Site icon Vistara News

Student missing | 10ನೇ ತರಗತಿ ವಿದ್ಯಾರ್ಥಿ ನಿಗೂಢ ಕಣ್ಮರೆ: ಕೇಕ್‌, ಕೂಲ್‌ ಡ್ರಿಂಕ್ಸ್‌ ತಂದಿದ್ದನ್ನು ಪ್ರಶ್ನಿಸಿದ್ದ ಶಿಕ್ಷಕರು

Puneet student missing

ಬೆಂಗಳೂರು: ಶಾಲಾ ವಿದ್ಯಾರ್ಥಿಗಳು ಸಣ್ಣ ಪುಟ್ಟ ಕಾರಣಕ್ಕಾಗಿ ಗಲಿಬಿಲಿಗೊಳ್ಳುವ, ಆತಂಕಕ್ಕೊಳಗಾಗುವ, ಅತಿರೇಕದ ನಿರ್ಧಾರಕ್ಕೆ ಬೀಳುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಶಿಕ್ಷಕರು ಮತ್ತು ಹೆತ್ತವರು ಪರಿಸ್ಥಿತಿಗಳನ್ನು ಇನ್ನಷ್ಟು ಸೂಕ್ಷ್ಮವಾಗಿ ನಿಭಾಯಿಸಬೇಕಾದ ಅನಿವಾರ್ಯತೆಯನ್ನು ಇತ್ತೀಚೆಗೆ ನಡೆದ ಕೆಲವು ನಾಪತ್ತೆ ಮತ್ತು ಆತ್ಮಹತ್ಯೆ ಘಟನೆಗಳು ದೃಢೀಕರಿಸಿವೆ. ಇಂಥ ಪರಿಸ್ಥಿತಿಯಲ್ಲೇ ಬೆಂಗಳೂರಿನ ಖಾಸಗಿ ಶಾಲೆಯ ವಿದ್ಯಾರ್ಥಿಯೊಬ್ಬ ನಾಪತ್ತೆ (Student missing) ಯಾಗಿದ್ದಾನೆ.

ಬೆಂಗಳೂರಿನ ನಾಗರಭಾವಿಯಲ್ಲಿರುವ ಸೈಂಟ್‌ ಸೋಫಿಯಾ ಕಾನ್ವೆಂಟ್ ಹೈಸ್ಕೂಲ್‌ನ ೧೦ನೇ ತರಗತಿ ವಿದ್ಯಾರ್ಥಿಯೊಬ್ಬ ಕಣ್ಮರೆಯಾಗಿದ್ದಾನೆ. ಪುನೀತ್‌ ಎಂಬ ಈ ಹುಡುಗ ಸೋಮವಾರ ಸಂಜೆಯಿಂದಲೇ ನಾಪತ್ತೆಯಾಗಿದ್ದು, ಎಷ್ಟು ಹುಡುಕಿದರೂ ಸಿಕ್ಕಿಲ್ಲ.

ಆತಂಕದಲ್ಲಿರುವ ಪೋಷಕರು ಕಣ್ಣೀರು ಹಾಕುತ್ತಲೇ ಹಲವೆಡೆ ಹುಡುಕಾಟ ನಡೆಸಿದ್ದಾರೆ. ಈ ನಡುವೆ ವಿದ್ಯಾರ್ಥಿ ನಾಪತ್ತೆಯ ಬಗ್ಗೆ ಶಾಲಾ ಆಡಳಿತ ಮಂಡಳಿ ಯಾವುದೇ ಸ್ಪಷ್ಟನೆ ನೀಡುತ್ತಿಲ್ಲ ಎಂದು ಮನೆಯವರು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪುನೀತ್‌ ಶಾಲೆಯಿಂದ ಹೊರಟು ಮನೆಗೆ ಹೋಗಲು ಬಸ್ಸು ಹತ್ತುತ್ತಿರುವ ದೃಶ್ಯ

ಎಲ್ಲಿ ಹೋಗಿದ್ದಾನೆ?
ಈ ಹುಡುಗ ಸೋಮವಾರ ಸಂಜೆ ಶಾಲೆಯಿಂದ ಹೊರಬಂದಿರುವುದು, ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಅದರೆ, ಆತ ಮನೆಗೆ ತಲುಪಿಲ್ಲ.

ಶಾಲೆಯಲ್ಲಿ ಏನಾಗಿತ್ತು?
ಈ ನಡುವೆ, ಶಾಲೆಯಲ್ಲಿ ನಡೆದ ಘಟನಾವಳಿಗಳ ಬಗ್ಗೆಯೂ ಪೊಲೀಸರು ಗಮನಿಸಿದ್ದಾರೆ. ಸೋಮವಾರ ಪುನೀತ್‌ ಶಾಲೆಯ ಬ್ಯಾಗ್‌ನಲ್ಲಿ ಕೂಲ್‌ ಡ್ರಿಂಕ್ಸ್‌ ಬಾಟಲಿ ತೆಗೆದುಕೊಂಡು ಹೋಗಿದ್ದ. ಜತೆಯಲ್ಲಿ ಬ್ಯಾಗ್‌ನಲ್ಲಿ ಕೇಕ್‌ ಕೂಡಾ ಇತ್ತು ಎಂದು ಹೇಳಲಾಗಿದೆ. ಇದನ್ನು ಶಿಕ್ಷಕರು ವಿಚಾರಿಸಿದ್ದರು. ಶಾಲೆಯಲ್ಲಿ ತುಂಬಾ ಆಕ್ಟಿವ್‌ ಆಗಿದ್ದ ಈತ ಕೂಲ್‌ ಡ್ರಿಂಕ್ಸ್‌ ತಂದ ಎನ್ನುವುದು ಸ್ಪಷ್ಟವಿಲ್ಲ. ಶಾಲೆಯಿಂದ ಸಂಜೆ ಪುನೀತ್‌ ಒಬ್ಬನೇ ಹೊರ ಹೋಗಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Student missing | ತುಮಕೂರು ಸಿದ್ದಗಂಗಾ ಮಠದಲ್ಲಿದ್ದ 10ನೇ ತರಗತಿ ವಿದ್ಯಾರ್ಥಿ ನಾಪತ್ತೆ

Exit mobile version