Site icon Vistara News

Mangalore News: ಸಂತ ಜೆರೊಸಾ ಶಾಲೆ ಘಟನೆ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಶಿಕ್ಷಕಿ ವಜಾ

St Sebastians School teacher sacked

ಮಂಗಳೂರು: ಸಂತ ಜೆರೊಸಾ ಶಾಲೆಯ ಘಟನೆ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಶಿಕ್ಷಕಿಯನ್ನು ವಜಾ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ತೊಕ್ಕೊಟ್ಟುವಿನ ಸಂತ ಸೆಬಾಸ್ಟಿಯನ್ ಶಾಲೆಯ ಶಿಕ್ಷಕಿಯನ್ನು ಶಾಲಾ ಆಡಳಿತ ಮಂಡಳಿ ವಜಾ ಮಾಡಿದೆ.

ಹಿಂದು ಧರ್ಮ ಹಾಗೂ ಶ್ರೀರಾಮನ ಅವಹೇಳನ ಮಾಡಿದ್ದ ಸಂತ ಜೆರೊಸಾ ಶಾಲೆ ಶಿಕ್ಷಕಿ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿದ್ದರಿಂದ ಇತ್ತೀಚೆಗೆ ಅವರನ್ನು ಅಮಾನತು ಮಾಡಲಾಗಿತ್ತು. ಈ ಘಟನೆ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರಿಂದ ಇದೀಗ, ಸಂತ ಸೆಬಾಸ್ಟಿಯನ್ ಶಾಲೆಯ ಶಿಕ್ಷಕಿ ಕವಿತಾ ಎಂಬುವವರನ್ನು ವಜಾಗೊಳಿಸಲಾಗಿದೆ.

ಕವಿತಾ ಅವರ ಮಗಳು ಸಂತ ಜೆರೊಸಾ ಶಾಲೆಯ ವಿದ್ಯಾರ್ಥಿನಿ. ಫೆ.10ರಂದು ಡಿಡಿಪಿಐ ಕಚೇರಿಗೆ ಬಂದಿದ್ದ ಶಿಕ್ಷಕಿ ಕವಿತಾ, ಘಟನೆ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದರು. ಅವರು ಮಾತನಾಡಿದ ವಿಡಿಯೊ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಅಷ್ಟಕ್ಕೇ ಶಿಕ್ಷಕಿ ಹುದ್ದೆಯಿಂದಲೇ ಕವಿತಾರನ್ನು ಆಡಳಿತ ಮಂಡಳಿ ವಜಾಗೊಳಿಸಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ | Mangalore Issue : ಶಿಕ್ಷಕಿ ಪ್ರಕರಣಕ್ಕೆ ಟ್ವಿಸ್ಟ್‌; ಬಿಜೆಪಿ ಶಾಸಕರ ಮೇಲೆ ಜೆರೋಸಾ ಶಾಲೆ ಚಾರ್ಜ್‌ಶೀಟ್‌

ಶಿಕ್ಷಕಿಗೆ ಬೆದರಿಕೆ ಕರೆ

ತೊಕ್ಕೊಟ್ಟುವಿನ ಸಂತ ಸೆಬಾಸ್ಟಿಯನ್ ಶಾಲೆಯಲ್ಲಿ ಕವಿತಾ ಪ್ರಾಥಮಿಕ ತರಗತಿ ಶಿಕ್ಷಕಿಯಾಗಿದ್ದಾರೆ. ನಿಮ್ಮ ಸೇವೆ ಇನ್ನು ಅಗತ್ಯ ಇಲ್ಲ ಎಂದು ಅವರಿಗೆ ಶಾಲೆಯಿಂದ ಗೇಟ್ ಪಾಸ್ ನೀಡಲಾಗಿದೆ. ಆ ಬಳಿಕ ಕವಿತಾ ಅವರ ಮೊಬೈಲ್‌ಗೆ ವಿದೇಶದಿಂದ ನಿರಂತರ ಬೆದರಿಕೆ ಕರೆಗಳು ಬಂದಿದ್ದು, ಅವ್ಯಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಗೆ ಶಿಕ್ಷಕಿ ದೂರು ನೀಡಿದ್ದಾರೆ.

Exit mobile version