit mobile version