ಬೆಂಗಳೂರು: 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ ಅಂತಿಮ ವೇಳಾಪಟ್ಟಿಯನ್ನು (SSLC Exam 2023) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬಿಡುಗಡೆ ಮಾಡಿದೆ. ವೇಳಾಪಟ್ಟಿಯಂತೆ ಮಾರ್ಚ್ 31 ರಿಂದ ಏಪ್ರಿಲ್ 15 ರವರೆಗೆ ಮುಖ್ಯ ಪರೀಕ್ಷೆ ನಡೆಯಲಿದೆ. ಆದರೆ, ಮಹಾವೀರ ಜಯಂತಿ ಹಿನ್ನೆಲೆಯಲ್ಲಿ ಏಪ್ರಿಲ್ 4ರಂದು ನಿರ್ಧಾರವಾಗಿದ್ದ ಗಣಿತ ಹಾಗೂ ಸಮಾಜ ಶಾಸ್ತ್ರ ಪರೀಕ್ಷೆ ಒಂದು ದಿನ ಮುಂಚಿತವಾಗಿ, ಅಂದರೆ ಏಪ್ರಿಲ್ ೩ರಂದು ನಡೆಯಲಿವೆ.
ದಿನಾಂಕ | ವಿಷಯ | ಸಮಯ |
---|---|---|
31-03-2023 (ಶುಕ್ರವಾರ) | ಪ್ರಥಮ ಭಾಷೆ ಕನ್ನಡ ಇಂಗ್ಲಿಷ್ ಸಂಸ್ಕೃತ | ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45 |
03-04-2023 (ಸೋಮವಾರ) | ಗಣಿತ ಸಮಾಜ ಶಾಸ್ತ್ರ | ಬೆಳಗ್ಗೆ 10.30 ರಿಂದ ಮ.1.45 |
06-04-2023 (ಗುರುವಾರ) | ದ್ವಿತೀಯ ಭಾಷೆ ಇಂಗ್ಲಿಷ್ ಕನ್ನಡ | ಬೆಳಗ್ಗೆ 10.30 ರಿಂದ ಮ. 1.30 |
08-04-2023 (ಶನಿವಾರ) | ಅರ್ಥಶಾಸ್ತ್ರ | ಬೆಳಗ್ಗೆ 10.30 ರಿಂದ ಮ. 1.45 |
10-04-2023 (ಸೋಮವಾರ) | ವಿಜ್ಞಾನ ರಾಜ್ಯಶಾಸ್ತ್ರ | ಬೆಳಗ್ಗೆ 10.30 ರಿಂದ ಮ. 1.45 |
12-04-2023 (ಬುಧವಾರ) | ತೃತೀಯ ಭಾಷೆ ಇಂಗ್ಲಿಷ್ ಹಿಂದಿ ಕನ್ನಡ ಸಂಸ್ಕೃತ | ಬೆಳಗ್ಗೆ 10.30 ರಿಂದ 1.30 |
15-04-2023 (ಶನಿವಾರ) | ಸಮಾಜ ವಿಜ್ಞಾನ | ( ಬೆಳಗ್ಗೆ 10.30 ರಿಂದ 1.45) |
ಇದನ್ನೂ ಓದಿ | SSLC Model Paper 2022-23 | ಮಾದರಿ ಪ್ರಶ್ನೆ ಪತ್ರಿಕೆ ಸಿಕ್ಕಿಲ್ಲವೇ? ಹೊಸ ವೆಬ್‌ಸೈಟ್ ನೋಡಿ