Site icon Vistara News

ರಾಯರ ಸನ್ನಿಧಿಯಲ್ಲಿ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ವರ್ಧಂತಿ ಮಹೋತ್ಸವ

ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರಿಂದ ವರ್ಧಂತಿ ಮಹೋತ್ಸವ ಇಂದು ಶಾಸ್ತ್ರೋಕ್ತವಾಗಿ ನೆರವೇರಿತು.

ಈ ವೇಳೆ ಶಾಲು ಹಾರ, ಫಲಹಾರ ನೀಡಿದ ಮಠದ ಇತರೆ ಕಿರಿ ಸ್ವಾಮೀಜಿಗಳು ಹಾಗೂ ಭಕ್ತರು ಸುಭುದೇಂದ್ರ ತೀರ್ಥರನ್ನು ಸನ್ಮಾನಿಸಿದರು. ಪುಷ್ಪ ಅಭಿಷೇಕ ಬಳಿಕ ಭಕ್ತರು ಸ್ವಾಮೀಜಿಗಳ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

ಇದಕ್ಕೂ ಮುನ್ನ ರಾಘವೇಂದ್ರ ಸ್ವಾಮಿಗಳ 427ನೇ ವರ್ಧಂತಿ ಮಹೋತ್ಸವ ಹಿನ್ನೆಲೆಯಲ್ಲಿ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿತು. ರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಶ್ರೀಮಠದಲ್ಲಿ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣ ಅಷ್ಟಾಕ್ಷರಿ ಮತ್ತು ಗುರುರಾಯರ ಸೋತ್ರ, ಕವಚ ಪರಾಯಣ ನಡೆಯಿತು.

ರಾಯರ ಸನ್ನಿಧಿಗೆ ತಿರುಮಲ ತಿರುಪತಿ ದೇವಸ್ಥಾನದಿಂದ ತಂದಿದ್ದ ಶೇಷವಸ್ತ್ರವನ್ನು ವಿಶೇಷ ಪೂಜೆ ಬಳಿಕ ಸಮರ್ಪಣೆ ಮಾಡಲಾಯಿತು. ಮಠದ ಆವರಣದಲ್ಲಿ ನಡೆದ ಚಿನ್ನದ ರಥೋತ್ಸವದಲ್ಲಿ ಪ್ರಹ್ಲಾದ ರಾಜರ ಮೂರ್ತಿ ಇಟ್ಟು ಮೆರವಣಿಗೆ ನಡೆಸಲಾಯಿತು.

ಉತ್ಸವ ಮೂರ್ತಿಯನ್ನು ಕಣ್ತುಂಬಿಕೊಂಡ ಭಕ್ತರಿಂದ ಹರ್ಷೋದ್ಘಾರಗಳು ಮೊಳಗಿತು. ಪ್ರತಿ ವರ್ಷದಂತೆ ಈ ವರ್ಷವೂ ಚೆನ್ನೈನ ನಾದಾಹಾರ ಟ್ರಸ್ಟ್ ವತಿಯಿಂದ 150 ಸಂಗೀತಗಾರರಿಂದ ಏಕಕಾಲಕ್ಕೆ ಗಾಯನ ಕಾರ್ಯಕ್ರಮವೂ ನಡೆಯುತ್ತಿದೆ.

Exit mobile version