Site icon Vistara News

Sri Siddalinga Swamiji: ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಕಂಡು ಓಡೋಡಿ ಬಂದ ಹಸು; ವಿಡಿಯೊ ವೈರಲ್‌

Siddalinga Swamiji of Siddaganga Mutt saw a cow and came running away Video goes viral

Siddalinga Swamiji of Siddaganga Mutt saw a cow and came running away Video goes viral

ತುಮಕೂರು: ಸಿದ್ದಗಂಗಾ ಮಠದ (Siddaganga mutt) ಸಿದ್ದಲಿಂಗ ಶ್ರೀಗಳನ್ನು (Sri Siddalinga Swamiji) ಕಂಡ ಕೂಡಲೇ ಹಸುವೊಂದು ಓಡೋಡಿ ಬಂದಿರುವ ವಿಡಿಯೊವೊಂದು ಈಗ ವೈರಲ್‌ ಆಗಿದೆ. ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗ ಶ್ರೀಗಳು ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಭೇಟಿ ನೀಡಿ ತಮ್ಮ ಕೊಠಡಿಗೆ ಹಿಂದಿರುಗುತ್ತಿದ್ದಾಗ ಈ ವಿಸ್ಮಯ ನಡೆದಿದೆ.

ಸಿದ್ದಲಿಂಗ ಶ್ರೀಗಳು ಗದ್ದುಗೆಯಿಂದ ವಾಪಸಾಗುತ್ತಿದ್ದಾಗ ಅಲ್ಲಿಂದ ಸ್ವಲ್ಪವೇ ದೂರಲ್ಲಿ ಅಡ್ಡಾಡುತ್ತಿದ್ದ ಹಸುವೊಂದು ಸಿದ್ದಲಿಂಗ ಶ್ರೀಗಳನ್ನು ಕಂಡಿದೆ. ಆಗ ಅದಕ್ಕೆ ಅದೇನೆನಿಸಿತೋ ಏನೋ? ಇದ್ದ ಕಡೆಯಿಂದ ಜೋರಾಗಿ ಓಡೋಡಿ ಶ್ರೀಗಳು ಎದುರಿಗೆ ಬಂದು ತಲೆಬಾಗಿ ನಿಂತಿದೆ.

ಇದನ್ನೂ ಓದಿ: Karnataka BJP: ಮುಸ್ಲಿಂ ಬಾಧವರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ: ಮನವೊಲಿಸುತ್ತೇವೆ ಎಂದ ಬಿ.ಎಸ್‌. ಯಡಿಯೂರಪ್ಪ

ಶ್ರೀಗಳನ್ನು ಕಂಡ ಹಸು

ಇದನ್ನು ಕಂಡ ಶ್ರೀಗಳು ಹಿಂದಿರುಗಿ ಹಸುವಿನ ಮೈ ಸವರುತ್ತಿದ್ದಂತೆ ಅವರ ಬಳಿಯೇ ಕ್ಷಣ ಕಾಲ ಹಾಗೇ ನಿಂತಿದೆ. ಹಸುವೊಂದು ಹೀಗೆ ಶ್ರೀಗಳ ಕಂಡು ಓಡೋಡಿ ಬಂದದ್ದು ಕಂಡು ಮಠಕ್ಕೆ ಬಂದಿದ್ದ ಭಕ್ತಾದಿಗಳು ಅಚ್ಚರಿಗೊಂಡರು. ಮಾತ್ರವಲ್ಲದೆ ಈ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡರು.

ಸಿದ್ದಲಿಂಗ ಶ್ರೀ ಕಂಡು ಓಡಿ ಬಂದ ಹಸು

ಈ ಹಿಂದೆ ಶಿವಕುಮಾರ ಸ್ವಾಮೀಜಿ ಮಠದಲ್ಲಿ ಓಡಾಡುವಾಗ ನವಿಲುಗಳು ಬರುತ್ತಿದ್ದವು. ಈಗ ಸಿದ್ದಲಿಂಗ ಸ್ವಾಮೀಜಿ ಬಂದರೆ ಹಸುವೊಂದು ಓಡೋಡಿ ಬರುವುದನ್ನು ಭಕ್ತರು ನೆನೆದು ಮೂಕ ವಿಸ್ಮಿತರಾದರು. ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ಮಠದ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ಸಿದ್ದಲಿಂಗ ಶ್ರೀಗಳು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ.

ಶಿವಕುಮಾರ್‌ ಶ್ರೀಗಳ ಗದ್ದುಗೆಯಿಂದ ವಾಪಸ್‌ ಆಗುತ್ತಿದ್ದ ಸಿದ್ದಲಿಂಗ ಶ್ರೀ

ಇದನ್ನೂ ಓದಿ: High Court order: ತುಮಕೂರು ಗ್ರಾಮಾಂತರ ಜೆಡಿಸ್‌ ಶಾಸಕ ಗೌರಿಶಂಕರ್‌ ಶಾಸಕತ್ವದಿಂದ ಅನರ್ಹ: ಕೋರ್ಟ್‌ ಆದೇಶ

ಸಿದ್ದಲಿಂಗ ಶ್ರೀಗಳ ಮುಂದೆ ಬಂದು ನಿಂತ ಹಸು

ಶ್ರೀ ಶಿವಕುಮಾರ ಸ್ವಾಮೀಜಿಯವರಂತೆಯೇ ಸರಳತೆಯನ್ನು ಹೊಂದಿರುವ ಸಿದ್ದಲಿಂಗ ಶ್ರೀಗಳ ಬಳಿಗೆ ಈಗ ಹಸುವೊಂದು ಓಡೋಡಿ ಬಂದಿರುವ ವಿಡಿಯೊ ಈಗ ಎಲ್ಲೆಡೆ ಸುದ್ದಿಯಾಗಿದೆ.

ಶ್ರೀಗಳ ಕಂಡು ಓಡೋಡಿ ಬಂದ ಪುಣ್ಯಕೋಟಿ

Exit mobile version