Site icon Vistara News

Spandana Vijay Raghavendra : ಮಂಗಳವಾರ ಮುಂಜಾನೆ ಸ್ಪಂದನಾ ಪಾರ್ಥಿವ ಶರೀರ ಬೆಂಗಳೂರಿಗೆ, ಅಂತಿಮ ದರ್ಶನಕ್ಕೆ ಸಿದ್ಧತೆ

Spandana Vijay Raghavendra

Spandana Vijay Raghavendra

ಬೆಂಗಳೂರು: ಬ್ಯಾಂಕಾಕ್‌ ಪ್ರವಾಸದಲ್ಲಿದ್ದಾಗ ಹೃದಯಾಘಾತದಿಂದ (Heart Attack) ನಿಧನರಾದ ಸ್ಪಂದನಾ ವಿಜಯ ರಾಘವೇಂದ್ರ (Spandana Vijay Raghavendra) ಅವರ ಪಾರ್ಥಿವ ಶರೀರವನ್ನು (Dead body) ವಿಮಾನ ಮೂಲಕ ಭಾರತಕ್ಕೆ ತರಲು ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ಸ್ಪಂದನಾ ಅವರ ಚಿಕ್ಕಪ್ಪ ಬಿ.ಕೆ. ಹರಿಪ್ರಸಾದ್‌ (BK Hariprasad), ದೊಡ್ಮನೆಯ ರಾಘವೇಂದ್ರ ರಾಜ್‌ ಕುಮಾರ್‌ (Raghavendra Rajkumar) ಮತ್ತು ಇತರರು ಮೃತದೇಹವನ್ನು ತರುವ ವ್ಯವಸ್ಥೆಗೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಈಗ ಲಭ್ಯವಿರುವ ಮಾಹಿತಿಯ ಪ್ರಕಾರ, ಸೋಮವಾರ ರಾತ್ರಿ ಬ್ಯಾಂಕಾಕ್‌ನಿಂದ ಶವವನ್ನು ವಿಮಾನ ಮೂಲಕ ತರುವ ಸಾಧ್ಯತೆಗಳಿವೆ. ಮಂಗಳವಾರ ಮುಂಜಾನೆ ಪಾರ್ಥಿವ ಶರೀರ ಬೆಂಗಳೂರು ತಲುಪುವ ನಿರೀಕ್ಷೆ ಇದೆ.

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸ್ಪಂದನಾ ಅವರ ತಂದೆ ಬಿ.ಕೆ. ಶಿವರಾಂ ಅವರ ನಿವಾಸಕ್ಕೆ ಮಂಗಳವಾರ ಬೆಳಗ್ಗೆ ಮೃತದೇಹವನ್ನು ಕರೆ ತರಲಾಗುತ್ತದೆ ಎಂದು ತಿಳಿದುಬಂದಿದೆ. ಮಲ್ಲೇಶ್ವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಸ್ಪಂದನಾ ಸಾವು ಸಂಭವಿಸಿದ್ದು ಹೇಗೆ?

-ಸ್ಪಂದನಾ ಅವರು ಮೂರ್ನಾಲ್ಕು ದಿನಗಳ ಹಿಂದೆ ಬ್ಯಾಂಕಾಕ್‌ಗೆ ಹೋಗಿದ್ದರು. ಅವರು ಹೋಗಿದ್ದು ತಮ್ಮ ಕಸಿನ್‌ ಸಿಸ್ಟರ್‌ಗಳ ಜತೆಗೆ.

-ವಿಜಯ ರಾಘವೇಂದ್ರ ಮತ್ತು ಮಗ ಶೌರ್ಯ ಬೆಂಗಳೂರಿನ ಮನೆಯಲ್ಲೇ ಇದ್ದರು.
– ಸ್ಪಂದನಾ ಅವರು ತಮ್ಮ ಕಸಿನ್‌ ಸಿಸ್ಟರ್‌ಗಳ ಜತೆ ಶಾಪಿಂಗ್‌ ಮಾಡಿದ್ದಾರೆ.
– ವಿಜಯ ರಾಘವೇಂದ್ರ ಅವರು ಭಾನುವಾರ ಸಂಜೆ ಸ್ಪಂದನಾ ಅವರನ್ನು ಜಾಯಿನ್‌ ಆಗಿದ್ದರು.
– ಸ್ಪಂದನಾ ಅವರು ಭಾನುವಾರ ರಾತ್ರಿ ಲೋಬಿಪಿಯಿಂದ ಕುಸಿದುಬಿದ್ದಿದ್ದರು. ಅವರಿಗೆ ಚಿಕಿತ್ಸೆ ಕೊಡಿಸಲಾಗಿತ್ತು.
(ಸಂಜೆ ಶಾಪಿಂಗ್‌ ಮಾಡುತ್ತಿದ್ದಾಗಲೇ ಅವರಿಗೆ ಲೋ ಬಿಪಿ ಸಮಸ್ಯೆ ಎದುರಾಗಿತ್ತು ಎನ್ನಲಾಗಿದೆ)
– ಲೋಬಿಪಿ ಸಮಸ್ಯೆಯಿಂದ ಅವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.
– ಸ್ಪಂದನಾ ಅವರ ಸಹೋದರ ರಕ್ಷಿತ್‌ ಶಿವರಾಂ ಮತ್ತು ಕುಟುಂಬದ ಸದಸ್ಯರು ಬ್ಯಾಂಕಾಕ್‌ಗೆ ತೆರಳಿದ್ದಾರೆ.

ಇದನ್ನೂ ಓದಿ: Spandana Vijay Raghavendra: ಸ್ಯಾಂಡಲ್‌ವುಡ್‌ ಸಾವಿನ ಸರಣಿಗೆ ಸ್ಪಂದನಾ ಸೇರ್ಪಡೆ; ಅಗಲಿದ ಯುವಜೀವಗಳು

ಚಿತ್ರ ನಟ ಮುರಳಿ ಹೇಳಿದ್ದೇನು?

ಸ್ಪಂದನಾ ಅವರ ಸಾವಿನ ಬಗ್ಗೆ ಮಾಹಿತಿ ನೀಡಿದ ವಿಜಯ ರಾಘವೇಂದ್ರ ಅವರ ಸಹೋದರ ಮುರಳಿ ಅವರು, ʻʻಅಣ್ಣ ನನಗೆ ಫೋನ್‌ ಮಾಡಿ ಹೇಳಿದ್ದು ಇಷ್ಟು. ಅತ್ತಿಗೆ ಮಲಗಿದವರು ಮೇಲೆದ್ದಿಲ್ಲ. ಹೃದಯಾಘಾತದಿಂದ ಸಾವು ಸಂಭವಿಸಿದೆ ಹೇಳುತ್ತಿದ್ದಾರೆ. ಮುಂದಿನ ವಿಚಾರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ತಿಳಿಯಲಿದೆʼʼ ಎಂದಿದ್ದರು.

ಯಾವುದೇ ರೂಮರ್‌ ಸೃಷ್ಟಿಸಬೇಡಿ ಎಂದರು ಹರಿಪ್ರಸಾದ್‌

ಸ್ಪಂದನಾ ಅವರು ಇತ್ತೀಚೆಗೆ ದೇಹ ತೂಕ ತಗ್ಗಿಸಿಕೊಳ್ಳುವ ಪ್ರಯತ್ನದಲ್ಲಿದ್ದರು. ಜಿಮ್‌ಗೆ ಹೋಗುತ್ತಿದ್ದರು. ದೇಹ ತೂಕ ಇಳಿಸುವ ಪೌಡರ್‌ ಸೇವನೆ ಮಾಡುತ್ತಿದ್ದರು ಎಂಬ ಸುದ್ದಿಗಳು ಹರಡುತ್ತಿವೆ. ಆದರೆ, ಹೀಗೆಲ್ಲ ರೂಮರ್‌ಗಳನ್ನು ಯಾರೂ ಹರಡಬೇಡಿ ಎಂದು ಮನವಿ ಮಾಡಿದ್ದಾರೆ ಸ್ಪಂದನಾ ಅವರ ಚಿಕ್ಕಪ್ಪ ಬಿ.ಕೆ. ಹರಿಪ್ರಸಾದ್‌. ಅಕೆ ಹೆಣ್ಣು ಮಗಳು. ದಯವಿಟ್ಟು ಯಾವುದೇ ರೂಮರ್ಸ್‌ ಹರಡಬೇಡಿ ಎಂದಿದ್ದಾರೆ.

ಇದನ್ನೂ ಓದಿ : Spandana Vijay Raghavendra: ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಬಗ್ಗೆ ಗೊತ್ತಿರದ ಸಂಗತಿಗಳಿವು

Exit mobile version