Site icon Vistara News

SSLC Exam 2023: ಕಲಬುರಗಿಯಲ್ಲಿ ಎಸ್ಎಸ್ಎಲ್‌ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ; ವಾಟ್ಸಾಪ್‌ನಲ್ಲಿ ಹರಿದಾಡಿದ ಕನ್ನಡ ಪೇಪರ್‌

Question paper leak

Question paper leak

ಕಲಬುರಗಿ: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು (SSLC Exam 2023) ಶುರುವಾಗಿದ್ದು, ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ನಡೆಯುತ್ತಿದೆ. ಇತ್ತ ಕಲಬುರಗಿಯಲ್ಲಿ ಎಸ್ಎಸ್ಎಲ್‌ಸಿ ಪ್ರಶ್ನೆಪತ್ರಿಕೆಯ ಪ್ರಥಮ ಭಾಷೆ ಕನ್ನಡದ ಪ್ರಶ್ನೆಪತ್ರಿಕೆಯು (Question paper leak) ಸೋರಿಕೆ ಆಗಿರುವ ಶಂಕೆ ವ್ಯಕ್ತವಾಗಿದೆ.

ಪ್ರಥಮ ಭಾಷೆ ಕನ್ನಡದ ಪ್ರಶ್ನೆ ಪತ್ರಿಕೆ ಸೋರಿಕೆ

ಪ್ರಥಮ ಭಾಷೆ ಕನ್ನಡ ಪ್ರಶ್ನೆ ಪತ್ರಿಕೆಯ ಫೋಟೊ ತೆಗೆದು ಕಿಡಿಗೇಡಿಗಳು ವೈರಲ್ ಮಾಡಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದು, ಕಿಡಿಗೇಡಿಗಳ ಹುಡುಕಾಟ ನಡೆಸುತ್ತಿದ್ದಾರೆ. ಪರೀಕ್ಷೆ ಆರಂಭವಾದ ಕೆಲವೇ ಕ್ಷಣದಲ್ಲಿ ಪ್ರಶ್ನೆ ಪತ್ರಿಕೆ ವೈರಲ್‌ ಆಗಿದ್ದು, ಸೋರಿಕೆ ಆಗಿರುವ ಶಂಕೆ ವ್ಯಕ್ತವಾಗಿದೆ.

ಮೂಲಭೂತ ಸೌಕರ್ಯವಿಲ್ಲದೆ ಪರದಾಡಿದ ಪರೀಕ್ಷಾರ್ಥಿಗಳು

ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಾ.31ರಿಂದ ಶುರುವಾಗಿದ್ದು, ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳು ಹಾಲ್‌ ಟಿಕೆಟ್‌ ಸೇರಿದಂತೆ ಮೂಲಭೂತ ಸೌಕಾರ್ಯವಿಲ್ಲದೆ ಪರದಾಡಬೇಕಾಯಿತು.

ವಿಜಯಪುರದ ಮನಗೂಳಿ ಅಗಸಿ ಬಳಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿರುವ ಪರೀಕ್ಷಾ ಕೇಂದ್ರವು ಅಸ್ತವ್ಯಸ್ತವಾಗಿದ್ದವು. ಪರೀಕ್ಷಾರ್ಥಿಗಳಿಗೆ ಕೂರಲು ಸೂಕ್ತ ಬೆಂಚ್ ಇಲ್ಲದೇ ಪರದಾಡಬೇಕಾಯಿತು. ಪರೀಕ್ಷಾ ಕೊಠಡಿಗಳಲ್ಲಿ ಲೈಟ್ ಹಾಗೂ ಫ್ಯಾನ್ ವ್ಯವಸ್ಥೆಯಾಗಲಿ, ಕುಡಿಯುವ ನೀರಿನ ವ್ಯವಸ್ಥೆಯು ಇಲ್ಲದೆ ಇರುವುದು ಕಂಡು ಬಂತು. ಮಾತ್ರವಲ್ಲದೆ ಶೌಚಾಲಯವೂ ಇಲ್ಲದೇ ವಿದ್ಯಾರ್ಥಿನಿಯರು ಮುಜುಗರಕ್ಕೆ ಒಳಗಾದರು.

ಈ ಸಂಬಂಧ ಪರೀಕ್ಷಾ ಮೇಲ್ವೀಚಾರಕರ ಗಮನಕ್ಕೆ ಬಂದರೂ ಬೇಜವಾಬ್ದಾರಿಯ ಉತ್ತರ ನೀಡಿದ್ದು, ಪೋಷಕರನ್ನು ಕೆರಳಿಸಿತ್ತು. ಇತ್ತ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರೀಕ್ಷಾ ಮೇಲ್ವೀಚಾರಕರು ಹಾಗೂ ಇತರ ಸಿಬ್ಬಂದಿ ಮೇಲೆ ಗರಂ ಆದರು.

ಇದನ್ನೂ ಓದಿ: SSLC Exam 2023: ಆರಂಭಗೊಂಡ SSLC ಎಕ್ಸಾಂ; ಈ ವರ್ಷವೂ ಶೇ.10 ರಷ್ಟು ಗ್ರೇಸ್‌ ಮಾರ್ಕ್ಸ್ ಉಂಟು!

ಕೂಡಲೇ ಇಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆದೇಶ ಮಾಡಿದರು. ಮುಂದಿನ ಪರೀಕ್ಷೆಯೊಳಗೆ ಸಮಸ್ಯೆ ಬಗೆಹರಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡುವುದಾಗಿ ಭರವಸೆ ನೀಡಿದರು.

Exit mobile version