ತುಮಕೂರು: ವಿಸ್ತಾರ ಮೀಡಿಯಾದ ಬಹು ನಿರೀಕ್ಷಿತ ಟಿವಿ ಚಾನೆಲ್ ಉದ್ಘಾಟನೆ ಸಮಾರಂಭಕ್ಕೆ ತುಮಕೂರಿನ ರಾಮಕೃಷ್ಣ- ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿಯವರನ್ನು ಭಾನುವಾರ ಭಕ್ತಿಯಿಂದ ಆಹ್ವಾನಿಸಲಾಯಿತು.
ವಿಸ್ತಾರ ಮೀಡಿಯಾದ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ತುಮಕೂರಿನ ಶಾಂತಿನಗರದಲ್ಲಿರುವ ಆಶ್ರಮಕ್ಕೆ ಭೇಟಿ ನೀಡಿ ಆಹ್ವಾನ ಪತ್ರಿಕೆ ನೀಡಿದರು. ಟಿವಿ ಚಾನೆಲ್ನ ರೂಪುರೇಷೆ ಮತ್ತು ವಿಭಿನ್ನವಾಗಿ ನಡೆಯಲಿರುವ ಉದ್ಘಾಟನಾ ಸಮಾರಂಭದ ಮಾಹಿತಿಯನ್ನು ಅವರು ಸ್ವಾಮೀಜಿಗಳಿಗೆ ವಿವರಿಸಿದರು. ಸ್ವಾಮೀಜಿಗಳು ಈಗಾಗಲೇ ವಿಸ್ತಾರ ಮೀಡಿಯಾದ ʻವಿಸ್ತಾರ ಓಂಕಾರʼ ಧಾರ್ಮಿಕ ಯೂ ಟ್ಯೂಬ್ ಚಾನೆಲನ್ನು ಲೋಕಾರ್ಪಣೆ ಮಾಡಿದ್ದು, ಅದು ಚೆನ್ನಾಗಿ ಮೂಡಿಬರುತ್ತಿದೆ ಎಂದು ಸಂತಸ ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಠದ ಸ್ವಾಮಿ ಧೀರಾನಂದ ಮಹಾರಾಜ್ ಮತ್ತು ಸ್ವಾಮಿ ಪರಮಾನಂದಜೀ ಅವರೂ ಉಪಸ್ಥಿತರಿದ್ದು ಆಶೀರ್ವದಿಸಿದರು.
ಟಿವಿ ಚಾನೆಲ್ಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನವೆಂಬರ್ ೬ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದ ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಿ…
ಇದನ್ನೂ ಓದಿ | ವಿಸ್ತಾರ ನ್ಯೂಸ್ ಚಾನೆಲ್ ಉದ್ಘಾಟನೆ ಆಮಂತ್ರಣಪತ್ರ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ