Site icon Vistara News

Vistara News Launch | ವಿಸ್ತಾರ ನ್ಯೂಸ್ ಕಚೇರಿಗೆ ಶ್ರೀ ಮಧು ಪಂಡಿತ ದಾಸ ಭೇಟಿ, ಶುಭ ಹಾರೈಕೆ

Madhu Pandit Das

ಬೆಂಗಳೂರು: ಇಸ್ಕಾನ್ ಅಧ್ಯಕ್ಷರಾದ ಶ್ರೀ ಮಧು ಪಂಡಿತ ದಾಸ ಅವರು ವಿಸ್ತಾರ ನ್ಯೂಸ್ ಕಚೇರಿಗೆ ಬುಧವಾರ ಭೇಟಿ ನೀಡಿ ಶುಭ ಹಾರೈಸಿದರು.

ವಿಸ್ತಾರ ಕಚೇರಿಯ ವಿಭಾಗಗಳನ್ನು ಶ್ರೀ ಮಧು ಪಂಡಿತ ದಾಸ ಅವರಿಗೆ ಪರಿಚಯಿಸಿದ ಹರಿಪ್ರಕಾಶ್‌ ಕೋಣೆಮನೆ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನ‌.6ರಂದು ವಿಸ್ತಾರ ನ್ಯೂಸ್ ಚಾನೆಲ್ ಅದ್ಧೂರಿಯಾಗಿ ಚಾಲನೆ ಪಡೆದಿದೆ. ವಿಸ್ತಾರ ನ್ಯೂಸ್ ಕಚೇರಿಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಶ್ರೀ ಮಧು ಪಂಡಿತ ದಾಸ ಅವರು, ಟಿವಿ ಚಾನೆಲ್ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆದರು.

ಶ್ರೀ ಮಧು ಪಂಡಿತ ದಾಸ ಅವರನ್ನು ಸನ್ಮಾನಿಸಿದ ಹರಿಪ್ರಕಾಶ್‌ ಕೋಣೆಮನೆ ಹಾಗೂ ಎಚ್‌.ವಿ. ಧರ್ಮೇಶ್.

ವಿಸ್ತಾರ ಮೀಡಿಯಾ ಸಂಸ್ಥೆ ಅಳವಡಿಸಿಕೊಂಡಿರುವ ಅತ್ಯಾಧುನಿಕ ತಂತ್ರಜ್ಞಾನಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ವಿಸ್ತಾರ ಮೀಡಿಯಾದ ನ್ಯೂಸ್ ವೆಬ್ ಸೈಟ್ ಮತ್ತು ಹಣಕಾಸು, ಆರೋಗ್ಯ, ಅಧ್ಯಾತ್ಮ, ಸಿನಿಮಾ ಇತ್ಯಾದಿ ಯುಟ್ಯೂಬ್ ಚಾನೆಲ್ ಗಳನ್ನು ಪರಿಶೀಲಿಸಿದ ಅವರು ಉಪಯುಕ್ತ ಮಾಹಿತಿಗಳ ಸಂಗ್ರಹಕ್ಕಾಗಿ ಪ್ರಶಂಸೆ ವ್ಯಕ್ತಪಡಿಸಿದರು.‌

ಶ್ರೀ ಮಧು ಪಂಡಿತ ದಾಸ ಅವರಿಗೆ ಗೌರವ ಸಮರ್ಪಣೆ.

ಈ ಸಂದರ್ಭದಲ್ಲಿ ಇಸ್ಕಾನ್ ನ ಶ್ರೀ ನವೀನ ನೀರದ ದಾಸ, ಶ್ರೀ ಮಹೋತ್ಸವ ಚೈತನ್ಯ ದಾಸ ಮತ್ತು ಶ್ರೀ ವಿಮಲಕೃಷ್ಣ ದಾಸ ಅವರು ಜತೆಗಿದ್ದರು. ವಿಸ್ತಾರ ನ್ಯೂಸ್ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮತ್ತು ವಿಸ್ತಾರ ಮೀಡಿಯಾದ ಚೇರ್ಮನ್, ಎಂಡಿ ಎಚ್ ವಿ ಧರ್ಮೇಶ್ ಅವರು ಶ್ರೀ ಮಧು ಪಂಡಿತ ದಾಸ ಅವರಿಗೆ ಫಲಪುಷ್ಪ ನೀಡಿ, ಶಾಲು ಹೊದಿಸಿ ಗೌರವಿಸಿದರು.

ಶ್ರೀ ಮಧು ಪಂಡಿತ ದಾಸ ಅವರ ಜತೆ ವಿಸ್ತಾರ ನ್ಯೂಸ್ ತಂಡ.

ವಿಸ್ತಾರ ನ್ಯೂಸ್ ಕಾರ್ಯ ನಿರ್ವಾಹಕ ಸಂಪಾದಕ ಶರತ್ ಎಂ ಎಸ್, ಸಿಒಒ, ಸಿಟಿಒ ಪರಶುರಾಮ್, ಇನ್ ಫುಟ್-ಔಟ್ ಫುಟ್ ಮುಖ್ಯಸ್ಥ ಮಂಜುನಾಥ್ ಪಿ, ವಿಸ್ತಾರ ಡಿಜಿಟಲ್ ಸಂಪಾದಕ ರಮೇಶ್ ಕುಮಾರ್ ನಾಯಕ್ ಹಾಜರಿದ್ದರು.

ಹರಿಪ್ರಕಾಶ್‌ ಕೋಣೆಮನೆ ಅವರನ್ನು ಸನ್ಮಾನಿಸಿದ ಶ್ರೀ ಮಧು ಪಂಡಿತ ದಾಸ.
ಎಚ್‌ ವಿ ಧರ್ಮೇಶ್‌ ಅವರಿಗೆ ಶ್ರೀ ಮಧು ಪಂಡಿತ ದಾಸ ಅವರಿಂದ ಸನ್ಮಾನ.
ಹರಿಪ್ರಕಾಶ್‌ ಕೋಣೆಮನೆ ಅವರ ಜತೆ ಶ್ರೀ ಮಧು ಪಂಡಿತ ದಾಸ ಮಾತುಕತೆ.

ಇದನ್ನೂ ಓದಿ | Vistara News Launch | ವಿಸ್ತಾರ ನ್ಯೂಸ್‌ ನಂಬರ್‌ 1 ಚಾನೆಲ್‌ ಆಗಲಿ ಎಂದು ಯಡಿಯೂರಪ್ಪ ಹಾರೈಕೆ

Exit mobile version