ಬೆಂಗಳೂರು: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ (SSLC Result) ಪ್ರಕಟಗೊಂಡಿದ್ದು, ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ರಾಜ್ಯಕ್ಕೆ ಚಿತ್ರದುರ್ಗ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದರೆ, ಎರಡನೇ ಸ್ಥಾನವನ್ನು ಮಂಡ್ಯ ಹಾಗೂ ಕೊನೆಯ ಸ್ಥಾನವನ್ನು ಯಾದಗಿರಿ ಪಡೆದುಕೊಂಡಿದೆ.
ಪ್ರತಿ ವರ್ಷ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಮೊದಲ ಎರಡು ಸ್ಥಾನಗಳನ್ನು ಪಡೆದುಕೊಳ್ಳುತ್ತಿದ್ದವು. ಆದರೆ, ಈ ಬಾರಿ ಉತ್ತರ ಕನ್ನಡ ಶೇಕಡಾ 90.53ರಷ್ಟು ಪಡೆದು 13ನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ಉಡುಪಿ ಶೇಕಡಾ 89.49ರಷ್ಟನ್ನು ಗಳಿಸಿ 18ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಮಾರ್ಚ್ 31ರಿಂದ ಏಪ್ರಿಲ್ 15ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಡೆದಿತ್ತು.
ಜಿಲ್ಲೆಗಳ ಶೇಕಡಾವಾರು ಫಲಿತಾಂಶ ಇಂತಿದೆ
1) ಚಿತ್ರದುರ್ಗ-96.8
2) ಮಂಡ್ಯ- 96.74
3) ಹಾಸನ- 96.68
4) ಬೆಂಗಳೂರು ಗ್ರಾಮಾಂತರ- 96.48
5) ಚಿಕ್ಕಬಳ್ಳಾಪುರ-96.15
6) ಕೋಲಾರ- 94.6
7) ಚಾಮರಾಜನಗರ- 94.37
8) ಮಧುಗಿರಿ- 93-23
9) ಕೊಡಗು- 93.19
10) ವಿಜಯನಗರ- 91.41
11) ವಿಜಯಪುರ-91.23
12) ಚಿಕ್ಕೋಡಿ-91.07
13) ಉತ್ತರ ಕನ್ನಡ- 90.53
14) ದಾವಣಗೆರೆ- 90.43
15) ಕೊಪ್ಪಳ- 90.27
16) ಮೈಸೂರು-89.75
17) ಚಿಕ್ಕಮಗಳೂರು-89.69
18) ಉಡುಪಿ-89.49
19) ದಕ್ಷಿಣ ಕನ್ನಡ-89.47
20) ತುಮಕೂರು-89.43
21) ರಾಮನಗರ-89.42
22) ಹಾವೇರಿ-89.11
23) ಶಿರಸಿ-87.39
24) ಧಾರವಾಡ-86.55
25) ಗದಗ-86.51
26) ಬೆಳಗಾವಿ-85.85
27) ಬಾಗಲಕೋಟೆ-85.14
28) ಕಲಬುರಗಿ-84.51
29) ಶಿವಮೊಗ್ಗ-84.04
30) ರಾಯಚೂರು- 84.02
31) ಬಳ್ಳಾರಿ-81.54
32) ಬೆಂಗಳೂರು ಉತ್ತರ-80.93
33) ಬೆಂಗಳೂರು ದಕ್ಷಿಣ-78.95
34) ಬೀದರ್-78.73
35) ಯಾದಗಿರಿ- 75.49